ಇದೀಗ ಭಾರತೀಯ ಯುವಕ ಕಳೆದ 5 ತಿಂಗಳಿನಿಂದ ನಡಿಸೆದ ಸತತ ಪ್ರಯತ್ನಕ್ಕೆ ಫಲ ಸಿಕ್ಕಿದೆ. ಯುವ ಎಂಜಿನೀಯರ್ ಇದೀಗ ಟೆಸ್ಲಾದಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. ಕಳೆದ 5 ತಿಂಗಳ ಉದ್ಯೋಗಾಗಿ 300 ಅರ್ಜಿ, 500 ಇಮೇಲ್ ಕಳುಹಿಸಿದ್ದಾನೆ. 5 ತಿಂಗಳು ವೇತನ ಇಲ್ಲದೆ ಅಲೆದಾಡಿದ್ದಾನೆ. ಹೌದು ಪುಣೆಯ ಧ್ರುವ್ ಲೋಯಾ ಪಯಣ ಕೆಲಸ ಅರಸುತ್ತಿರುವ ಹಲವರಿಗೆ ಸ್ಪೂರ್ತಿಯಾಗಿದೆ. ಟೆಸ್ಲಾ ಉದ್ಯೋಗ ಗಿಟ್ಟಿಸಿಕೊಳ್ಳಲು ಈ ಯುವ ಎಂಜಿನೀಯರ್‌ಗೆ ಲಿಂಕ್ಡ್‌ಇನ್, ಚಾಟ್‌ಜಿಪಿ ಕೂಡ ನರವಾಗಿದೆ ಅನ್ನೋದು ವಿಶೇಷ.
ಕೆಲಸ ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಧ್ರುವ್ ಲೋಯಾ ಪಯಣ ನೆರವಾಗಲಿದೆ. ಕಾರಣ ಲಿಂಕ್ಡ್‌ಇನ್ ಮೂಲಕ ಕೆಲಸ ಹುಡುಕುವುದು, ರೆಸ್ಯೂಮ್ ತಯಾರಿಸಲು ಚಾಟ್‌ಜಿಪಿ ನೆರವು ಪಡೆದುಕೊಳ್ಳುವುದು, ತಂತ್ರಜ್ಞಾನಗಳ ಬಳಕೆ ಮಾಡಿಕೊಳ್ಳುವ ಮೂಲಕ ನಿಮ್ಮ ಪ್ರೂಫೈಲ್‌ನ್ನು ಸರಿಯಾಗಿ ಹಾಗೂ ಪರಿಣಾಮಕಾರಿಯಾಗಿ ರೆಡಿ ಮಾಡಿದರೆ ಕೆಲಸ ಗಿಟ್ಟಿಸಿಕೊಳ್ಳಲು ನೆರವಾಗಲಿದೆ ಎಂದು ಧ್ರುವ್ ಲೋಯಾ ಹೇಳಿದ್ದಾರೆ.