ತಾಲ್ಲೂಕಿನ ಮೊಗದಂಪುರ ಮತ್ತು ಬೋನಸಪುರ ಬಳಿ ಹರಿಯುವ ದೊಮ್ಮಡೊಲು ಹೊಳೆಗೆ ರಾಸಾಯನಿಕ ಕಾರ್ಖಾನೆಯ ತ್ಯಾಜ್ಯ ಟ್ಯಾಂಕರ್ (ಬಲ್ಕರ್) ವಾಹನದ ಮೂಲಕ ತಂದು ಸುರಿದಿದ್ದರಿಂದ ತೊರೆಯಲ್ಲಿನ ಮೀನುಗಳು ಸಾವನ್ನಪ್ಪಿವೆ.ತಡರಾತ್ರಿ ವಾಹನಗಳಲ್ಲಿ ತಂದು ತ್ಯಾಜ್ಯ ಸುರಿದಿದ್ದರಿಂದ ತೊರೆಯಲ್ಲಿ ಆಶ್ರಯ ಪಡೆದ ಜಲಚರಗಳ ಜೀವಕ್ಕೆ ಅಪಾಯ ಎದುರಾಗಿದೆಇದರ ಜತೆಗೆ ಈ ತೊರೆಯ ನೀರು, ಕೃಷಿ ಮತ್ತು ಜಾನುವಾರುಗಳು ಕುಡಿಯಲು ಬಳಸುವುದರಿಂದ ಗಡಿಗ್ರಾಮಗಳ ಜನರಲ್ಲಿ ಆತಂಕ ಉಂಟು ಮಾಡಿದೆ. ಘಟನೆ ಬೆಳಕಿಗೆ ಬಂದ ತಕ್ಷಣ ಕುಂಚಾವರಂ ಸಬ್ ಇನ್‌ಸ್ಪೆಕ್ಟರ್ ವೆಂಕಟೇಶ ನಾಯಕ, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಬಾಲಾಜಿ ಪಾಟೀಲ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ನೀರಿನ ಮಾದರಿ ಸಂಗ್ರಹಿಸಿದರು.ಮೊಗದಂಪುರದಲ್ಲಿ ತಂದು ಸುರಿದಿದ್ದರಿಂದ ಈ ನೀರು ಬೋನಸಪುರ ಅಣೆಕಟ್ಟೆ ಮೂಲಕ ಗೊಟಗ್ಯಾರಪಳ್ಳಿ ಸೀಮೆಯಿಂದ ಎತ್ತಿಪೋತೆ ನಾಲೆ ಮೂಲಕ ಚಂದ್ರಂಪಳ್ಳಿ ಜಲಾಶಯ ಸೇರುತ್ತದೆ. ಎತ್ತಿಪೋತೆ ಜಲಪಾತದ ನಾಲೆ