ಸಿಇಟಿ ನೋಂದಣಿಗೆ ಆಧಾರ್ ಲಿಂಕ್?: ಸರ್ಕಾರಕ್ಕೆ ಕೆಇಎ ಪ್ರಸ್ತಾವ safgroupPosted on October 30, 2024 Saf news job education No Comments ಸಿಇಟಿ ನೋಂದಣಿಗೆ ಆಧಾರ್ ಲಿಂಕ್?: ಸರ್ಕಾರಕ್ಕೆ ಕೆಇಎ ಪ್ರಸ್ತಾವಬೆಂಗಳೂರು: ಸಿಇಟಿ ಮೂಲಕ ಹಂಚಿಕೆಯಾಗುವ ವೃತ್ತಿಪರ ಕೋರ್ಸುಗಳ ಸೀಟುಗಳ ದುರುಪಯೋಗ ತಡೆಗಟ್ಟಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಆಧಾರ್ ಆಧಾರಿತ ಪರೀಕ್ಷಾ ನೋಂದಣಿ ವ್ಯವಸ್ಥೆ ಜಾರಿಗೊಳಿಸಲು ಅನುಮತಿ ಕೋರಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಪ್ರಾಧಿಕಾರ ಸಲ್ಲಿಸಿರುವೆ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಪೂರಕವಾಗಿ ಸ್ಪಂದಿಸಿದ್ದು, ಶೀಘ್ರದಲ್ಲೇ ಒಪ್ಪಿಗೆ ಸಿಗುವ ನಿರೀಕ್ಷೆ ಇದೆ ಎಂದು ಕೆಇಎ ಕಾರ್ಯನಿರ್ವಾಹಕನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ. ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳುವ ವೇಳೆ ಆಧಾರ್ ಲಿಂಕ್ ಮಾಡುವುದರಿಂದ ಅಭ್ಯರ್ಥಿಗಳ ಫೋಟೋ, ಅವರ ಫೋನ್ ನಂಬರ್, ವಿಳಾಸಗಳ ಅಧಿಕೃತತೆ, ಖಚಿತತೆ ಸಿಗುತ್ತದೆ. ಇದು ಸೀಟ್ ಬ್ಲಾಕಿಂಗ್ ಮಾಡುವ ಅಕ್ರಮಗಳನ್ನು ತಡೆಯಲು ನೆರವಾಗುತ್ತದೆ ಎಂದು ಪ್ರಸನ್ನ ಹೇಳಿದರು Post Views: 13 Share with friends