ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ನಾಲ್ಕನೇ ಪಟ್ಟಿ ಬಿಡುಗಡೆ ಮಾಡಿದೆ . ಕಾಂಗ್ರೆಸ್ 4 ನೇ ಪಟ್ಟಿಯಲ್ಲಿ 7 ಅಭ್ಯರ್ಥಿಗಳಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ.
1)ಲಿಂಗಸುಗೂರು ಕ್ಷೇತ್ರ : ದುರ್ಗಪ್ಪ ಎಸ್ ಹೊಲಗೇರಿ
2) ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರ : ಜಗದೀಶ್ ಶೆಟ್ಟರ್
3) ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರ : ದೀಪಕ್ ಚಿಂಚೋರೆ
4) ಶಿಗ್ಗಾಂವಿ ಕ್ಷೇತ್ರ-ಮೊಹಮದ್ ಯೂಸುಫ್ ಸವಣೂರು
5) ಹರಿಹರ ಕ್ಷೇತ್ರ -ನಂದಗಾವಿ ಶ್ರೀನಿವಾಸ
6) ಚಿಕ್ಕಮಗಳೂರು ಕ್ಷೇತ್ರ-ಹೆಚ್ ಡಿ ತಮ್ಮಯ್ಯ
7) ಶ್ರವಣಬೆಳಗೊಳ- ಎಂ.ಎ ಗೋಪಾಲಸ್ವಾಮಿ
ಏ.20 ರಿಂದ ನಿಗದಿಯಾಗಿದ್ದ ಗುಲಬರ್ಗಾ ವಿ.ವಿ. ಪದವಿ ಪರೀಕ್ಷೆ ಮುಂದೂಡಿಕೆ
ಕಲಬುರಗಿ : ವಿಧಾನಸಭೆ ಚುನಾವಣೆ ತರಬೇತಿಗೆ ಪ್ರಾಂಶುಪಾಲರು ಮತ್ತು ಕಾಲೇಜಿನ ಸಿಬ್ಬಂದಿಗಳನ್ನು ನಿಯೋಜಿಸಿರುವ ಕಾರಣ ಇದೇ ಏಪ್ರಿಲ್ 20 ರಿಂದ ಪ್ರಾರಂಭವಾಗಬೇಕಿದ್ದ ಗುಲಬರ್ಗಾ ವಿಶ್ವವಿದ್ಯಾಲಯದ ಪದವಿ ಕೋರ್ಸಿನ ಎಲ್ಲಾ ಪರೀಕ್ಷೆಗಳನ್ನು ಏಪ್ರಿಲ್ 27ಕ್ಕೆ ಮುಂದೂಡಲಾಗಿದೆ.ಪರಿಷ್ಕೃತ ಪರೀಕ್ಷಾ ವೇಳಾಪಟ್ಟಿ ನಂತರ ತಿಳಿಸಲಾಗುವುದು. ಈ ಬದಲಾವಣೆಯನ್ನು ಪ್ರಾಂಶುಪಾಲರು ಮತ್ತು ವಿದ್ಯಾರ್ಥಿಗಳು ಗಮನಿಸಬೇಕು ಎಂದು ವಿ.ವಿ.ಯ ಕುಲಸಚಿವರು(ಪರೀಕ್ಷಾಂಗ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ‘ಪದವಿ’ ಪಾಸಾದವರಿಗೆ ಉದ್ಯೋಗವಕಾಶ, ತಿಂಗಳಿಗೆ 16,800-75,000 ಸಂಬಳಬೆಂಗಳೂರು : ಮಾಜಿ ಸೈನಿಕರ ಕೊಡುಗೆ ಆರೋಗ್ಯ ಯೋಜನೆಯು ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಆನ್ ಲೈನ್ ಅರ್ಜಿ ಆಹ್ವಾನಿಸಿದೆ.ಕ್ಲರ್ಕ್, ಸಫಾಯಿವಾಲಾ, ಚೌಕಿದಾರ್, ಡೆಂಟಿಸ್ಟ್ ಹುದ್ದೆಗೆ ಆನ್ ಲೈನ್ ಅರ್ಜಿ ಆಹ್ವಾನಿಸಲಾಗಿದ್ದು, ಕ್ಲರ್ಕ್ ಹುದ್ದೆಗೆ ಪದವಿ ಪಾಸಾಗಿರಬೇಕು. ಡೆಂಟಿಸ್ಟ್ ಹುದ್ದೆಗೆ ಬಿಡಿಎಸ್ ,ಸಫಾಯಿವಾಲಾ ಹುದ್ದೆಗೆ ಲಿಟರಸಿ, ಚೌಕಿದಾರ್ ಹುದ್ದೆಗೆ 8 ನೇ ತರಗತಿ ಪಾಸಾಗಿರಬೇಕು. ಡೆಂಟಿಸ್ಟ್ ಹುದ್ದೆಗೆ ಮಾಸಿಕ 75,000 ಕ್ಲರ್ಕ್ ಹುದ್ದೆಗೆ ಮಾಸಿಕ 16,800, ಸಫಾಯಿವಾಲಾ ಹುದ್ದೆಗೆ ಮಾಸಿಕ 16,800 ಚೌಕಿದಾರ್ ಹುದ್ಗೆಗೆ ಮಾಸಿಕ 16,800 ನೀಡಲಾಗುತ್ತದೆ. ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ OIC ಸ್ಟೇಷನ್ HQ ECHS ಸೆಲ್C/o ಏರ್ ಫೋರ್ಸ್ ಸ್ಟೇಷನ್ ಜಾಲಹಳ್ಳಿ, ಬೆಂಗಳೂರು (KA)-560013 ಈ ವಿಳಾಸಕ್ಕೆ ಕಳುಹಿಸಬೇಕು. ಅರ್ಜಿ ಸಲ್ಲಿಸಲು ಏಪ್ರಿಲ್ 21, 2023 ಕೊನೆಯ ದಿನಾಂಕವಾಗಿದೆ.