ಸುದ್ದಿಸಚಿವರಾಗಿ ಎಸ್.ಎಸ್.ಎಂ ಪ್ರಮಾಣವಚನ safgroupPosted on May 27, 2023 Saf news job education No Comments ದಾವಣಗೆರೆ :ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಸಂಪುಟದಲ್ಲಿ ನೂತನವಾಗಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್.ಎಸ್ ಮಲ್ಲಿಕಾರ್ಜುನ್ ತಮ್ಮ ರಾಜಕೀಯ ಅಜ್ಞಾತವಾಸದಿಂದ ಮರಳಿದ್ದು, ಇದರಿಂದ ಅವರಿಗಿಂತ ಜಿಲ್ಲೆಯ ಬಡವರು, ಯುವಕರು ಹಾಗೂ ಮಹಿಳೆಯರಿಗೆ ಹೆಚ್ಚಿನ ಆಶಾಭಾವನೆ ಬಂದಂತಾಗಿದೆ.ಸುಮಾರು 20 ವರ್ಷಗಳಿಂದ ನಗರದಲ್ಲಿ ಆಶ್ರಯ ಮನೆಗಳೇ ನಿರ್ಮಿಸದೇ ಇರುವುದರಿಂದ ಸ್ವಂತಸೂರಿಲ್ಲದೆ ಪರಿತಪಿಸುತ್ತಿದ್ದ ಬಡವರಿಗೆ ಇವರು ಅಧಿಕಾರಕ್ಕೆ ಬಂದದ್ದು ಕೊಂಚ ನೆಮ್ಮದಿಯಾದರೇ, ವಿದ್ಯಾವಂತ ನಿರುದ್ಯೋಗಿಗಳಿಗೆ ಕಂಪನಿಗಳನ್ನು ಹಾಗೂ ಕಾರ್ಖಾನೆಗಳನ್ನು ಜಿಲ್ಲೆಗೆ ತರುವ ಮೂಲಕ ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ವ್ಯವಸ್ಥೆ ಮಾಡಬಹುದು ಎಂಬ ನಿರೀಕ್ಷೆ, ಇನ್ನು ಕೂಲಿ ಕೆಲಸ ಮಾಡುತ್ತ ಜೀವನ ಸಾಗಿಸುವ ಮಹಿಳೆಯರಿಗೆ ಜವಳಿ ಕಾರ್ಖಾನೆ ಸ್ಥಾಪಿಸಿ ಆರ್ಥಿಕವಾಗಿ ಸಬಲರಾಗಿ ಕುಟುಂಬ ನಿರ್ವಹಣೆ ನಿರ್ವಹಿಸಲು ಸಾಧ್ಯವಾಗಬಹುದು ಎಂಬ ಬಯಕೆ.ಐದು ವರ್ಷಗಳಿಂದ ಜಿಡ್ಡು ಹಿಡಿದಿದ್ದ ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸುವ ಮೂಲಕ, ಜಿಲ್ಲೆಯನ್ನು ಮತ್ತೆ ಅಭಿವೃದ್ಧಿ ಪರ್ವದತ್ತ ಮುಂದುವರಿಸಲಿ ಎಂಬುದೇ ನಮ್ಮೆಲ್ಲರ ಬಯಕೆ. Post Views: 0 Share with friends