ರೈತರಿಗೆ ಕೇಂದ್ರದಿಂದ ಮತ್ತೊಂದು ಬಂಪರ್ ಯೋಜನೆ! ಶೇಕಡಾ 50 ರಷ್ಟು ಸಬ್ಸಡಿ ಘೋಷಿಸಿದ ಸರ್ಕಾರ

ಕೃಷಿ ವಿಚಾರದಲ್ಲಿ ಅದರಲ್ಲೂ ತೋಟಗಾರಿಕೆ ಬೆಳೆ ಮಾಡುವ ರೈತರಿಗೆ ತಂತ್ರಜ್ಞಾನ ನಿಜಕ್ಕೂ ಒಂದು ವರದಾನವಾಗಿದೆ ಎಂದರೆ ತಪ್ಪೇನಿಲ್ಲ. ಏಕೆಂದರೆ ಬದಲಾಗುತ್ತಿರುವ ಕೃಷಿ ಪದ್ಧತಿಯಲ್ಲಿ ಹಾಗೂ ಯುವಪೀಳಿಗೆಯ ಕೃಷಿ ಬಗ್ಗೆ ಆಸಕ್ತಿ ಇಲ್ಲದೇ ಇರುವ ಕಾರಣ ತೋಟಗಾರಿಕೆ ಬೆಳೆ ಅಷ್ಟೇ ಅಲ್ಲದೆ ಇತರೆ ಗದ್ದೆಗಳಲ್ಲೂ ಕೆಲಸ ಮಾಡಲು ಆಳುಗಳ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಆದ್ದರಿಂದ ರೈತರಿಗೆ ಕೇಂದ್ರ ಸರ್ಕಾರದ ಮತ್ತೊಂದು ಬಂಪರ್ ಯೋಜನೆ ಘೋಷಿಸಿದೆ. ಟ್ರಾಕ್ಟರ್ ಖರೀದಿಸುವ ರೈತರಿಗೆ ಬರೋಬ್ಬರಿ ಶೇಕಡಾ 50 ರಷ್ಟು ಸಬ್ಸಡಿ ಸಿಗಲಿದೆ. ಪಿಎಂ ಕಿಸಾನ್ ಟ್ರಾಕ್ಟರ್ ಯೋಜನೆಯಡಿ ಈ ಸೌಲಭ್ಯ ಸಿಗಲಿದೆ. ಈ ಸೌಲಭ್ಯ ದೇಶದ ಎಲ್ಲಾ ರೈತರಿಗೆ ಅನ್ವಯವಾಗಲಿದೆ. ಈ ರೈತರಿಗೂ ಅನುಕೂಲವಾಗುವ ಹೊಸ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.ಪಿಎಂ ಕಿಸಾನ್ ಟ್ರಾಕ್ಟರ್ ಯೋಜನಯಡಿ ಟ್ರಾಕ್ಟರ್ ಖರೀದಿಸಲು ಇಚ್ಚಿಸುವ ರೈತರು ಆನ್‌ಲೈನ್ ಅಥವಾ ಸಂಬಂಧ ಪಟ್ಟ ಸ್ಛಳೀಯ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ. ಅರ್ಹ ರೈತರು ಟ್ರಾಕ್ಟರ್ ಬೆಲೆಯ ಅರ್ಧದಷ್ಟು ಮಾತ್ರ ಪಾವತಿ ಮಾಡಿದರೆ ಸಾಕು. ಇನ್ನುಳಿದ ಅರ್ಧದಷ್ಟು ಹಣವನ್ನು ಕೇಂದ್ರ ಸರ್ಕಾರ ಪಾವತಿಸಲಿದೆ.

