ರೈಲುಗಳ ಡೀಸೆಲ್ ಇಂಜಿನ್‌ಗಳನ್ನು ಕಾರ್ಯಕ್ಷಮತೆ ಆಧರಿಸಿ ವಿಂಗಡಿಸಲಾಗಿದೆ. ಡೀಸೆಲ್ ಟ್ಯಾಂಕ್‌ಗಳು 5000, 5,500 ಮತ್ತು 6,000 ಲೀಟರ್ ಸಾಮರ್ಥ್ಯದವು. ರೈಲಿನ ಮೈಲೇಜ್ ಹೊರೆ ಮತ್ತು ಕೋಚ್‌ಗಳ ಸಂಖ್ಯೆಯನ್ನು ಅವಲಂಬಿಸಿರುತ್ತದೆ
ಈಗಾಗಲೇ ಹಲವು ಭಾಗದಲ್ಲಿ ರೈಲುಗಳ ವಿದ್ಯುದೀಕರಣ ಪೂರ್ಣಗೊಂಡಿದೆ.
ವಿದ್ಯತ್ ಸಂಪರ್ಕ ಇಲ್ಲದ ಭಾಗದಲ್ಲಿ ರೈಲುಗಳು ಡೀಸೆಲ್ ಬಳಸಿ ಚಲಿಸುತ್ತವೆ. ಇಂದಿಗೂ ಹಲವು ಭಾಗಗಳಲ್ಲಿ ಡೀಸೆಲ್ ಇಂಜಿನ್‌ಗಳು ಚಾಲ್ತಿಯಲ್ಲಿವೆ. ಇಂದು ಈ ಡೀಸೆಲ್ ಇಂಜಿನ್‌ಗಳ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ರೈಲುಗಳ ಡೀಸೆಲ್ ಇಂಜಿನ್‌ಗಳ ಟ್ಯಾಂಕ್ ತುಂಬಾನೇ ದೊಡ್ಡದಾಗಿರುತ್ತವೆ. ಡೀಸೆಲ್ ಇಂಜಿನ್‌ಗಳನ್ನು ಅವುಗಳ ಕಾರ್ಯಕ್ಷಮತೆ ಆಧಾರದ ಮೇಲೆ ಮೂರು ವಿಧಗಳಾಗಿ ವಿಂಗಡಿಸಲಾಗುತ್ತದೆ. ಹಾಗೆಯೇ ಡೀಸೆಲ್ ಟ್ಯಾಂಕ್‌ಗಳು 5000, 5,500 ಮತ್ತು 6,000 ಲೀಟರ್ ಸಾಮಾರ್ಥ್ಯದ ಮೂರು ವಿಧಗಳಿವೆ. ದೀರ್ಘ ಪ್ರಯಾಣ ಹೊಂದಿರುವ ಕಾರಣ ಡೀಸೆಲ್ ಟ್ಯಾಂಕ್ ಸಾಮರ್ಥ್ಯವೂ ಅಧಿಕವಾಗಿರುತ್ತದೆ.
ರೈಲಿನ ಡೀಸೆಲ್ ಎಂಜಿನ್ ಮೈಲೇಜ್ ಅದರ ಮೇಲಿನ ಹೊರೆ ಮತ್ತು ರೈಲಿನಲ್ಲಿರುವ ಕೋಚ್‌ಗಳ ಸಂಖ್ಯೆಯನ್ನು ಅವಲಂಬಿಸಿರುತ್ತದೆ. ಸಾಮಾನ್ಯ 12 ಕೋಚ್ ಪ್ಯಾಸೆಂಜರ್ ರೈಲನ್ನು ಎಳೆಯುವ ಎಂಜಿನ್ 6 ಲೀಟರ್ ಡೀಸೆಲ್‌ನಲ್ಲಿ 1 ಕಿಲೋಮೀಟರ್ ದೂರವನ್ನು ಕ್ರಮಿಸುತ್ತದೆ. ಎಕ್ಸ್‌ಪ್ರೆಸ್ ರೈಲುಗಳ ಮೈಲೇಜ್ ಕೂಡ ಹೆಚ್ಚು ವ್ಯತ್ಯಾಸವಾಗಿರಲ್ಲ.
Post Views:
0