ಇದೀಗ ಭಾರತ ಮತ್ತೊಂದು ಹಂತದ ಬದಲಾವಣೆಗೆ ತೆರೆದುಕೊಳ್ಳುತ್ತಿದೆ. ಇದು ಜಗತ್ತನ್ನೇ ಬೆರಗಾಗಿಸುವ ಹಾಗೂ ಅನುಸರಿಸುವ ಬದಲಾವಣೆ. ಹೌದು, ಭಾರತದಲ್ಲಿ ಇನ್ನು ನಗದು ಹಣ ಇರುವುದಿಲ್ಲ. ಆರ್‌ಬಿಐ ನೋಟು ಪ್ರಿಂಟ್ ಮಾಡುವ ಪ್ರಮೇಯವೂ ಇಲ್ಲ. ಯಾರ ಬಳಿಯೂ ನಗದು ಹಣ ಇರಲ್ಲ, ವ್ಯವಹಾರವೂ ಇರುವುದಿಲ್ಲ. ಏನಿದ್ದರೂ ಡಿಜಿಟಲ್ ಕರೆನ್ಸಿ ಮಾತ್ರ. ಈ ಮಾತನ್ನು ಭಾರತದ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.
ಕೋಲ್ಕತಾದಲ್ಲಿ ನಡೆದ ವಾರ್ಷಿಕ ಜಿ30 ಅಂತಾರಾಷ್ಟ್ರೀಯ ಬ್ಯಾಂಕಿಂಗ್ ಸೆಮಿನಾರ್‌ನಲ್ಲಿ ಮಾತನಾಡಿದ ಶಕ್ತಿಕಾಂತ ದಾಸ್ ಈ ಸ್ಫೋಟಕ ಮಾಹಿತಿ ನೀಡಿದ್ದಾರೆ. ಭಾರತದಲ್ಲಿ ಇನ್ಮುಂದೆ ನಗದು ಹಣ ಇರುವುದಿಲ್ಲ, ನಗದು ವಹಿವಾಟುಗಳು ಇರುವುದಿಲ್ಲ. ಎಲ್ಲವೂ ಡಿಜಿಟಲ್ ಕರೆನ್ಸಿ ಎಂದಿದ್ದಾರೆ. ನಾವು ಭವಿಷ್ಯದ ಡಿಜಿಟಲ್ ಕರೆನ್ಸಿಯಿಂದ ಪಲಾಯನ ಮಾಡಲು ಸಾಧ್ಯವಿಲ್ಲ.