ದೀಪಾವಳಿ ಹಬ್ಬಕ್ಕೆ ಸರ್ಕಾರಿ ನೌಕರರ ಖಷಿ ಡಬಲ್ ಆಗಿದೆ.ಕೇಂದ್ರ ಸರ್ಕಾರವು ಈಗಾಗಲೇ ನೌಕರರಿಗೆ ತುಟ್ಟಿಭತ್ಯೆ ಹಾಗೂ ತುಟ್ಟಿ ಪರಿಹಾರವನ್ನು ಘೋಷಿಸಿದೆ. ದಿಪಾವಳಿಗೂ ಮೊದಲೇ ಶೇಕಡಾ 3ರಷ್ಟು ತುಟ್ಟಿಭತ್ಯೆ ಏರಿಕೆ ಮಾಡಿದೆ. ಅದರ ಪ್ರಮಾಣ ಸದ್ಯ 53ಕ್ಕೆ ತಲುಪಿದೆ. ಇದರ ಬೆನ್ನಲ್ಲೆ ಹಲವು ಭತ್ಯೆಗಳು ಸಹ ಪರಿಷ್ಕರಣೆಗೊಳ್ಳಲಿವೆ ಎನ್ನಲಾಗಿದೆ. ಈ ಮಧ್ಯೆ ಎದುರಾದ ದೀಪಾವಳಿಗೆ ವಿವಿಧ ರಾಜ್ಯ ಸರ್ಕಾರಗಳು ಸರ್ಕಾರಿ ನೌಕರರಿಗೆ ದೀಪಾವಳಿ ಬೋನಸ್ ಘೋಷಿಸುವ ಮೂಲಕ ಉದ್ಯೋಗಿಗಳ ಖಷಿ ಹೆಚ್ಚಿಸಿವೆ. ಹೆಚ್ಚುತ್ತಿರುವ ಬೆಲೆ ಏರಿಕೆ, ಹಣದುಬ್ಬರದಂತಹ ಸಂದರ್ಭದಲ್ಲಿ ನೌಕರರಿಗೆ ಸರ್ಕಾರಗಳು ಆಸರೆಯಾಗಿವೆ.
ಉತ್ತರ ಪ್ರದೇಶದ ರಾಜ್ಯ ಸರ್ಕಾರವು ದೀಪಾವಳಿ ಪ್ರಯುಕ್ತ ತನ್ನ ನೌಕರರಿಗೆ ಬೋನಸ್ ಘೋಷಿಸಿದೆ. ಇದರ ಪ್ರಕಾರ ನೌಕರರು ಈ ದೀಪಾವಳಿಗೆ ಒಂದು ತಿಂಗಳು ಹಣವನ್ನು ಹೆಚ್ಚುವರಿಯಾಗಿ ಪಡೆಯಲಿದ್ದಾರೆ. ಶೀಘ್ರವೇ ಈ ಹಣ ಲಕ್ಷಾಂತರ ನೌಕರರ ಬ್ಯಾಂಕ್ ಖಾತೆಗೆ ಜಮೆ ಆಗಲಿದೆ.ಗುಜರಾತ್ ರಾಜ್ಯ ಸರ್ಕಾರ ಸಹ ಸರ್ಕಾರಿ ಉದ್ಯೋಗಿಗಳಿಗೆ ದೀಪಾವಳಿ ಬೋನಸ್ ಘೋಷಣೆ ಮಾಡಿದ್ದು, ಶೀಘ್ರವೇ ಬಿಡುಗಡೆ ಮಾಡಲಿದೆ. ಭೂಪೇಂದ್ರ ಪಟೇಲ್ ಅವರು ನೌಕರರಿಗೆ ಹಬ್ಬಕ್ಕೆ ಗಿಫ್ಟ್ ನೀಡುವ ಮೂಲಕ ಖುಷಿ ಹೆಚ್ಚಿಸಿದ್ದಾರೆ.
ಕೇಂದ್ರ ಸರ್ಕಾರ ಬೋನಸ್ ಘೋಷಣೆ ಜೊತೆಗೆ ಕೇಂದ್ರ ಹಣಕಾಸು ಇಲಾಖೆಯು ನೌಕರರ ಒಂದು ತಿಂಗಳ ವೇತನಷ್ಟು ನಾನ್ ಪ್ರೊಡಕ್ಟಿವಿಟಿ ಲಿಂಕ್ಡ್ ಬೋನಸ್ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದೆ. ಒಟ್ಟಾರೆ ನೌಕರರಿಗೆ ಈ ವರ್ಷ ಎರಡು ಭಾರಿ ವಿವಿಧ ಆರ್ಥಿಕ ಹೆಚ್ಚಳದ ಲಾಭ ಪಡೆದುಕೊಂಡಿದ್ದಾರೆ.ಇತ್ತ ದೆಹಲಿ ರಾಜ್ಯ ಸರ್ಕಾರವು ನೈರ್ಮಲ್ಯ ಕೆಲಸಗಾರರಿಗೆ ದೀಪಾವಳಿ ಬೋನಸ್ ನೀಡುವುದಾಗಿ ಘೋಷಿಸಿದೆ. ಹಬ್ಬಕ್ಕೆ ಸ್ವಚ್ಛತಾ ಕಾರ್ಮಿಕರಿಗೂ ಸರ್ಕಾರ ಆದ್ಯತೆ ನೀಡಿದೆ.Shankrappa Parangi Oneindia