Browse

ಮಹಿಳೆಯರ ಉಚಿತ ಬಸ್‌ ಪ್ರಯಾಣ ಬಂದ್: ಮಹತ್ವದ ಮಾಹಿತಿ ಕೊಟ್ಟ ಸಚಿವ ಪರಮೇಶ್ವರ್‌

ಪತ್ನಿ ಸಮೇತವಾಗಿ ಹಾಸನಾಂಬೆ ದೇವಿ ದರ್ಶನ ಮಾಡಿದ್ದೇನೆ. ವಿಶೇಷವಾಗಿ ಪ್ರಾರ್ಥನೆ ಮಾಡಿದ್ದೇನೆ ಅದನ್ನು ನಿಮಗೆ ಹೇಳುವ ಹಾಗಿಲ್ಲ. ಈ ನಾಡಿನ ಜನ ಸಮುದಾಯಕ್ಕೆ ನಮ್ಮ ಕರ್ನಾಟಕಕ್ಕೆ, ಭರತ ಖಂಡಕ್ಕೆ ಶಾಂತಿಯನ್ನು ಕೊಡು ತಾಯಿ ಎಂದು ಕೇಳಿದ್ದೇನೆ. ವೈಯುಕ್ತಿಕವಾಗಿ ನಮ್ಮ ನಮ್ಮದು ಕೇಳಿದ್ದೇವೆ.

ನಾನು ನನ್ನ ಪತ್ನಿ ಜೊತೆಯಾಗಿ ನಾವು ಸ್ವಲ್ಪ ಬೇರೆ ಏನು ಕೇಳಿದ್ದೇವೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಶಕ್ತಿ ಯೋಜನೆ ಪರಿಷ್ಕರಣೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಗುರುವಾರ) ಹಾಸನಾಂಬೆ ದೇವಿ ದರ್ಶನ ಪಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಗೃಹ ಸಚಿವ ಜಿ.ಪರಮೇಶ್ವರ್, ಪ್ರಣಾಳಿಕೆ ಬರೆದವನೇ ನಾನು. ಪ್ರಣಾಳಿಕೆಯಲ್ಲಿ ಐದು ಗ್ಯಾರೆಂಟಿಗಳನ್ನ ಐದು ವರ್ಷವೂ ಕೂಡ ಅನುಷ್ಠಾನ ಮಾಡ್ತೀವಿ ಅಂಥ ಹೇಳಿದ್ದೇವೆ. ಅನೇಕ ಸಂದರ್ಭದಲ್ಲಿ ವಿರೋಧ ಪಕ್ಷದವರು ಗ್ಯಾರೆಂಟಿ ನಿಲ್ಲಿಸುತ್ತಾರೆ ಅಂತ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳು, ನಾವು ಸ್ಪಷ್ಟನೆ ನೀಡಿದ್ದೇವೆ. ಯಾವುದೇ ಕಾರಣಕ್ಕೂ ನಾವು ನಿಲ್ಲಿಸುವುದಿಲ್ಲ. ಯಾವುದೇ ಗ್ಯಾರೆಂಟಿಗಳನ್ನು ನಿಲ್ಲಿಸುವುದಿಲ್ಲ ಎಂಬ ಮಾತನ್ನು ಹೇಳಿದ್ದೇವೆ ಎಂದು ತಿಳಿಸಿದ್ದಾರೆ.

Share with friends