Browse

ಲಾಠಿ ಹಿಡಿದು ಜನರ ರಕ್ಷಣೆಗೆ ಸಜ್ಜಾದ ಕೊಪ್ಪಳದ ಮಂಗಳಮುಖಿ

ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ತೊಂಡಿಹಾಳ ಗ್ರಾಮದ ಮಂಗಳಮುಖಿ ಮಧುಶ್ರೀ ಅವರು ಪೊಲೀಸ್ ಪೇದೆಯಾಗಿ ಆಯ್ಕೆಯಾಗಿದ್ದಾರೆ. ಕಠಿಣ ಪರಿಶ್ರಮದಿಂದ ಈ ಸಾಧನೆ ಮಾಡಿದ್ದಾರೆ. ಇದು ಇತರೆ ಮಂಗಳಮುಖಿಯರಿಗೆ ಸ್ಪೂರ್ತಿಯಾಗಿದ್ದಾರೆ. ಸರ್ಕಾರ ಎಲ್ಲಾ ಇಲಾಖೆಗಳಲ್ಲಿಯೂ ಈ ರೀತಿಯ ಮೀಸಲಾತಿ ನೀಡಲು ಎಂದು ಹೇಳಿದ್ದಾರೆ.

ಕೊಪ್ಪಳ, ಅಕ್ಟೋಬರ್ 29: ಸ್ವಾವಲಂಬಿಗಳಾಗಿ ಛಲದಿಂದ ಬದುಕುಕಟ್ಟಿಕೊಂಡಿರುವ ಸಾಕಷ್ಟು ಮಂಗಳಮುಖಿಯರನ್ನು ನಾವು ನೋಡಿದ್ದೇವೆ. ಯಾವುದೇ ರೀತಿಯ ತಪ್ಪು ದಾರಿ ತುಳಿಯದೇ ಮಾದರಿಯಾಗಿರುವ ಮಂಗಳಮುಖಿಯರು (transgender) ನಮ್ಮ ನಡುವೆಯೇ ಇದ್ದಾರೆ. ಇದೀಗ ಇವರ ಸಾಲಿಗೆ ಕೊಪ್ಪಳದ ಮಂಗಳಮುಖಿ ಒಬ್ಬರು ಸೇರ್ಪಡೆ ಆಗುತ್ತಾರೆ.ಪೊಲೀಸ್ ಇಲಾಖೆಯಲ್ಲಿ ಇನ್ಮುಂದೆ ಮಂಗಳಮುಖಿರ ಹವಾ

ಹೌದು.. ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ತೊಂಡಿಹಾಳ ಗ್ರಾಮದ ಮಂಗಳಮುಖಿ ಮಧುಶ್ರೀ ಅವರು ಪೊಲೀಸ್ ಪೇದೆಯಾಗಿ ಆಯ್ಕೆಯಾಗಿದ್ದಾರೆ. ಕೆಲವೇ ದಿನಗಳಲ್ಲಿ ಕೈಯಲ್ಲಿ ಲಾಠಿ ಹಿಡಿದು ಜನರ ರಕ್ಷಣೆ ಮಾಡಲಿದ್ದಾರೆ. ಆ ಮೂಲಕ ಪೊಲೀಸ್ ಇಲಾಖೆಯಲ್ಲಿ ಇನ್ಮುಂದೆ ಮಂಗಳಮುಖಿರ ಹವಾ ಕಾಣಬಹುದಾಗಿದೆ.

Share with friends