ಹಾಗೆ ಸಾಗರದಲ್ಲಿ ಮುಳುಗಿರುವ ದ್ವಾರಕ ನಗರಿ ಕೂಡ ಹಲವು ಕುತೂಹಲಗಳ ತನ್ನಲ್ಲಿಟ್ಟುಕೊಂಡಿದೆ.ಆದ್ರೆ ನಾವೀಗ ಹೇಳುತ್ತಿರುವುದು ದ್ವಾರಕದ ಕುತೂಹಲದ ಬಗ್ಗೆ ಅಲ್ಲ. ಬದಲಿಗೆ ಗಂಗಾ ನದಿಯ ಅಚ್ಚರಿಯ ಕುರಿತು. ಹೌದು ಭಾರತದ ಪವಿತ್ರ ನದಿ ಎಂದು ಕರೆಯಲಾಗುವ ಗಂಗಾ ನದಿ ಉತ್ತರ ಭಾರತದ ಪ್ರಮುಖ ನದಿಗಳಲ್ಲಿ ಒಂದಾಗಿದೆ. ದಕ್ಷಿಣದಲ್ಲಿ ಕಾವೇರಿಯಂತೆ ಉತ್ತರದಲ್ಲಿ ಗಂಗೆಯನ್ನು ಪವಿತ್ರ ನದಿ ಎಂದು ನಂಬಲಾಗಿದೆ.ಗಂಗೆ ಹಲವು ಪ್ರಮುಖ ತಾಣಗಳ ಹಾದು ಹೋಗುತ್ತದೆ. ಗಂಗಾ ನದಿಯ ತೀರದಲ್ಲಿ ಪ್ರಮುಖ ಹಿಂದೂ ನಗರಗಳು, ಪುರಾತನ ನಗರಗಳು ಬರುತ್ತವೆ. ಇತ್ತೀಚಿಗೆ ಗಂಗಾ ನದಿಯನ್ನು ಸ್ವಚ್ಛ ಮಾಡುವ ನಿಟ್ಟಿನಲ್ಲಿ ಸರ್ಕಾರ ಕೋಟಿ ಕೋಟಿ ರೂಪಾಯಿ ವ್ಯಯಿಸುತ್ತಿದೆ. ಗಂಗಾ ಸ್ನಾನದ ಪಾವಿತ್ರತೆ ಕಾಪಾಡಲು ಒಣ ತೊಡಲಾಗಿದೆ.ಇದೆಲ್ಲದರ ನಡುವೆ ಗಂಗಾ ನದಿಯಿಂದ ಮೇಲೆದ್ದಿರುವ ಅಚ್ಚರಿಯ ರೈಲ್ವೆ ಹಳಿಯೊಂದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಹೌದು ನದಿಯ ಆಳದಿಂದ ರೈಲ್ವೆ ಹಳಿ ಗೋಚರವಾಗಿರುವುದು ಪುರಾತತ್ವ ಇಲಾಖೆ ಅಧಿಕಾರಿಗಳ ಕಣ್ಣರಳಿಸಿದೆ. ಹಾಗೆ ಈ ಕೌತುಕ ಕಣ್ತುಂಬಿಕೊಳ್ಳಲು ಜನರ ದಂಡೇ ಅಲ್ಲಿ ಸೇರುತ್ತಿದೆ. ಗಂಗಾ ನದಿಯ ನೀರು ಕಡಿಮೆಯಾಗಿರುವುದರಿಂದ ಈ ರೈಲ್ವೆ ಹಳಿ ಮೇಲೆ ಬಂದಿದೆ.