ಮಳೆಯಿಂದ ಬೆಳೆ, ಮನೆ, ಜೀವ ಹಾನಿ: 15 ದಿನಗಳಲ್ಲಿ ಬೆಳೆಹಾನಿ ಪರಿಹಾರ ವಿತರಣೆಗೆ ಕ್ರಮ – ಕೃಷ್ಣ ಬೈರೇಗೌಡ

15 ದಿನಗಳೊಳಗೆ ಸಂತ್ರಸ್ತರಿಗೆ ಬೆಳೆಹಾನಿ ಪರಿಹಾರ ಒದಗಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ. ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಹಿರೇಮಲ್ಲನಕೆರೆ, ಭರಮಸಮುದ್ರ, ಉಚ್ಚಂಗಿಪುರ, ದೊಣ್ಣೆಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಮಳೆಹಾನಿ ಪ್ರದೇಶವನ್ನು ಪರಿಶೀಲನೆ ನಡೆಸಿದರು.

ಮಳೆಯಿಂದ ಮನೆಹಾನಿ, ಬೆಳೆಹಾನಿಯಾಗಿರುವ ಬಗ್ಗೆ ವೀಕ್ಷಿಸಿದರು.ಜೊತೆಗೆ ಆಯಾಯ ಮಾಲೀಕರಿಗೆ ಪರಿಹಾರ ಹಾಗು ಮನೆ ಕಟ್ಟಿಕೊಳ್ಳಲು ಪರಿಹಾರ ಒದಗಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು. ಬಳಿಕ ಮೆಕ್ಕೆಜೋಳ ಜಮೀನಿಗೆ ತೆರಳಿ ರೈತರ ನೋವನ್ನು ಅಲಿಸಿದ್ದಾರೆ. ಮನೆ ಬಿದ್ದಿರುವುದನ್ನು ಗಮನಿಸಿ ಮನೆಗಳನ್ನು ಮಂಜೂರು ಮಾಡುವಂತೆ ಗ್ರಾಮ ಲೆಕ್ಕಾಧಿಕಾರಿಗಳಿಗೆ ತಿಳಿಸಿದರು.

Share with friends

Related Post

Leave a Reply

Your email address will not be published.