ನಾನು ಹೇಳಿದ ಆ ಒಂದು ಕೆಲಸ ಮಾಡಿದ್ರೆ ಬಿಟ್ಟುಬಿಡ್ತೇನೆ; ಸಲ್ಮಾನ್ ಖಾನ್ಗೆ ಓಪನ್ ಆಫರ್ ಕೊಟ್ಟ Lawrence Bishnoi safgroupPosted on October 17, 2024 Saf news job education No Comments ಎನ್ಸಿಪಿ ನಾಯಕ ಬಾಬಾ ಸಿದ್ದಿಕ್ಕಿ (Baba Siddique) ಅವರನ್ನು ಹತ್ಯೆ ಮಾಡುವ ಮೂಲಕ ರಾಷ್ಟ್ರವ್ಯಾಪಿ ತೀವ್ರ ಸಂಚಲನವನ್ನು ಹುಟ್ಟು ಹಾಕಿರುವ ಕುಖ್ಯಾತ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ (Lawrence Bishnoi) ಎಲ್ಲರ ಗಮನ ಸೆಳೆಯುತ್ತಿದ್ದಾನೆ.ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಅವರನ್ನು ಹತ್ಯೆ ಮಾಡುವುದೇ ಈತನ ಪರಗುರಿಯಾಗಿದ್ದು, ಸಲ್ಲುಗೆ ಹತ್ತಿರವಿರುವವರನ್ನು ಮುಗಿಸುವುದಾಗಿ ಜೈಲಿನಿಂದಲೇ ಬೆದರಿಕೆ ಹಾಕಿದ್ದಾನೆ. ಜೈಲಿನಲ್ಲಿದ್ದುಕೊಂಡೆ ಈತ ಎಲ್ಲವನ್ನೂ ಆಪರೇಟ್ ಮಾಡುತ್ತಿದ್ದು, ಕಾನೂನು-ಸುವ್ಯವಸ್ಥೆ ಕುರಿತಾದ ಪ್ರಶ್ನೆಗಳು ಉದ್ಭವಿಸಲು ಶುರುವಾಗಿದೆ. ಇದೆಲ್ಲದರ ನಡುವೆ ಲಾರೆನ್ಸ್ ಬಿಷ್ಣೋಯ್ (Lawrence Bishnoi) ಸಲ್ಮಾನ್ ಖಾನ್ಗೆ (Salman Khan) ಆಫರ್ ಒಂದನ್ನು ನೀಡಿದ್ದು, ಈ ಅಂಶ ಎಲ್ಲರ ಗಮನ ಸೆಳೆಯುತ್ತಿದೆ. ಲಾರೆನ್ಸ್ ಬಿಷ್ಣೋಯ್ (Lawrence Bishnoi) ಕೆಲವು ವರ್ಷಗಳ ಹಿಂದೆ ಖಾಸಗಿ ಸುದ್ದಿ ವಾಹಿನಿಗೆ ಗುಜರಾತ್ನ ಸಬರಮತಿ ಕಾರಾಗೃಹದಲ್ಲಿದ್ದುಕೊಂಡೆ ಸಂದರ್ಶನ (Interview) ಒಂದನ್ನು ನೀಡಿದ್ದ. ಈ ಸಂದರ್ಶನದಲ್ಲಿ ಆತ ಸಲ್ಮಾನ್ ಖಾನ್ಗೆ (Salman Khan) ತಾನು ಹೇಳಿದ ಆ ಒಂದು ಕೆಲಸ ಮಾಡಿದ್ರೆ ಜೀವಂತೆ ಬಿಟ್ಟುಬಿಡುವುದಾಗಿ ಹೇಳಿದ್ದಾನೆ. ಈ ಸುದ್ದಿ ಇದೀಗ ಮುನ್ನೆಲೆಗೆ ಬಂದಿದ್ದು, ನೆಟ್ಟಿಗರು ಸಲ್ಮಾನ್ ಖಾನ್ಗೆ (Salman Khan) ಅದನ್ನು ಪಾಲಿಸುವಂತೆ ಸಲಹೆ ನೀಡುತ್ತಿದ್ದಾರೆ. ಸಲ್ಮಾನ್ ಖಾನ್ (Salman Khan) ಅನ್ನು ಕೊಲ್ಲುವುದೇ ನನ್ನ ಜೀವನದ ಗುರಿ ಎಂದು ಲಾರೆನ್ಸ್ ಬಿಷ್ಣೋಯ್ (Lawrence Bishnoi) ಹೇಳುತ್ತಾನೆ. ಇದಕ್ಕೆ ಪ್ರತಿಯಾಗಿ ಅವರನ್ನು ಕೊಲ್ಲದೇ ಇರಬೇಕೆಂದರೆ ಸಲ್ಮಾನ್ ಖಾನ್ (Salman Khan) ಏನು ಮಾಡಬೇಕು ಎಂದು ನಿರೂಪಕರು (Anchor) ಕೇಳುತ್ತಾರೆ. ಇದಕ್ಕೆ ಉತ್ತರಿಸಿದ ಲಾರೆನ್ಸ್ ಬಿಷ್ಣೋಯ್ (Lawrence Bishnoi) ನಮ್ಮ ಬಿಷ್ಣೋಯಿಗಳ ದೇವಾಲಯ ಮುಕ್ತಿಧಾಮ ಮುಕಾಮ್ ರಾಜಸ್ಥಾನದ ಬಿಕಾನೆರ್ (Rajasthan Bikaner) ಜಿಲ್ಲೆಯ ನೋಕಾತಾಲ್ಲೂಕಿನಲ್ಲಿದೆ, ಅಲ್ಲಿಗೆ ಹೋಗಿ ಕ್ಷಮೆ ಕೇಳಿ ಬಿಡಲಿ ಸಾಕು. ನನ್ನಿಂದ ತಪ್ಪಾಗಿದೆ, ಆಗದೆಯೂ ಇರಬಹುದು ಆದರೆ ಆರೋಪ ಬಂದಿದೆ. ನನ್ನಿಂದ ಈ ಸಮುದಾಯದ ಮನೋಭಾವನೆಗೆ ಧಕ್ಕೆ ಬಂದಿದೆ ಹಾಗಾಗಿ ಕ್ಷಮೆ ಕೇಳುತ್ತೇನೆ ಎಂದು ಆ ದೇವಸ್ಥಾನದಲ್ಲಿ ನಿಂತು ಹೇಳಲಿ ಸಾಕು, ನಾನು ಆತನನ್ನು ಬಿಟ್ಟುಬಿಡುತ್ತೇನೆ. ಆತನನ್ನು ಕೊಲ್ಲುವ ಪ್ರಯತ್ನ ಮಾಡುವುದಿಲ್ಲ ಎಂದು ಸಂದರ್ಶನದಲ್ಲಿ (Interview) ಹೇಳಿದ್ದಾನೆ. Post Views: 1 Share with friends