ಕನ್ನಡಪ್ರಭಮನೇಲೇ ಕೂತು ಆಸ್ತಿ ನೋಂದಣಿ: ಮಸೂದೆಗೆ ರಾಷ್ಟ್ರಪತಿಗಳ ಅನುಮತಿಳೂರು: ಉಪನೋಂದಣಾಧಿಕಾರಿಗಳ ಕಚೇರಿಗಳಲ್ಲಿ ಜನಸಂದಣಿ ಕಡಿಮೆ ಮಾಡುವ ಉದ್ದೇಶದ ನೋಂದಣಿ (ತಿದ್ದುಪಡಿ) ಮಸೂದೆ 2023ಕ್ಕೆ ರಾಷ್ಟ್ರಪತಿ ಗಳಿಂದ ಅನುಮೋದನೆ ದೊರೆತಿದೆ. ಉಪನೋಂದಣಾಧಿಕಾರಿಗಳ ಕಚೇರಿಗೆ ಭೇಟಿ ನೀಡದೆಯೇ ಆನ್ ಲೈನ್ ಮೂಲಕ ಡಿಜಿಟಲ್ ಸಹಿ ಇರುವ ದಾಖಲೆಗಳನ್ನು ಸಲ್ಲಿಸಿ ಆಸ್ತಿ ನೋಂದಣಿ ಮಾಡಿಕೊಳ್ಳುವ ವ್ಯವಸ್ಥೆ ಜಾರಿಗೊಳಿಸುವ ನೋಂದಣಿ (ತಿದ್ದು ಪಡಿ) ಕಾಯ್ದೆಗೆ ಕಳೆದ ಫೆಬ್ರವರಿ ವಿಧಾನಮಂಡಲ ಅಧಿವೇಶನದಲ್ಲಿ ಅನುಮೋದನೆ ನೀಡಲಾಗಿತ್ತು. ಅನಂತರ ಮಸೂದೆಯನ್ನು ರಾಜ್ಯಪಾಲರ ಅನುಮೋದನೆಗೆ ಕಳುಹಿಸಲಾಗಿತ್ತಾದರೂ, ರಾಜ್ಯಪಾಲರು ಮಸೂದೆಗೆ ಸಂಬಂ ಧಿಸಿದಂತೆ ಕೆಲ ಸಜನೆಗಳನ್ನು ನೀಡಿದ್ದರು. ಅದಕ್ಕೆ ಸ್ಪಷ್ಟನೆ ದೊರೆತ ನಂತರ ಸೆಪ್ಟೆಂ ಬರ್ನಲ್ಲಿ ಮಸೂದೆಗೆ ಅನುಮೋದನೆ ನೀಡಿದ್ದ ರಾಜ್ಯ ಪಾಲರು ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಿಕೊಟ್ಟಿದ್ದರು. ಇದೀಗ ರಾಷ್ಟ್ರಪತಿಗಳು ಅನುಮೋದನೆ ನೀಡಿದ್ದು, ಆ ಕುರಿತು ರಾಜ್ಯ ಸರ್ಕಾರ ರಾಜ್ಯ ಪತ್ರ ಪ್ರಕಟಿಸಿದೆ.BENGALURU Edition Oct 20, 2024 Page No. 06 Powered by: erelego.com