ದೀಪಾವಳಿ ಹಿನ್ನೆಲೆಯಲ್ಲಿ ಮಂಗಳವಾರ ಕಂಡ ದೀಪೋತ್ಸವದ ಸಂಭ್ರಮ safgroupPosted on October 30, 2024 Saf news job education No Comments ದೀಪಾವಳಿ ಹಿನ್ನೆಲೆಯಲ್ಲಿ ಮಂಗಳವಾರ ಕಂಡ ದೀಪೋತ್ಸವದ ಸಂಭ್ರಮ70 ವರ್ಷ ಮೇಲ್ಪಟ್ಟವರಿಗೆ ಉಚಿತ ಚಿಕಿತ್ಸೆ- ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಂಗಳವಾರ ತಮ್ಮ ಸರ್ಕಾರದ ಪ್ರಮುಖ ಉಪಕ್ರಮ ಆಯುಷ್ಮಾನ್ ಭಾರತ್ ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆ ಅಡಿಯಲ್ಲಿ 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ಹಿರಿಯ ನಾಗರಿಕರಿಗೆ ಆದಾಯವನ್ನು ಲೆಕ್ಕಿಸದೆ ಆರೋಗ್ಯ ವಿಮಾ ರಕ್ಷಣೆಯ ಯೋಜನೆಗೆ ಚಾಲನೆ ನೀಡಿದರು. ಹಿರಿಯ ನಾಗರಿಕರಿಗಾಗಿ ವಿಮಾ ರಕ್ಷಣೆಯ ಯೋಜನೆಯನ್ನು – ಕಳೆದ ತಿಂಗಳು ಘೋಷಿಸಲಾಗಿತ್ತು. ಧನ್ವಂತರಿ ಜಯಂತಿ ಮತ್ತು 9ನೇ ಆಯುರ್ವೇದ ದಿನದಂದು ನವದೆಹಲಿಯ ಆಲ್ಇಂಡಿಯಾ ಇನ್ ಸ್ಟಿಟ್ಯೂಟ್ ಆಫ್ ಆಯುರ್ವೇದದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಪಿಎಂ ಮೋದಿ ಅವರು ಫಲಾನುಭವಿಗಳಿಗೆ ಆಯುಷ್ಮಾನ್ ವಯ ವಂದನಾ ಕಾರ್ಡ್ ಹಸ್ತಾಂತರಿಸಿದರು. ಉಚಿತ ಚಿಕಿತ್ಸೆಗಾಗಿ ವಾರ್ಷಿಕವಾಗಿ ರೂ 5 ಲಕ್ಷದವರೆಗೆ ವಿಶೇಷ ವ್ಯಾಪ್ತಿಯನ್ನು ನೀಡುತ್ತದೆ.ಈ ಯೋಜನೆಯಡಿ ಚಿಕಿತ್ಸಾ ವೆಚ್ಚವನ್ನು 60 ಪ್ರತಿಶತದಷ್ಟು ಕೇಂದ್ರ ಸರ್ಕಾರ ಮತ್ತು ಶೇಕಡ 40ರಷ್ಟು ರಾಜ್ಯ ಸರ್ಕಾರ ಭರಿಸುತ್ತದೆ. ಪಶ್ಚಿಮ ಬಂಗಾಳ ಮತ್ತು ದೆಹಲಿಯು ಯೋಜನೆ ಜಾರಿಗೆ ನಿರಾಕರಿಸಿವೆ ಎಂದು ಟೀಕಿಸಿದರು Post Views: 33 Share with friends