ಈಗ ಎಲ್ಲಾ ವಯೋವೃದ್ಧರಿಗೂ ಅವಕಾಶ ಕೊಡಲಾಗಿದೆ. ಪಿಎಂ ಜೆಎವೈ ಸ್ಕೀಮ್ನ ಸಮಗ್ರ ಮಾಹಿತಿ ಇಲ್ಲಿದೆ…ಆಯುಷ್ಮಾನ್ ಭಾರತ್ ಪಿಎಂ ಜನ್ ಆರೋಗ್ಯ ಯೋಜನೆಯ ಅಡಿಯಲ್ಲಿ ಫಲಾನುಭವಿಗಳಿಗೆ ವರ್ಷಕ್ಕೆ 5 ಲಕ್ಷ ರೂವರೆಗೆ ಇನ್ಷೂರೆನ್ಸ್ ಕವರೇಜ್ ಸಿಗುತ್ತದೆ. ವಿಮಾ ಸೌಲಭ್ಯ ಪಡೆಯಲು ಅಶಕ್ತ ಎನಿಸುವ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ದುರ್ಬಲವಾಗಿರುವ ಜನರನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಈ ಯೋಜನೆ ರೂಪಿಸಿದೆ. ಗ್ರಾಮೀಣ ಭಾಗದವರು, ಎಸ್ಸಿ ಎಸ್ಟಿ ಸಮುದಾಯದವರು, ನಿರ್ಗತಿಕರು, ಅಶಕ್ತರು ಈ ಸ್ಕೀಮ್ ಅಡಿಯಲ್ಲಿ ಉಚಿತವಾಗಿ ಇನ್ಷೂರೆನ್ಸ್ ಪಡೆಯಲು ಅವಕಾಶ ಇದೆ. ಇದೀಗ ಅಕ್ಟೊಬರ್ 29ರಿಂದ 70 ವರ್ಷ ವಯಸ್ಸು ದಾಟಿದ ಎಲ್ಲಾ ಹಿರಿಯ ನಾಗರಿಕರನ್ನೂ ಸ್ಕೀಮ್ ವ್ಯಾಪ್ತಿಗೆ ತರಲಾಗಿದೆ.
ಗ್ರಾಮೀಣ ಭಾಗದಲ್ಲಿ ಆಯುಷ್ಮಾನ್ ಭಾರತ್ ಯೋಜನೆಗೆ ಇವರು ಅರ್ಹರು16ರಿಂದ 59 ವರ್ಷ ವಯೋಮಾನದ ಯಾವುದೇ ವ್ಯಕ್ತಿ ಇರದ ಕುಟುಂಬ16ರಿಂದ 59 ವರ್ಷ ವಯೋಮಾನದ ಪುರುಷ ಸದಸ್ಯರು ಇಲ್ಲದ ಕುಟುಂಬಮಣ್ಣಿನಿಂದ ನಿರ್ಮಿಸಿದ ಒಂಟಿ ಕೊಠಡಿಯಲ್ಲಿ ವಾಸಿಸುತ್ತಿರುವ ಕುಟುಂಬಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದ ಕುಟುಂಬಎಲ್ಲರೂ ವಿಶೇಷಚೇತನರೇ ಇರುವ ಕುಟುಂಬಅನಿಯಮಿತ ಕೂಲಿಯೇ ಪ್ರಮುಖ ಆದಾಯ ಮೂಲ ಇರುವ ನಿರ್ವಸತಿಗ ಕುಟುಂಬಭಿಕ್ಷುಕ ಕುಟುಂಬಚಿಂದಿ ಹಾಯುವವರ ಕುಟುಂಬ