ಭಾರತದಲ್ಲಿ ಹಾರ್ಟ್ಥ್ರೋಬ್ ರಾಮ್ ಚರಣ್ ಅವರ ಅಭಿಮಾನಿಗಳ ಅಭಿಮಾನವು ಅತಿರೇಕಕ್ಕೆ ಹೋಗಿದ್ದು, ಅದು ಕಾಲೇಜಿನಲ್ಲಿ ಇಬ್ಬರು ಹುಡುಗಿಯರ ನಡುವೆ ಜಗಳಕ್ಕೆ ಕಾರಣವಾಗಿದೆ.ಟ್ವಿಟರ್ ಬಳಕೆದಾರರು ಘಟನೆಯ ದೃಶ್ಯಗಳನ್ನು ಆನ್ಲೈನ್ನಲ್ಲಿ ಹಂಚಿಕೊಂಡಿದ್ದಾರೆಇದರಲ್ಲಿ ಇಬ್ಬರು ಹುಡುಗಿಯರು ಆರ್ಆರ್ಆರ್ ನಟನ ಕುರಿತ ವಿಷಯಕ್ಕಾಗಿ ಕಿತ್ತಾಡಿದ್ದಾರೆ. ನಿಖರವಾದ ಕಾರಣವು ಅಸ್ಪಷ್ಟವಾಗಿ ಉಳಿದಿದ್ದರೂ, ಇಬ್ಬರೂ ಬಿಸಿಯಾದ ವಾದದಲ್ಲಿ ಸಿಲುಕಿಕೊಂಡಿರುವುದನ್ನು ಕಾಣಬಹುದು, ಇಬ್ಬರು ಒಬ್ಬರ ಮೇಲೊಬ್ಬರು ಹಲ್ಲೆ ಮಾಡುತ್ತಾ, ಜುಟ್ಟು ಹಿಡಿದುಕೊಂಡು ಕಿತ್ತಾಡಿದ್ದಾರೆ. ಇಬ್ಬರು ಪರಸ್ಪರ ತಳ್ಳಲು ಪ್ರಾರಂಭಿಸಿದ್ದಾರೆ. ಮೂರನೇ ಹುಡುಗಿ ಮಧ್ಯಪ್ರವೇಶಿಸಿ ಅವರನ್ನು ಬೇರ್ಪಡಿಸುವ ಮೊದಲು ಅವರು ಪರಸ್ಪರ ಕೂದಲನ್ನು ಕಿತ್ತುಕೊಳ್ಳುವುದನ್ನು ನೋಡಬಹುದು. ಅಲ್ಲಿ ನೆರೆದಿದ್ದ ವಿದ್ಯಾರ್ಥಿಗಳ ದೊಡ್ಡ ಗುಂಪು ಕಿರುಚಲು ಪ್ರಾರಂಭಿಸುತ್ತದೆ. ಕೆಲವರು ಇದರ ಮಜಾ ತೆಗೆದುಕೊಂಡು ವಿಡಿಯೋ ಮಾಡಿದ್ದು, ಅದೀಗ ವೈರಲ್ ಆಗಿದೆ.ರಾಮ್ ಚರಣ್ ಅವರ ವಿಷಯವಾಗಿ ಈ ಇಬ್ಬರು ವಿದ್ಯಾರ್ಥಿನಿಯರ ನಡುವೆ ವಾಗ್ವಾದ ನಡೆದು ಹೀಗೆ ಅತಿರೇಕಕ್ಕೆ ಹೋಗಿದೆ ಎನ್ನಲಾಗಿದೆ.