ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿದ್ದು, ನಿನ್ನೆ SPP ವಾದಕ್ಕೆ ಇವತ್ತು ಮತ್ತೆ ವಕೀಲ ಸಿ.ವಿ ನಾಗೇಶ್ ಕೌಂಟರ್ ಮಾಡುತ್ತಿದ್ದಾರೆ. ಟೆಕ್ನಿಕಲ್ ಎವಿಡೆನ್ಸ್ ಇದೆ ಎಂದು ಎಸ್ಪಿಪಿ ವಾದ ಮಾಡಿದ್ದಾರೆ. ಆದರೆ ಗೂಗಲ್ ಮ್ಯಾಪ್ ನಾನು ಓಡಾಡಿದ ಜಾಗ ತೋರಿಸುತ್ತದೆ.ನಾನು ಹೊರಟ ಜಾಗದಿಂದ, ತಲುಪುವ ಜಾಗ ತೋರಿಸುತ್ತ. ಬೇಕಾದ್ರೆ ಇದನ್ನು ಎಡಿಟ್ ಮಾಡಿ ತೋರಿಸಬಹುದು. ಇದನ್ನ ಗೂಗಲ್ ಟೈಂ ಲೈನ್ ಎನ್ನಲಾಗುತ್ತದೆ. ನಾನು ಈಗ ಬೇಕಾದ್ರೆ ಹೈಕೋರ್ಟ್ನಲ್ಲಿ ಇರುವಂತೆ ತೋರಿಸಬಲ್ಲೇ? ಹೀಗಾಗಿ ಯಾವುದೇ ಟೆಕ್ನಿಕಲ್ ಎವಿಡೆನ್ಸ್ ಪಕ್ಕ ಇರೋದಿಲ್ಲ. ಟೆಕ್ನಿಕಲ್ ಎವಿಡೆನ್ಸ್ ಸಂಪೂರ್ಣ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಎಡಿಟ್ ಮಾಡಬಹುದು, ಬೇಕಾದಂತೆ ಬದಲಿಸಬಹುದು ಎಂದು ವಾದಿಸಿದ್ದಾರೆ.