ಹರಿಹರ:- ವಸತಿ ಕಾಲೇಜಿನ ವಿದ್ಯಾರ್ಥಿನಿ ತಡ ರಾತ್ರಿ ಕಾಂಪೌಂಡ್ ಮೇಲಿಂದ ಜಾರಿ ಬಿದ್ದು ಸಾವು .ದಾವಣಗೆರೆ: ಜಿಲ್ಲೆಯ ಹರಿಹರ ತಾಲೂಕಿನ

ಹರಿಹರ:- ವಸತಿ ಕಾಲೇಜಿನ ವಿದ್ಯಾರ್ಥಿನಿ ತಡ ರಾತ್ರಿ ಕಾಂಪೌಂಡ್ ಮೇಲಿಂದ ಜಾರಿ ಬಿದ್ದು ಸಾವು .ದಾವಣಗೆರೆ: ಜಿಲ್ಲೆಯ ಹರಿಹರ ತಾಲೂಕಿನ ಕುರುಬರಹಳ್ಳಿ ಸಮೀಪದ ಮಾನ್ಯತಾ ಪಬ್ಲಿಕ್ ವಸತಿ ಕಾಲೇಜ್‌ನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ರಾತ್ರಿ ವೇಳೆ ಕಾಂಪೌಂಡ್ ಮೇಲಿಂದ ಜಾರಿ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.ಸಿನಿಕ್ಷಾ(16) ಮೃತ ವಿದ್ಯಾರ್ಥಿನಿ. ರಾತ್ರಿ ವೇಳೆ ವಸತಿ ಶಾಲೆ ಕಾಂಪೌಂಡ್ ಜಂಪ್ ಮಾಡಲು ಹೋಗಿ ಜಾರಿ ಬಿದ್ದು ಸಾವನ್ನಪ್ಪಿದ್ದಾಳೆ. ನಾಲ್ಕು ದಿನದ ಹಿಂದೆ ತಂದೆಯೇ ಬಂದು ವಸತಿ ಕಾಲೇಜ್ ಗೆ ಸೇರಿಸಿ ಹೋಗಿದ್ದರು. ಆದ್ರೆ, ಮಂಗಳವಾರ ರಾತ್ರಿ 11:30ರ ಸುಮಾರಿಗೆ ಸಿನಿಕ್ಷಾ, ವಸತಿ ಶಾಲೆಯ ಕಾಂಪೌಂಡ್ ಹತ್ತೋದಕ್ಕೆ ಹೋಗಿದ್ದಾಳೆ. ಈ ವೇಳೆ ಜಾರಿಬಿದ್ದು ತೀವ್ರವಾಗಿ ಗಾಯಗೊಂಡಿದ್ದಳು. ಈ ವೇಳೆ ಬಾಲಕಿಯನ್ನ ದಾವಣಗೆರೆ ಬಾಪೂಜಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಚಿಕಿತ್ಸೆ ಫಲಿಸದೆ ಬಾಲಕಿ ಆಸ್ಪತ್ರೆಯಲ್ಲೇ ಪ್ರಾಣ ಬಿಟ್ಟಿದ್ದಾಳೆ.ಮೃತ ಬಾಲಕಿ ಸಿನಿಕ್ಷಾ, ವಿಜಯನಗರ ಜಿಲ್ಲೆಯ ಹರಪನಹಳ್ಳಿ ಪಟ್ಟಣದ ಶಶಿಕಾಂತ ಎಂಬುವವರ ಪುತ್ರಿ. ಕಳೆದ ನಾಲ್ಕು ದಿನಗಳ ಹಿಂದೆಯಷ್ಟೆ ಮಾನ್ಯತಾ ವಸತಿ ಕಾಲೇಜಿನಲ್ಲಿ ಸೈನ್ಸ್ ವಿಭಾಗದ ಪಿಯು ಪ್ರಥಮ ವರ್ಷಕ್ಕೆ ಪ್ರವೇಶ ಪಡೆದಿದ್ದಳು. ಸದ್ಯ ಘಟನೆ ಸಂಬಂಧ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 2015ರಲ್ಲಿಯೂ ಸಹ ಇದೇ ಕಾಲೇಜ್‌ನಲ್ಲಿ ಓದುತ್ತಿದ್ದ ವಿಜಯಪುರ ಜಿಲ್ಲೆಯ ಸಿಂದಗಿ ಮೂಲದ ಮಾಲಾಶ್ರೀ ಎಂಬ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಳು.

Share with friends

Related Post

Leave a Reply

Your email address will not be published.