ಮೊಬೈಲ್ ಟೆಕ್ಕಿಗಳ ಕ್ರಿಕೆಟ್ ಆಟ
ಮಲ್ಟಿ ಪರ್ಪಸ್ ಹಾಗೂ ಮೆಕಾನಿಕ್ ಅಸೋಷಿಯೇಶನ್ ಜಿಲ್ಲಾ ಘಟಕ ದಾವಣಗೆರೆ, ತಾಲೂಕು ಘಟಕ ಹರಿಹರ ಸಂಯುಕ್ತಾಶ್ರಯದಲ್ಲಿ ನಗರದ ಗಾಂಧಿ ಮೈದಾನದಲ್ಲಿ ಭಾನುವಾರ ನಡೆದಟೆನಿಸ್ ಬಾಲ್ ಪಂದ್ಯಾವಳಿಯಲ್ಲಿ ಕಾಂತಪ್ಪ ಕಮ್ಯೂನಿಕೇಷನ್ ತಂಡ ಪ್ರಥಮ ಸ್ಥಾನ, ಸಿಎಂಸಿ ಕಾಂಪ್ಲೆಕ್ಸ್ ತಂಡದ್ವೀತಿಯ ಸ್ಥಾನಪಡೆದು ಟೋಪಿ ತಮ್ಮದಾಗಿಸಿಕೊಂಡಿವೆ. ಒಟ್ಟು 101 ಜನ ಅಸೋಷಿಯೇಶನ್ ಸದಸ್ಯರಿದ್ದು, ಅರಿಹಂತ ಮೊಬೈಲ್ ಅಸಿಷರಿಷ್, ಸಿಎಂಸಿ ಕಾಂಪ್ಲೆಕ್ಸ್, ರವಿ ಟೆಲಿಕಾಂ, ಕಾಂತಪ್ಪ ಕಮೂನಿಕೇಷನ್, ಶ್ರೀ ಸಾಯಿ ಕಮ್ಯೂನಿಕೇಷನ್ ಹೀಗೆ 5 ತಂಡಗಳಾಗಿ ಕ್ರೀಡಾಕೂಟಕ್ಕೆ ಸಿದ್ಧಗೊಂಡಿದ್ದರು. ಬೆಳಿಗ್ಗೆ 8 ಗಂಟೆಯಿಂದಲೆಗಾಂಧಿ ಮೈದಾನದಲ್ಲಿ ಕ್ರಿಕೆಟ್ ವಿಕ್ಷಕರು ಭಾರಿ ಸಂಖ್ಯೆಯಲ್ಲಿ ಸೆರಿದ್ದರು. ಉತ್ತಮ ಕ್ರಿಕೆಟ್ ಆಟಗಾರರೆಂದೇ ಖ್ಯಾತರಾಗಿರುವ ಸಂತೋಷ ಗುಡಿಮನಿ, ಜಿ.ಪಿ ಸಂಜೀವಗೌಡ, ಹೊನ್ನಪ್ಪ, ಜಿಷಾನ್, ಇಮ್ರಾನ್, ರೋಷನ್ ತಹಶೀಲ್ದಾರ್, ಸಮೀಉಲ್ಲಾ ಕ್ರಿಕೆಟ್ ಆಟಕ್ಕೆ ಬಾರಿ ಮೆರಗು ತಂದಿದ್ದರು. ಬೆಳಿಗ್ಗೆ 8 ರಿಂದ ಮದ್ಯಾಹ್ನ 3 ಗಂಟೆಯವರೆಗೂ ನಡೆದ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ 5 ತಂಡದ ಆಟಗಾರರು ತಮ್ಮ ಪ್ರತಿಸ್ಪರ್ಧಿಗಳಿಗೆ ಉತ್ತಮ ಪೈಪೋಟಿ ನೀಡಿದರು. ಉತ್ತಮ ಬೌಲರ್, ಉತ್ತಮ ಬ್ಯಾಟ್ಸ್‌ಮನ್, ಉತ್ತಮ ಹಿಡಿತಗಾರ, ಉತ್ತಮ ಕೀಪರ್, ಉತ್ತಮ ಕಾವಲುಗಾರ ಎಂದು ಪ್ರಶಸ್ತಿ ನೀಡಲಾಯಿತು. ನಂತರ ನಡೆದ ವಿಜಯೋತ್ಸವದಲ್ಲಿ ದಾನಿಗಳಾದ ನ್ಯಾನ್‌ಸಿಂಗ್, ವಾಹಬ್, ರಫೀಕ್, ಅಸೋಷಿಯೇಶನ್ ಸದಸ್ಯರು, ಅವಿನಾಶ್, ಸೈಯದ್, ಗಜನಭಿ, ಸಾಜಿದ್, ಜಾವಿದ್, ಶಿವಕುಮಾರ, ಆಬಿದ್, ಪ್ರಶಾಂತ್, ಆಬಿದ್, ಸಾದಿಕ್, ಅಕ್ಷಯ್, ಅರ್ಷದ್, ರವಿಟೆಲಿಕಾಂನ ರವಿ, ವಿತ್ತೇಶ್, ಅಣ್ಣಪ್ಪ ಅಜೇರ, ಜಬೀವುಲ್ಲಾ ಇದ್ದರು.
ಹರಿಹರ: ಜಿಲ್ಲಾ
ಗೆದಿದಕೆ ಸಂಭ್ರಮಾಚರಿಸಿದರು.