Browse

ಬಾರಿ ಐದು ಹಾಲಿ ಕಾಂಗ್ರೆಸ್ ಶಾಸಕರ ಟಿಕೆಟ್ ಕಥೆ ಏನು ಎನ್ನುವುದು ತಿಳಿದುಬಂದಿದೆ. ಈ ಹಿಂದೆ ಕುಂದಗೋಳ, ಹರಿಹರ, ಪುಲಕೇಶಿ ನಗರ,ಶಿಡ್ಲಘಟ್ಟ, ಲಿಂಗಸೂಗುರು ಟಿಕೆಟ್ ಬಾಕಿ ಇಡಲಾಗಿತ್ತು.

ಕೋಲಾರದಿಂದ ಸಿದ್ದುಗಿಲ್ಲ ಟಿಕೆಟ್! ಕಾಂಗ್ರೆಸ್ ಮೂರನೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಇದೀಗ ಕಾಂಗ್ರೆಸ್ ತನ್ನ ಮೂರನೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು ಟಿಕೆಟ್ ಯಾರಿಗೆ ಎನ್ನುವ ಕುತೂಹಲಕ್ಕೆ ತೆರೆ ಎಳೆದಿದೆ. ಈ ಮೂಲಕ ಚುನಾವಣಾ ಕಣವನ್ನು ಮತ್ತಷ್ಟು ರೋಚಕವಾಗಿದೆ. ಈಗ ಎರಡು ಪಟ್ಟಿಗಳಲ್ಲಿ ಬಾಕಿಯಾಗಿದ್ದ 43 ಕ್ಷೇತ್ರಗಳನ್ನು ಮೂರನೇ ಪಟ್ಟಿಯಲ್ಲಿ ಘೋಷಿಸಲಾಗಿದ್ದು 15 ಕ್ಷೇತ್ರಗಳು ಬಾಕಿ ಉಳಿದಿವೆ.ಈ ಬಾರಿ ಐದು ಹಾಲಿ ಕಾಂಗ್ರೆಸ್ ಶಾಸಕರ ಟಿಕೆಟ್ ಕಥೆ ಏನು ಎನ್ನುವುದು ತಿಳಿದುಬಂದಿದೆ. ಈ ಹಿಂದೆ ಕುಂದಗೋಳ, ಹರಿಹರ, ಪುಲಕೇಶಿ ನಗರ,ಶಿಡ್ಲಘಟ್ಟ, ಲಿಂಗಸೂಗುರು ಟಿಕೆಟ್ ಬಾಕಿ ಇಡಲಾಗಿತ್ತು. ಈ ಸಂಬಂಧಿತ ಕಾಂಗ್ರೆಸ್ ನಿರ್ಧಾರ ಈಗ ಹೊರಬಿದ್ದಿದೆ.ಕುಂದಗೋಳದಲ್ಲಿ ಇದೀಗ ಹಾಲಿ ಹಾಲಿ ಶಾಸಕಿ ಕುಸುಮಾ ಶಿವಳ್ಳಿಗೆ ಟಿಕೆಟ್ ನೀಡಲಾಗಿದೆ. ಅದಲ್ಲದೇ ಅಥಣಿ ಕ್ಷೇತ್ರಕ್ಕೆ ಬಿಜೆಪಿಯಿಂದ ಹಾರಿದ್ದ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿಗೆ ಟಿಕೆಟ್ ನೀಡಲಾಗಿದೆ. ಕೋಲಾರಕ್ಕೆ ಕೊತ್ತನೂರು ಮಂಜುನಾಥ್ ಅವರಿಗೆ ಟಿಕೆಟ್ ನೀಡಲಾಗಿದ್ದು ಮತ್ತೆ ನಾಲ್ಕು ಶಾಸಕರ ಹಾಲಿ ಕ್ಷೇತ್ರಗಳು ಖಾಲಿ ಉಳಿದಿವೆ. ಅದಲ್ಲದೇ ಸಿದ್ದರಾಮಯ್ಯಗೆ ಕೋಲಾರದಿಂದ ಟಿಕೆಟ್ ನೀಡಲಾಗಿಲ್ಲ.

Share with friends