ನಿವೃತ್ತ ಸರ್ಕಾರಿ ಅಧಿಕಾರಿ ಬಳಿ ಭರ್ಜರಿ 90 ಕೋಟಿ ರು. ಆಸ್ತಿ ಪತ್ತೆ! safgroupPosted on October 18, 2024 Saftv No Comments ಮಧ್ಯಪ್ರದೇಶದ ನಿವೃತ್ತ ಸರ್ಕಾರಿ ಉದ್ಯೋಗಿಯೊಬ್ಬರ ಮನೆ ಮೇಲೆ ದಾಳಿ ನಡೆಸಿದ ಮಧ್ಯಪ್ರದೇಶದ ಲೋಕಾಯುಕ್ತ ಪೊಲೀಸರು 90 ಕೋಟಿ ರು. ಮೌಲ್ಯದ ಆಸ್ತಿ ಪತ್ತೆ ಹಚ್ಚಿದ್ದಾರೆ. ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ಕಿರಿಯ ಲೆಕ್ಕ ಪರಿಶೋಧಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ರಮೇಶ್ ಹಿಂಗೊರಾನೀಗೆ ಸೇರಿದ ಸ್ಥಳಗಳು, ಅವರ ಪರಿವಾರದವರು ನಡೆಸುತ್ತಿದ್ದ 2 ಶಾಲೆಗಳು, ಪಾರ್ಟಿಹಾಲ್ಗಳ ಮೇಲೆ ಲೋಕಾಯುಕ್ತದ ಪೊಲೀಸರ 6 ತಂಡಗಳು ಗುರುವಾರ ದಾಳಿ ನಡೆಸಿವೆ.ದಾಳಿ ವೇಳೆ ರಮೇಶ್, ರಾಜಧಾನಿ ಭೋಪಾಲ್ ಹಾಗೂ ಅನ್ಯ ರಾಜ್ಯಗಳಲ್ಲಿ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹೂಡಿಕೆ ಮಾಡಿದ್ದರ ಬಗ್ಗೆ ದಾಖಲೆಗಳು ಸಿಕ್ಕಿವೆ ಎನ್ನಲಾಗಿದೆ. ಅಲ್ಲದೆ ದಾಳಿ ವೇಳೆ 70 ಲಕ್ಷ ರು. ಬೆಲೆಯ ಚಿನ್ನಾಭರಣ, 12 ಲಕ್ಷ ರು. ನಗದು, 4 ಐಷಾರಾಮಿ ಕಾರು ಪತ್ತೆಯಾಗಿದೆ. ಸ್ಥಿರಾಸ್ತಿಯ ಮೌಲ್ಯವನ್ನು ಇನ್ನೂ ಲೆಕ್ಕ ಹಾಕಲಾಗುತ್ತಿದೆ. ಇನ್ನು ರಮೇಶ್ ಮಗ ನಿಲೇಶ್ ಅವರ ಬಳಿ ಇದ್ದ ಪರವಾನಗಿ ಇಲ್ಲದ ಪಿಸ್ತೂಲನ್ನು ಲೋಕಾಯುಕ್ತ ಪೊಲೀಸರು ವಶಪಡಿಸಿಕೊಂಡಿದ್ದಾರೆ. Post Views: 0 Share with friends