ಶಾಕಿಂಗ್ ನ್ಯೂಸ್ : ಬಾಗಲಕೋಟೆಯಲ್ಲಿ ‘ಹೇರ್ ಡ್ರೈಯರ್’ ಸ್ಪೋಟಗೊಂಡು ಮಹಿಳೆಯ ಎರಡು ಕೈಗಳ ಬೆರಳುಗಳು ಛಿದ್ರ!ಬಾಗಲಕೋಟೆ

ಬಾಗಲಕೋಟೆಯಲ್ಲಿ ಘೋರ ದುರಂತ ಒಂದು ನಡೆದಿದ್ದು, ಮಹಿಳೆ ಒಬ್ಬರು ಹೇರ್ ಡ್ರೈಯರ್ ಬಳಸುತ್ತಿರುವ ಸಂದರ್ಭದಲ್ಲಿ ಹೇರ್ ಡ್ರೈಯರ್ ಸ್ಪೋಟಗೊಂಡು ಮಹಿಳೆಯ ಎರಡು ಕೈಗಳ ಬೆರಳುಗಳು ಛಿದ್ರ ಛಿದ್ರವಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ಪಟ್ಟಣದಲ್ಲಿ ಈ ಒಂದು ಅವಘಡ ಸಂಭವಿಸಿದೆ.ಹೌದು ಹೇರ್ ಡ್ರೈಯರ್ ಸ್ಪೋಟಗೊಂಡು ಮಹಿಳೆಗೆ ಗಂಭೀರವಾದ ಗಾಯಗಳಾಗಿರುವ ಘಟನೆ, ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದಲ್ಲಿ ಈ ಒಂದು ಘಟನೆ ನಡೆದಿದೆ. ಹೇರ್ ಡ್ರೈಯರ್ ಸ್ಫೋಟವಾಗಿ ಮಹಿಳೆಯ ಎರಡು ಕೈಗಳು ಛಿದ್ರವಾಗಿವೆ. ತಕ್ಷಣ ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಶಶಿಕಲಾ ಎನ್ನುವವರು ಹೇರ್ ಡ್ರೈಯರ್ ಅನ್ನು ಆನ್ಲೈನ್ ನಲ್ಲಿ ಆರ್ಡರ್ ಮಾಡಿದರು. ಆದರೆ ಅವರು ಇಲ್ಲದ ವೇಳೆ ಬಸಮ್ಮ ಎನ್ನುವವರು ಆ ಹೇರ್ ಡ್ರೈಯರ್ ಪಾರ್ಸಲ್ ಅನ್ನು ತೆಗೆದುಕೊಂಡಿದ್ದರು. ಈ ವೇಳೆ ಅವರು ಹೇರ್ ಡ್ರೈಯರ್ ಅನ್ನು ಓಪನ್ ಮಾಡಿ ಸ್ವಿಚ್ ಆನ್ ಮಾಡಿದ ಕೂಡಲೇ ಬ್ಲಾಸ್ಟ್ ಆಗಿದೆ.ಮೃತ ಯೋಧನ ಪತ್ನಿ ಬಸಮ್ಮಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೊರಿಯರ್ ಓಪನ್ ಮಾಡಿ ಸ್ವಿಚ್ ಆನ್ ಮಾಡಿದ ತಕ್ಷಣ ಹೇರ್ ಡ್ರೈಯರ್ ಬ್ಲಾಸ್ಟ್ ಆಗಿದೆ. ಬಸಮಗೆ ಸದ್ಯ ಇಳಕಲ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share with friends

Related Post

Leave a Reply

Your email address will not be published.