24,000 ಅಡಿ ಎತ್ತರದಲ್ಲಿ ವಿಮಾನದ ಛಾವಣಿಯ ದೊಡ್ಡ ಭಾಗ ಹಾರಿಹೋಯಿತು ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಈ ಘಟನೆ ತುಂಬಾ ಭಯಾನಕ ಮತ್ತು ನಂಬಲಾಗದಂತಿತ್ತು. ಆದ್ರೆ ಈ ರೀತಿಯ ಘಟನೆಯೊಂದು ನಡೆದಿತ್ತು.
ವಿಮಾನದಲ್ಲಿದ್ದ 89 ಜನರ ಪ್ರಾಣ ಅಪಾಯದಲ್ಲಿತ್ತು, ಆದರೆ ಪೈಲಟ್ ಮತ್ತು ಸಿಬ್ಬಂದಿಯ ಧೈರ್ಯ ಮತ್ತು ಕ್ಷಿಪ್ರ ನಿರ್ಧಾರ ಈ ದುರಂತದಲ್ಲಿ ಅನೇಕ ಜನರನ್ನು ಬದುಕಿಸಿತು. ಇಷ್ಟು ದೊಡ್ಡ ದುರಂತ ಸಂಭವಿಸಿದರೂ ಪ್ರಯಾಣಿಕರು ಬದುಕುಳಿದಿದ್ದರು.
ಸ್ವಲ್ಪ ಸಮಯದಲ್ಲೇ ವಿಮಾನದ ಛಾವಣಿಯ ದೊಡ್ಡ ಭಾಗ ಸಿಡಿದು ಗಾಳಿಯಲ್ಲಿ ಹಾರಿಹೋಯಿತು. ಕ್ಯಾಬಿನ್‌ನಲ್ಲಿ ಒತ್ತಡ ಇಳಿಯಿತು ಮತ್ತು ಪ್ರಯಾಣಿಕರು ಮತ್ತು ಸಿಬ್ಬಂದಿ ಗಾಳಿಯಲ್ಲಿ ತೇಲಾಡಲು ಪ್ರಾರಂಭಿಸಿದರು
ಆ ಸಮಯದಲ್ಲಿ, ಪೈಲಟ್ ರಾಬರ್ಟ್ ಶೋರ್ನ್‌ಸ್ಟೈಮರ್ ