ಗ್ಯಾರಂಟಿ ಯೋಜನೆ ರಾಜ್ಯಮಟ್ಟದಕಾರ್ಯಕ್ರಮ ಅರ್ಹ ಎಲ್ಲರಿಗೂ ತಲುಪುತ್ತಿದೆ

ಶಕೀಲ್ ಅಹ್ಮದ್ ಎನ್, ವರದಿಗಾರರು. ಹರಿಹರ : ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆ ಗಳು ರಾಜ್ಯಮಟ್ಟದ ಕಾರ್ಯಕ್ರಮವಾಗಿದ್ದು ರಾಜ್ಯದಲ್ಲಿನ ಅರ್ಹ ಎಲ್ಲರಿಗೂ ತಲುಪುತ್ತಿದೆ ಎಂದು ಸಂಸದೆ ಹೇಳಿದರು.ನಗರದ ಕಾಳಿದಾಸ ನಗರದಲ್ಲಿ ನಡೆಯುತ್ತಿರುವ ಕಾಮಗಾರಿ ವಿಳಂಬದ ದೂರು ಹಿನ್ನೆಲೆಯಲ್ಲಿ ಅಧಿಕಾರಿಗಳ ಜೊತೆ ಸ್ಥಳ ವೀಕ್ಷಣೆ ಮಾಡಿ ಕಾಮಗಾರಿ ಗುಣಮಟ್ಟ ಪರಿಶೀಲನೆಯ ವೇಳೆ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಸರ್ಕಾರದ 5 ಗ್ಯಾರಂಟಿ ಯೋಜನೆಗಳು ಜಾರಿಯಲ್ಲಿದ್ದು ಅರ್ಹತೆ ಇರುವ ಎಲ್ಲರಿಗೂ ತಲುಪುತ್ತಿದೆ.ತಾಂತ್ರಿಕ ಕಾರಣದಿಂದ ಕೆಲವರಿಗೆ ತಡವಾಗಿರಬಹುದು ಆದರೆ ಖಂಡಿತವಾಗಿ ತಲುಪುತ್ತದೆ ಎಂಬ ಭರವಸೆ ನೀಡಿದರು.ನನ್ನ ಲೋಕಸಭಾ ವ್ಯಾಪ್ತಿಯ ಎಲ್ಲಾ ತಾಲೂಕುಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ ಆ ಭಾಗದ ಶಾಸಕರು, ಗ್ರಾಮ ಪಂಚಾಯಿತಿ ಪಂಚಾಯಿತಿಯ ಸದಸ್ಯರು ಮತ್ತು ಅಲ್ಲಿನ ಮುಖಂಡರುಗಳೊಂದಿಗೆ ಸಮಸ್ಯೆಗಳ ಬಗ್ಗೆ ಚರ್ಚಿಸಿ ಮಾಹಿತಿ ಪಡೆದು ಸಂಪೂರ್ಣ ಮಾಹಿತಿಯ ವರದಿಯನ್ನು ಸಂಬಂಧಿಸಿದ ಇಲಾಖೆಗಳಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ತಲುಪಿಸಿ ಅಭಿವೃದ್ಧಿಯ ಚಾಲನೆಗೆ ಸಂಕಲ್ಪ ಮಾಡಿದ್ದೇನೆ ಅದರಂತೆ ಇಂದು ಹರಿಹರ ತಾಲೂಕಿಗೆ ಬಂದಿರುವುದಾಗಿ ತಿಳಿಸಿದರು. ತಾಲೂಕಿನ ಅಭಿವೃದ್ಧಿಯ ಬಗ್ಗೆ ಹರಿಹರ ಶಾಸಕರು ಸರ್ಕಾರದ ಬಳಿ ಹಣ ಇಲ್ಲ,ಯಾವುದೇ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಯಾಗುತ್ತಿಲ್ಲ ಎಂದು ಪತ್ರಿಕಾಗೋಷ್ಠಿ ಮತ್ತು ಇತರೆ ವೇಳೆಯಲ್ಲಿ ದೂರುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಂಸದರು ಈಗಾಗಲೇಹರಿಹರ ಶಾಸಕರ ಜೊತೆ ಹರಳಹಳ್ಳಿ ಗ್ರಾಮದ ಶಾಲಾ ಕೊಠಡಿ ಉದ್ಘಾಟನೆಗೆ ಬಂದಾಗ ಮತ್ತು ಕೊಂಡಜ್ಜಿ ಕೆರೆಗೆ ಬಾಗಿನ ಅರ್ಪಿಸುವ ಸಂದರ್ಭದಲ್ಲಿ ಎರಡು ಬಾರಿ ಚರ್ಚಿಸಿದ್ದೇನೆ. ಮುಂದೆ ಅವರೊಂದಿಗೆ ಸಮಗ್ರವಾಗಿ ಚರ್ಚಿಸಿ ಅಭಿವೃದ್ಧಿಯ ಬಗ್ಗೆ ಚಿಂತನೆ ನಡೆಸುತ್ತೇನೆ ಎಂದು ಹೇಳಿದರು. ದಾವಣಗೆರೆ-ಹರಿಹರ ನಗರ ಅಭಿವೃದ್ಧಿ ಪ್ರಾಧಿಕಾರದಿಂದ ಹರಿಹರ ನಗರಕ್ಕೆ ಮಲತಾಯಿ ಧೋರಣೆಯಾಗುತ್ತಿದೆ ಎಂಬ ಬಗ್ಗೆ ಸಂಸದರ ಗಮನಕ್ಕೆ ತಂದಾಗ ಪ್ರತಿಕ್ರಿಯೆ ನೀಡಿದ ಅವರು ಈ ಧೋರಣೆ ಸರಿಪಡಿಸುವ ನಿಟ್ಟಿನಲ್ಲಿ ಹರಿಹರ ನಗರಕ್ಕೆ ದೂಡಾದಶಾಖಾ ಕಚೇರಿಯನ್ನು ಶೀಘ್ರದಲ್ಲೇ ಆರಂಭಿಸಲು ಸೂಚಿಸಲಾಗಿದೆ ಕೆಲವೇ ದಿನಗಳಲ್ಲಿ ಕಚೇರಿ ಆರಂಭವಾಗಿ ಹರಿಹರದ ಜನತೆಗೆ ಅನುಕೂಲವಾಗಲಿದೆ ದಾವಣಗೆರೆಗೆ ಅಲೆದಾಡುವ ಧಾವಂತ ತಪ್ಪಲಿದೆ ಎಂದು ಮಾಹಿತಿ ನೀಡಿದರು. ಕಾಮಗಾರಿ ವಿಳಂಬದ ಹಿನ್ನೆಲೆಯಲ್ಲಿ ಗುತ್ತಿಗೆದಾರರನ್ನು ಸ್ಥಳಕ್ಕೆ ಕರೆಯಿಸಿ ಕಾಮಗಾರಿ ಗುಣಮಟ್ಟ ಹಾಗೂ ಬೇಗನೆ ಮುಗಿಸುವಂತೆ ತಾಕೀತು ಮಾಡಿ ಅವರಿಂದ ಸೂಕ್ತ ಭರವಸೆ ಪಡೆದುಕೊಂಡರು.

