Browse

ಕರ್ನಾಟಕ ಪೊಲೀಸರಿಗೆ ಗುಡ್ ನ್ಯೂಸ್: 20 ಲಕ್ಷದಿಂದ 50 ಲಕ್ಷಕ್ಕೆ ವಿಮಾ ಯೋಜನೆ ಮೊತ್ತ ಹೆಚ್ಚಳ

2023ರಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆಯಂದು ಗುಂಪು ವಿಮಾ ಮೊತ್ತವನ್ನು ಹೆಚ್ಚಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ಅದರಂತೆಯೇ ಇದೀಗ ಪೊಲೀಸರಿಗೆ 20 ಲಕ್ಷದಿಂದ 50 ಲಕ್ಷಕ್ಕೆ ವಿಶೇಷ ಗುಂಪು ವಿಮಾ ಯೋಜನೆ ಮೊತ್ತ ಹೆಚ್ಚಳ ಮಾಡಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಂದ ಆದೇಶ ಹೊರಡಿಸಲಾಗಿದೆ. ಬೆಂಗಳೂರು, ಅಕ್ಟೋಬರ್ 18: ಪೊಲೀಸರಿಗೆ (police) ವಿಶೇಷ ಗುಂಪು ವಿಮಾ ಯೋಜನೆ ಮೊತ್ತವನ್ನು 20 ಲಕ್ಷದಿಂದ ರೂ. 50 ಲಕ್ಷಕ್ಕೆ ಹೆಚ್ಚಳ ಮಾಡಿ ಶುಕ್ರವಾರ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಂದ ಆದೇಶ ಹೊರಡಿಸಿದೆ. ಆ ಮೂಲಕ ಕರ್ನಾಟಕದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಗುಡ್ ನ್ಯೂಸ್ ನೀಡಲಾಗಿದೆ. 2023ರಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆಯಂದು ಗುಂಪು ವಿಮಾ ಮೊತ್ತವನ್ನು ಹೆಚ್ಚಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆ ಮೂಲಕ ಅಧಿಕಾರಿಗಳಿಗೆ ಮತ್ತು ಅವರ ಕುಟುಂಬಗಳಿಗೆ ಸಕಾರಾತ್ಮಕ ಬೆಂಬಲವನ್ನು ವ್ಯಕ್ತಪಡಿಸಲಾಗಿತ್ತು.

Share with friends