ಗುರುವಾರ ಪ್ರತಿ ಕೆ.ಜಿ ಬೆಳ್ಳಿಯ ದರ ಬುಧವಾರದ ದರಕ್ಕೇ ಅಂದರೆ 93,500 ರೂ.ಗೆ ಸ್ಥಿರಗೊಂಡಿದೆ.ಬೆಂಗಳೂರಿನಲ್ಲಿ 80 ಸಾವಿರ!: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ದರವು 80,230 ರೂ. ಹಾಗೂ ಕೆ.ಜಿ ಬೆಳ್ಳಿ ದರವು 96,600 ರೂ.ನಂತೆ ಮಾರಾಟವಾಗಿದೆ. ಹಬ್ಬದ ಋತುವಿನಲ್ಲಿ ಬೇಡಿಕೆ ಹೆಚ್ಚಿರುವುದರಿಂದ ಬೆಲೆಯೇರಿಕೆಯಾಗಿದೆ.
ಇನ್ನೂ ಹೆಚ್ಚಲಿದೆ ಧಾರಣೆ: ಷೇರುಪೇಟೆಯಲ್ಲಿ ಏರಿಳಿತ ಮುಂದುವರಿ ದಿರುವಂತೆಯೇ ಹೂಡಿಕೆಗಾಗಿ ಬಹುತೇಕರ ಗಮನ ಬಂಗಾರದ ಮೇಲಿದೆ. ಚಿನ್ನಾಭರಣ ಖರೀದಿ ಒಂದೆಡೆಯಾದರೆ, ಚಿನ್ನದ ಗಟ್ಟಿ ಖರೀದಿ ಮಾಡಿಟ್ಟುಕೊಳ್ಳವವರು ಇನ್ನೊಂದಿಷ್ಟು ಜನ. ಈ ನಡುವೆ ಬಂಗಾರದ ಬೆಲೆ ಗಗನಮುಖಿ ಯಾಗಿದ್ದು, ಇದು 2025ರ ಆರಂಭದಲ್ಲಿ ಮತ್ತಷ್ಟು ಹೆಚ್ಚಲಿದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು. ಭಾರತದ ಮಟ್ಟಿಗೆ ಹೇಳುವುದಾದರೆ ದೇಶದ ಒಟ್ಟಾರೆ ಚಿನ್ನದ ಬೇಡಿಕೆಯಲ್ಲಿ ಶೇಕಡ 60ರಷ್ಟು ಬೇಡಿಕೆ ಗ್ರಾಮೀಣ ಪ್ರದೇಶದಿಂದ ಬರುತ್ತದೆ. ಕಳೆದ ಎರಡು ದಶಕಗಳಲ್ಲಿ ಗ್ರಾಮೀಣ ಜನರ ಆದಾಯ ಮತ್ತು ಅವರು ಮಾಡುವ ವೆಚ್ಚದಲ್ಲಿ ಏರಿಕೆಯಾಗಿದೆ. ಇದರಿಂದ ಅವರು ಹೆಚ್ಚು ಹೆಚ್ಚು ಚಿನ್ನ ಖರೀದಿಗೆ ಮುಂದಾಗುತ್ತಿದ್ದಾರೆ. ಇನ್ನು, ಮೇಲ್ಮಧ್ಯಮ ವರ್ಗದವರು ಸುರಕ್ಷಿತ ಹೂಡಿಕೆ ಎಂದು ಚಿನ್ನದ ಕಡೆ ಮುಖ ಮಾಡಿದ್ದಾರೆ.
