Browse

ಹುಬ್ಬಳ್ಳಿ: ಬಾಲಕಿಯರ ಜೊತೆ ಹೆಡ್ ಕಾನ್ಸ್ಟೇಬಲ್ ಅನುಚಿತ ವರ್ತನೆ: ಸಾರ್ವಜನಿಕರಿಂದ ಬಿತ್ತು ಧರ್ಮದೇಟು!

ಜನರನ್ನ ರಕ್ಷಣೆ ಮಾಡುವ ಪೊಲೀಸರೇ ಹಾದಿ ತಪ್ಪಿದರೆ, ಸಾರ್ವಜನಿಕರ, ಹೆಣ್ಣುಮಕ್ಕಳ ಪರಿಸ್ಥಿತಿ ಏನು? ಇದೀಗ ಹುಬ್ಬಳ್ಳಿಯಲ್ಲಿ ಕೂಡ ಅದೇ ಘಟನೆ ನಡೆದಿದ್ದು, ಹೆಣ್ಣು ಮಕ್ಕಳನ್ನು ರಕ್ಷಣೆ ಮಾಡಬೇಕಿದ್ದ ಪೊಲೀಸಪ್ಪನೇ ಇದೀಗ ಬಾಲಕಿಯರ ಜೊತೆಗೆ ಅನುಚಿತವಾಗಿ ವರ್ತಿಸಿದ್ದಾನೆ.

ಹೌದು ಅಪ್ರಾಪ್ತ ಬಾಲಕಿಯರ ಜೊತೆ ಅನುಚಿತವಾಗಿ ವರ್ತಿಸಿದ ಹೆಡ್ ಕಾನ್ಸ್ಟೇಬಲ್ಗೆ ಸಾರ್ವಜನಿಕರು ಥಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ. ಹುಬ್ಬಳ್ಳಿ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಖದೀಮನವರ ತಮ್ಮ ಏರಿಯಾದಲ್ಲಿನ ಅಪ್ರಾಪ್ತ ಬಾಲಕಿಯರ ಜೊತೆ ಅನುಚಿತವಾಗಿ ವರ್ತಿಸಿರುವ ಆರೋಪ ಕೇಳಿಬಂದಿದೆ. ಈ ಹಿನ್ನಲೆ ಹೆಡ್ ಕಾನ್ಸ್ಟೇಬಲ್ಗೆ ಸಾರ್ವಜನಿಕರು ಥಳಿಸಿದ್ದಾರೆ. ಬಳಿಕ ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

Share with friends