200 ರೂಪಾಯಿ ನೋಟ್ ಬ್ಯಾನ್ ಆಗುತ್ತಾ? ಮಾರುಕಟ್ಟೆಯಿಂದ 137 ಕೋಟಿ ಹಿಂಪಡೆದ ಆರ್ಬಿಐ safgroupPosted on October 8, 2024 Saf news job education No Comments 200 ರೂಪಾಯಿ ನೋಟ್ ಬ್ಯಾನ್ ಆಗುತ್ತಾ? ಮಾರುಕಟ್ಟೆಯಿಂದ 137 ಕೋಟಿ ಹಿಂಪಡೆದ ಆರ್ಬಿಐರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2,000 ರೂಪಾಯಿ ಮುಖಬೆಲೆಯ ನೋಟ್ಗಳನ್ನು ಭಾಗಶಃ ಹಿಂಪಡೆದುಕೊಂಡಿದೆ. ಎಲ್ಲಾ 2 ಸಾವಿರ ಮುಖಬೆಲೆ ನೋಟು ತಲುಪುವ ಮೊದಲೇ ಇದೀಗ 200 ರೂ. ಮುಖಬೆಲೆ ನೋಟ್ ಹಿಂಪಡೆಯುವ ಕೆಲಸವನ್ನು ಆರ್ಬಿಐ ಮಾಡುತ್ತಿದೆ. ಕೆಲ ವರದಿಗಳ ಪ್ರಕಾರ, ಆರ್ಬಿಐ ಮಾರುಕಟ್ಟೆಯಿಂದ 200 ರೂ.ಮುಖಬೆಲೆಯ ಅಂದಾಜ 137 ಕೋಟಿ ಮೌಲ್ಯದ ಹಣ ಹಿಂಪಡೆದುಕೊಂಡಿದೆ. ಕಳೆದ ಆರು ತಿಂಗಳಿನಿಂದಲೇ ಆರ್ಬಿಐ ಹಣ ಹಿಂಪಡೆಯುವ ಪ್ರಕ್ರಿಯೆಯನ್ನು ಆರಂಭಿಸಿದೆ ಎಂದು ವರದಿಯಾಗಿದೆ. ಆರ್ಬಿಐ ಯಾಕೆ ಹಣವನ್ನು ಹಿಂಪಡೆದುಕೊಳ್ಳುತ್ತಿದೆ ಎಂಬುದರ ಬಗ್ಗೆಮ ಹಲವು ಪ್ರಶ್ನೆಗಳು ಮಾರುಕಟ್ಟೆಯಲ್ಲಿ ಹುಟ್ಟಿಕೊಂಡಿವೆರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 200 ರೂ. ನೋಟುಗಳನ್ನು ಹಿಂಪಡೆಯುವ ಹಿಂದಿನ ಉದ್ದೇಶ ಬೇರೆಯಾಗಿದೆ. ಆರ್ಬಿಐ ನೋಟ್ ಬ್ಯಾನ್ ಮಾಡಲು ಹಣ ಹಿಂಪಡಯುತ್ತಿಲ್ಲ, ಬದಲಾಗಿ ನೋಟುಗಳ ಕಳಪೆ ಸ್ಥಿತಿಯಿಂದ ವಾಪಸ್ ಪಡೆಯುತ್ತಿದೆ. ಆರ್ಬಿಐ ತನ್ನ ಅರ್ಧ ವಾರ್ಷಿಕ ವರದಿಯಲ್ಲಿ 200 ರೂಪಾಯಿ ನೋಟುಗಳ ಗುಣಮಟ್ಟ ಇಳಿಕೆಯಾಗಿದ್ದರ ಪರಿಣಾಮ ಒಟ್ಟು 137 ಕೋಟಿಯನ್ನು ಮಾರುಕಟ್ಟೆಯಿಂದ ಹಿಂದಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಮಾಹಿತಿಯನ್ನು ನೀಡಿದೆ.ಕಳೆದ ವರ್ಷ ಭಾರತೀಯ ರಿಸರ್ವ್ ಬ್ಯಾಂಕ್ ಒಟ್ಟು 135 ಕೋಟಿ ಮೌಲ್ಯದ ನೋಟುಗಳನ್ನು ಮಾರುಕಟ್ಟೆಯಿಂದ ಹಿಂದಕ್ಕೆ ತೆಗೆದುಕೊಂಡಿತ್ತು. 200 ರೂ. ಮೌಲ್ಯದ ನೋಟುಗಳು ಹೆಚ್ಚು ಕೊಳಕು, ಹರಿದು ಡ್ಯಾಮೇಜ್ ಆಗಿವೆ. 500 ರೂಪಾಯಿ ಮೌಲ್ಯದ ನೋಟ್ಗಳೇ ಹೆಚ್ಚು ಹಾನಿಗೆ ಒಳಗಾಗಿವೆ. 2000 ರೂಪಾಯಿ ನೋಟ್ ಬಂದ್ ಆದ ನಂತರ ಮಾರುಕಟ್ಟೆಯಲ್ಲಿ 200 ರೂ. ನೋಟ್ ಹೆಚ್ಚು ಚಲಾವಣೆಯಾಗುತ್ತಿರುವ ಕಾರಣ ನೋಟಿನ ಕಾಗದ ಹೆಚ್ಚು ಡ್ಯಾಮೇಜ್ಗೆ ಒಳಗಾಗುತ್ತಿದೆ ಎಂದು ಬ್ಯಾಂಕಿಂಗ್ ತಜ್ಞರು ಹೇಳುತ್ತಾರೆ. 200 ರೂಪಾಯಿ ನೋಟ್ ಬ್ಯಾನ್ ಆಗುತ್ತಾ? ಮಾರುಕಟ್ಟೆಯಿಂದ 137 ಕೋಟಿ ಹಿಂಪಡೆದ Post Views: 2 Share with friends