ಈ ಸಮಯದಲ್ಲಿ ಹರಿಹರ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರು ಮತ್ತು ಕಾಂಗ್ರೆಸ್ ವಿಧಾನಸಭಾ ಕ್ಷೇತ್ರದ ಮುಖಂಡ ಎನ್.ಹೆಚ್.ಶ್ರೀನಿವಾಸ್ ನಂದಿಗಾವಿ,ನಗರಸಭೆ ಸದಸ್ಯ ರುಗಳಾದ ಎಂ.ಎಸ್‌.ಬಾಬುಲಾಲ್, ಶಾಹಿನಾ ಬಾನು ದಾದಾಪೀರ್ ಭಾನುವಳ್ಳಿ, ಸಂತೋಷ್ ದೊಡ್ಡಮನಿ, ಮಲೆಬೆನ್ನೂರು ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ಅಭಿದಾಲಿ, ಕಾಂಗ್ರೆಸ್ ಮುಖಂಡರು ಗಳಾದ ದಾದಾಪೀರ್ ಭಾನುವಳ್ಳಿ, ಸಂತೋಷ್ ನೋಟದವರ ಸೇರಿದಂತೆ ಭಾಗದ ನಿವಾಸಿಗಳು ಉಪಸ್ಥಿತರಿದ್ದರು.

Share with friends

Related Post

Leave a Reply

Your email address will not be published.