ಹರಿದ್ವಾರ ರೈಲು ನಿಲ್ದಾಣದಿಂದ ಸುಮಾರು 3 ಕಿಮೀ ದೂರದಲ್ಲಿ ಗಂಗಾ ನೀರಿನ ಕೆಳಗೆ ಹಳೆಯ ರೈಲು ಹಳಿಗಳು ಗೋಚರವಾಗಿದೆ. ಈ ಹಳಿಗಳು ಸುಮಾರು 1850ರಲ್ಲಿ ನಿರ್ಮಿಸಿರಬಹುದು ಎಂದು ಅಂದಾಜಿಸಲಾಗಿದೆ. ಇದನ್ನು ಬ್ರಿಟಿಷರು ಗಂಗಾ ಕಾಲುವೆಯ ನಿರ್ಮಾಣಕ್ಕೆ ಕಚ್ಚಾ ವಸ್ತುಗಳ ಸಾಗಿಸಲೆಂದು ನಿರ್ಮಿಸಿರಬಹುದು ಎಂದು ಅಂದಾಜಿಸಲಾಗಿದೆ.ಅಥವಾ ಈ ಹಿಂದೆ ಗಂಗಾ ನದಿಯ ನೀರಿನ ಮಟ್ಟ ಇರಲಿಲ್ಲವೇ? ಇಲ್ಲಿ ರೈಲುಗಳು ಓಡಾಡಿದ್ದವೇ ಎಂಬ ಕುತೂಹಲ ಕೂಡ ಮೂಡಿದೆ. ಪ್ರತಿ ವರ್ಷ ಉತ್ತರ ಪ್ರದೇಶದ ನೀರಾವರಿ ಇಲಾಖೆಯು ನಿರ್ವಹಣೆಗಾಗಿ ಗಂಗಾ ಕಾಲುವೆಯನ್ನು ಮುಚ್ಚುತ್ತದೆ. ಈ ವೇಳೆ ಕಾಲುವೆಯಲ್ಲಿ ನೀರು ಇಳಿಯುತ್ತದೆ, ಇದರಿಂದಾಗಿ ಹಳೆಯ ವಸ್ತುಗಳು ಮೇಲಕ್ಕೆ ಬರುತ್ತವೆ. ಆದ್ರೆ ಈ ಬಾರಿ ರೈಲು ಹಳಿ ಕಾಣಿಸಿರುವುದು ಅಚ್ಚರಿಗೆ ಕಾರಣವಾಗಿದೆ.ಆದರೆ ಈ ಹಳಿಗಳು ರೈಲು ಓಡಿಸುವ ಬದಲಾಗಿ ಕೈಗಾಡಿಗಳನ್ನು ಇದರ ಮೇಲೆ ಬಳಸಿರಬಹುದು. ಕಚ್ಚಾ ವಸ್ತುಗಳನ್ನು ಸಾಗಿಸುವ ಉದ್ದೇಶದಿಂದ ಕೈ ಗಾಡಿಗಳ ಓಡಿಸುವ ಸಲುವಾಗಿಯೇ ಇದನ್ನು ನಿರ್ಮಿಸಲಾಗಿದೆ ಎನ್ನಲಾಗುತ್ತಿದೆ.ಇದು ಬ್ರಿಟಿಷ್ ಅಧಿಕಾರಿ ಥಾಮಸ್ ಕೌಟ್ಲಿ ಅವರ ಮೇಲ್ವಿಚಾರಣೆಯಲ್ಲಿ ನಿರ್ಮಿಸಿರಬಹುದು. ಹಾಗೆ ಅದೆಷ್ಟು ಗಟ್ಟಿತನದಿಂದ ಕೂಡಿದೆ ಅಂದರೆ ನೂರಾರು ವರ್ಷ ನೀರಿನಿಳಗೆ ಇದ್ದರೂ ಕೂಡ ಒಂಚೂರು ಹಾಳಾಗದೆ ಹಾಗೆ ಉಳಿದಿರುವುದನ್ನು ಕಂಡು ಜನರು ನಿಬ್ಬೆರಗಾಗಿದ್ದಾರೆ. ಹಾಗೆ ಅವರಿಗೆ ಹಿಂದೊಮ್ಮೆ ಇಲ್ಲಿ ರೈಲು ಚಲಿಸಿತ್ತೆ ಎಂಬ ಪ್ರಶ್ನೆ ಮೂಡಿರುವ ಜೊತೆಗೆ ಅನೇಕ ಪ್ರಶ್ನೆಗಳು ಕಾಡುತ್ತಿವೆ.