ಶೇಕಡಾ 50 ರಷ್ಟು ಸಬ್ಸಡಿ ಇರುವುದರಿಂದ ರೈತರು ಅರ್ಧದಷ್ಟು ಹಣ ಪಾವತಿಸಿದರೆ ಟ್ರಾಕ್ಟರ್ ಲಭ್ಯವಾಗಲಿದೆ. ಈ ಅರ್ಧ ಹಣಪಾವತಿಗೂ ಸಾಲ ಸೌಲಭ್ಯವಿದೆ. ಕೆಲ ರಾಜ್ಯಗಳು ಕೇಂದ್ರ ಸರ್ಕಾರದ ಸಬ್ಸಿಡಿ ಜೊತೆಗೆ ರಾಜ್ಯ ಸರ್ಕಾರಗಳು ಸಬ್ಸಿಡಿ ಘೋಷಿಸಿದೆ. ಹರ್ಯಾಣ,ಜಾರ್ಖಂಡ್ ಸೇರಿದಂತೆ ಕೆಲ ರಾಜ್ಯಗಳಲ್ಲಿ ಒಟ್ಟು ಸಬ್ಸಡಿ ಗರಿಷ್ಠ ಶೇಕಡಾ 80 ರಷ್ಟಾಗಲಿದೆ.ಕೇಂದ್ರ ಸರ್ಕಾರದ ಸಬ್ಸಿಡಿ ಯೋಜನೆಯಡಿ ಟ್ರಾಕ್ಟರ್ ಪಡೆಯಲು ಅರ್ಜಿ ಭರ್ತಿ ಮಾಡಬೇಕು. ಈ ಅರ್ಜಿಯಲ್ಲಿ ಕೆಲ ನಿಬಂಧನೆಗಳಿವೆ. ಅರ್ಹರನ್ನು ಪರಿಶೀಲಿಸಿ ಸರ್ಕಾರ ಸಬ್ಸಡಿ ನೀಡಲಿದೆ.ಅರ್ಜಿದಾರನ್ನು ಭಾರತೀಯ ನಾಗರೀಕರನಾಗಿರಬೇಕುಅರ್ಜಿದಾರನ ವಯಸ್ಸು 18 ವರ್ಷ ಮೇಲ್ಪಟ್ಟಿರಬೇಕು ಹಾಗೂ 60 ವರ್ಷದೊಳಗಿರಬೇಕುಅರ್ಜಿದಾರನ ಕುಟುಂಬದ ಆದಾಯ ವಾರ್ಷಿಕ 1.5 ಲಕ್ಷಕ್ಕಿಂತ ಮೀರಬಾರದುಅರ್ಜಿದಾರ ಸಣ್ಣ ರೈತರ ಮಾನದಂಡ ಅನ್ವಯವಾಗಬೇಕು

ಅರ್ಜಿದಾರ ಸಣ್ಣ ರೈತರ ಮಾನದಂಡ ಅನ್ವಯವಾಗಬೇಕುಟ್ರಾಕ್ಟರ್ ಖರೀದಿಸುವ ರೈತ ತನ್ನ ಹೆಸರಿನಲ್ಲಿ ಕೃಷಿ ಭೂಮಿ ಹೊಂದಿರಬೇಕುಅರ್ಜಿದಾರ ಇತರ ಯಾವುದೇ ಸಬ್ಸಿಡಿ ಆಧಾರಿತ ಯೋಜನೆಯ ಫಲಾನುಭವಿಯಾಗಿರಬಾರದುಟ್ರಾಕ್ಟರ್‌ಗೆ ಅರ್ಜಿ ಹಾಕುವ ರೈತ ಕಳೆದ 7 ವರ್ಷದಲ್ಲಿ ಯಾವುದೇ ಟ್ರಾಕ್ಟರ್ ಖರೀದಿಸಿರಬಾರದುಸಬ್ಸಿಡಿ ಟ್ರಾಕ್ಟರ್ ಪಡೆಯಲು ಬೇಕಾದ ದಾಖಲೆ ಪತ್ರಆಧಾರ್ ಕಾರ್ಡ್ಬ್ಯಾಂಕ್ ಖಾತೆ ವಿವರಗುರುತಿನ ಚೀಟಿ ದಾಖಲೆ (ಪ್ಯಾನ್ ಕಾರ್ಡ್, ಮತದಾರನ ಚೀಟಿ, ಪಾಸ್‌ಪೋರ್ಟ್, ಡ್ರೈವಿಂಗ್ ಲೆಸೆನ್ಸ್, ಇತ್ಯಾದಿ ಸೇರಿದಂತೆ)ಭಾವಚಿತ್ರ (ಪಾಸ್‌ಪೋರ್ಟ್ ಸೈಜ್ ಫೋಟೋ)ಭೂಮಿಯ ವಿವರ, ದಾಖಲೆ ಪತ್ರ

ಅರ್ಜಿಯಲ್ಲಿ ರೈತ ತುಂಬಬೇಕಾದ ಮಾಹಿತಿಅರ್ಜಿದಾರನ ಹೆಸರು(ಆಧಾರ್ ಕಾರ್ಡ್‌ನಲ್ಲಿರುವ ಹೆಸರು)ಅರ್ಜಿದಾರನ ಹುಟ್ಟಿದ ದಿನಾಂಕಲಿಂಗತಂದೆ ಅಥವಾ ಪತಿಯ ಹೆಸರುಅರ್ಜಿದಾರನ ವಿಳಾಸ, ಜಿಲ್ಲೆ, ತಾಲೂಕು, ಹೊಬಳಿಜಾತಿ ವಿವರಅರ್ಜಿದಾರನ ಮೊಬೈಲ್ ಸಂಖ್ಯೆ

Share with friends

Related Post

Leave a Reply

Your email address will not be published.