ಟ್ರೇನ್‌ ಟಿಕೆಟ್‌ ಬುಕ್‌ ಮಾಡೋದ್ರಿಂದಲೇ ತಿಂಗಳಿಗೆ 50 ಸಾವಿರ ಸಂಪಾದಿಸಬಹುದು, ಅದಕ್ಕೆ ಹೀಗೆ ಮಾಡಿ

ಜಾಬ್‌ ಮಾಡುತ್ತಿರುವ ನಡುವೆಯೇ ಹೆಚ್ಚುವರಿ ಹಣ ಬೇಕಾ? ಅದಕ್ಕೆ ನೀವು ಐಆರ್‌ಸಿಟಿಸಿ ಟಿಕೆಟ್‌ ಏಜೆಂಟ್‌ ಆಗಬಹುದು. ಇದರಲ್ಲಿ ನೀವು ಬುಕ್‌ ಮಾಡೋ ಪ್ರತಿ ಟಿಕೆಟ್‌ಗೂ ಕಮೀಷನ್‌ ಸಿಗುತ್ತದೆ. ಲಿಮಿಟ್ ಇಲ್ಲದೆ ಟಿಕೆಟ್ ಬುಕ್ ಮಾಡಿ ಹೆಚ್ಚು ಹಣ ಗಳಿಸಬಹುದು.

ದೈನದಿಂನ ಕೆಲಸದೊಂದಿಗೆ ವ್ಯಾಪಾರವನ್ನೂ ಮಾಡುವ ಆಸಕ್ತಿ ನಿಮ್ಮಲ್ಲಿದ್ಯಾ?

ಹಾಗಿದ್ದರೆ, ನೀವು ಈ ಅವಕಾಶ ನೋಡಬೇಕು. ಈಗಿರುವ ಕೆಲಸವನ್ನು ಬಿಡದೇ ಈ ಕೆಲಸವನ್ನು ನೀಡು ಮಾಡಬಹುದು. ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (IRCTC) ಟಿಕೆಟ್ ಬುಕಿಂಗ್ ಏಜೆಂಟ್ ಆಗಿ ಸುಲಭವಾಗಿ ಹಣ ಗಳಿಸಲು ಸಾಧ್ಯವಿದೆ.ಟಿಕೆಟ್ ಬುಕಿಂಗ್ ಸೇರಿದಂತೆ ಅನೇಕ ರೈಲ್ವೆ ಸಂಬಂಧಿತ ಸೇವೆಗಳನ್ನು ಐಆರ್‌ಸಿಟಿಸಿಯಿಂದಲೇ ಮಾಡಬೇಕು. ಐಆರ್‌ಸಿಟಿಸಿ ಅಧಿಕೃತ ಟಿಕೆಟ್‌ ಏಜೆಂಟ್‌ ಆಗೋ ಮೂಲಕ ತಿಂಗಳಿಗೆ ಸಾವಿರಾರು ರೂಪಾಯಿ ಹಣವನ್ನು ನೀವು ಗಳಿಸಬಹುದು.

ನಿಮ್ಮ ಮನೆಯಲ್ಲಿ ಅಥವಾ ನೀವು ಇಷ್ಟಪಡೋ ಯಾವುದೇ ಸ್ಥಳದಲ್ಲಿ ಕುಳಿತು ಉತ್ತಮ ಆದಾಯ ಗಳಿಸಬಹುದು. ಏಜೆಂಟ್ ಆಗಿ, ಪ್ರಯಾಣಿಕರಿಗೆ ಟಿಕೆಟ್ ಕಾಯ್ದಿರಿಸುವುದು ನಿಮ್ಮ ಮುಖ್ಯ ಜವಾಬ್ದಾರಿಯಾಗಿದೆ. ಇದಕ್ಕಾಗಿ ನೀವು ಅಧಿಕೃತ IRCTC ವೆಬ್‌ಸೈಟ್‌ಗೆ ಭೇಟಿ ನೀಡಬೇಕು ಮತ್ತು

ಏಜೆಂಟ್ ಆಗಲು ಅರ್ಜಿ ಸಲ್ಲಿಸಬೇಕು. ಇದಕ್ಕೆ ಒಪ್ಪಿಗೆ ಸಿಕ್ಕ ಬಳಕ ನೀವು ರೈಲು ಟಿಕೆಟ್‌ಗಳನ್ನು ಕಾಯ್ದಿರಿಸಲು ಅಧಿಕೃತ ಏಜೆಂಟ್‌ ಎನಿಸಿಕೊಳ್ಳುತ್ತೀರಿ. ನೀವು ಬುಕ್ ಮಾಡುವ ಪ್ರತಿ ಟಿಕೆಟ್‌ಗೆ ನೀವು ಕಮಿಷನ್‌ಗಳನ್ನು ಗಳಿಸುತ್ತೀರಿ.

ನಾನ್-ಎಸಿ ಟಿಕೆಟ್‌ಗಳಿಗೆ, ನೀವು ಪ್ರತಿ ಟಿಕೆಟ್‌ಗೆ 20 ರೂಪಾಯಿ ಸಿಗಲಿದ್ದರೆ. ಎಸಿ ಕ್ಲಾಸ್ ಟಿಕೆಟ್‌ಗಳ ಬೆಲೆ ಮೇಲೆ 40 ರೂಪಾಯಿ ಕಮೀಷನ್‌ ಸಿಗುತ್ತದೆ. ಅದರೊಂದಿಗೆ ನಿಮ್ಮ ಕಮೀಷನ್‌ ಭಾಗವಾಗಿ ನೀವು ಒಟ್ಟು ಟಿಕೆಟ್ ದರದ ಶೇಕಡಾವಾರು ಮೊತ್ತವನ್ನು ಸ್ವೀಕರಿಸುತ್ತೀರಿ. ಐಆರ್‌ಸಿಟಿಸಿ ಏಜೆಂಟ್ ಆಗುವ ಒಂದು ಪ್ರಮುಖ ಪ್ರಯೋಜನವೆಂದರೆ ನೀವು ಪ್ರತಿ ತಿಂಗಳು ಎಷ್ಟು ಟಿಕೆಟ್‌ಗಳನ್ನು ಬೇಕಾದರೂ ಬುಕ್ ಮಾಡಬಹುದು. ಇದಕ್ಕೆ ಯಾವುದೇ ಮಿತಿ ಇರೋದಿಲ್ಲ ನೀವು ಅನಿಯಮಿತ ಬುಕಿಂಗ್ ಅನ್ನು ನಿರ್ವಹಿಸಬಹುದು, ಅದು ಸಾಮಾನ್ಯ ಅಥವಾ ತತ್ಕಾಲ್ ಟಿಕೆಟ್ ಆಗಿರಬಹುದು. ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನ ಟಿಕೆಟ್‌ಗಳನ್ನು ಬುಕ್ ಮಾಡಲು ನಿಮಗೆ ಅನುಮತಿ ಸಿಗುತ್ತದೆ.

Share with friends

Related Post

Leave a Reply

Your email address will not be published.