290 ಟನ್ ಬಂಗಾರ ಖರೀದಿಸಿದ ಚೀನಾ: ಅಮೆರಿಕದಿಂದ ಹಣಕಾಸು ನಿರ್ಬಂಧ ಎದುರಿಸುತ್ತಿರುವ ದೇಶಗಳು ರಾಜಕೀಯ ಮತ್ತು ಆರ್ಥಿಕ ಒತ್ತಡವನ್ನು ತಡೆದುಕೊಳ್ಳಲು ಚಿನ್ನ ಖರೀದಿಸುತ್ತಿವೆ. ಉದಾಹರಣೆಗೆ ಚೀನಾದ ಸೆಂಟ್ರಲ್ ಬ್ಯಾಂಕ್ 2023ರಲ್ಲಿ 10 ತಿಂಗಳ ಕಾಲ ನಿರಂತರವಾಗಿ ಚಿನ್ನದ ದಾಸ್ತಾನನ್ನು ಹೆಚ್ಚಿಸಿದೆ. ಡಾಲರ್ ಮೇಲಿನ ಅವಲಂಬನೆ ಮತ್ತು ಪಶ್ಚಿಮದಲ್ಲಿನ ಭೌಗೋಳಿಕ ರಾಜಕೀಯ ಬಿಕ್ಕಟ್ಟಿನಿಂದ ದೂರ ಉಳಿಯಲು ಈ ತಂತ್ರದ ಮೊರೆ ಹೋಗಿತ್ತು. 2024ರಲ್ಲೂ ಈ ಪ್ರವೃತ್ತಿ ಮುಂದುವರಿಸಿದ ಚೀನಾ 2024ರ ಮೊದಲ ತ್ರೖೆಮಾಸಿಕದಲ್ಲಿ 290 ಟನ್ ಚಿನ್ನ ಖರೀದಿಸಿದೆ. ಟರ್ಕಿ, ಸಿಂಗಾಪುರ, ಬ್ರೆಜಿಲ್, ಭಾರತ ಕೂಡ ಚಿನ್ನ ಖರೀದಿ ಹೆಚ್ಚಿಸಿವೆ.ನಿಮಗೆ ಗೊತ್ತೆ?: ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಅಂದರೆ 1947ರಲ್ಲಿ 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ ಬರೀ 32 ರೂ. ಇತ್ತು. 1964ರಲ್ಲಿ 63 ರೂ., 1974ರಲ್ಲಿ 506 ರೂ., 1984ರಲ್ಲಿ 1,970 ರೂ., 1990ರಲ್ಲಿ 3,200 ರೂ. ಇತ್ತು.
ಬಂಗಾರದ ದರ ಹೆಚ್ಚಳಕ್ಕೆ ಪ್ರಮುಖ ಕಾರಣಕೇಂದ್ರೀಯ ಬ್ಯಾಂಕುಗಳಿಂದ ಚಿನ್ನ ಖರೀದಿ ಹೆಚ್ಚಳ: ಜಗತ್ತಿನ ವಿವಿಧ ದೇಶಗಳ ಕೇಂದ್ರೀಯ ಬ್ಯಾಂಕುಗಳು ಹಿಂದೆಂದೂ ಕಾಣದ ರೀತಿಯಲ್ಲಿ ಚಿನ್ನದ ಖರೀದಿಯನ್ನು ಹೆಚ್ಚಿಸುತ್ತಿವೆ. ರಷ್ಯಾ-ಯೂಕ್ರೇನ್ ಸಂಘರ್ಷದ ನಂತರ ಶುರುವಾದ ಈ ಬೆಳವಣಿಗೆ ಈಗಲೂ ಮುಂದುವರಿದೆ.ಬಡ್ಡಿದರ ಕಡಿತ: ಅಮೆರಿಕದ ಫೆಡರಲ್ ರಿಸರ್ವ್ನ ಬಡ್ಡಿದರ ಕಡಿತವಾಗಿರುವ ಕಾರಣ ಚಿಲ್ಲರೆ ಹೂಡಿಕೆದಾರರು ಮತ್ತು ಸಾಂಸ್ಥಿಕ ಹೂಡಿಕೆದಾರರು ಚಿನ್ನ ಖರೀದಿಗೆ ಗಮನಹರಿಸಿದ್ದಾರೆ.ರಾಜಕೀಯ ಬಿಕ್ಕಟ್ಟು: ಪ್ರಸ್ತುತ ಚಾಲ್ತಿ ಯಲ್ಲಿರುವ ರಾಜಕೀಯ ಬಿಕ್ಕಟ್ಟು ಕೂಡ ಬಂಗಾರದ ಬೆಲೆ ಏರಿಕೆಗೆ ಪ್ರಮುಖ ಕಾರಣ. ವಾಣಿಜ್ಯ ಸಮರ, ನಿರ್ಬಂಧ, ಜಾಗತಿಕ ಬಿಕ್ಕಟ್ಟು ಎಲ್ಲವೂ ಪರಿಣಾಮ ಬೀರಿವೆ.