7 ಡಿವೈಎಸ್‌ಪಿ ವರ್ಗಾವಣೆ ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮತ್ತೆವರ್ಗಾವಣೆ , safgroupPosted on October 20, 2024 Saf news job education No Comments 7 ಡಿವೈಎಸ್‌ಪಿ ವರ್ಗಾವಣೆಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮತ್ತೆವರ್ಗಾವಣೆ ಪರ್ವ ಶುರುವಾಗಿದ್ದು, ಶುಕ್ರವಾರ ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳ 7 ಡಿವೈಎಸ್‌ಪಿ ಹಾಗೂ 55 ಪೊಲೀಸ್ ಇನ್ಸಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.ಪೊಲೀಸ್ ಸಿಬ್ಬಂದಿ ಮಂಡಳಿಯ ಸಭೆಯ ನಿರ್ಣಯದಂತೆ 7 ಡಿವೈಎಸ್‌ಪಿ ಹಾಗೂ 55 ಇನ್ಸ್‌ಪೆಕ್ಟರ್‌ಗಳನ್ನು ವಿವಿಧೆಡೆ ವರ್ಗಾಯಿಸಲಾಗಿದೆ. ಡಿವೈಎಸ್ ಪಿಗಳಾದ ಕೆ.ಎಂ.ಸತೀಶ್ ಅವರನ್ನು ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗಕ್ಕೆ ವರ್ಗಾಯಿಸಿದರೆ, ಗೋಪಾಲ್ ನಾಯಕ್ ಅವರನ್ನು ಬೆಂಗಳೂರಿನ ಬಿಎಂಟಿಎಫ್ ಗೆ ವರ್ಗಾಯಿಸಲಾಗಿದೆ. ಉಳಿದ ಡಿವೈಎಸ್ ಪಿಗಳನ್ನು ರಾಜ್ಯದ ಇತರ ಜಿಲ್ಲೆಗಳಿಗೆ ವರ್ಗಾವಣೆ ಮಾಡಲಾಗಿದೆ. 55 ಇನ್ಸ್‌ಪೆಕ್ಟರ್‌ಗಳ ಪೈಕಿ ರೇಣುಕಾ ಜೆಎಂ ವೈಟ್ ಫೀಲ್ಡ್ ಠಾಣೆಗೆ ವರ್ಗಾವಣೆಗೊಂಡರೆ, ಲಿಂಗರಾಜು ಅವರನ್ನು ಬೆಂಗಳೂರು ದಕ್ಷಿಣ ವಿಭಾಗದ ಸಿಇಎನ್ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. Post Views: 0 Share with friends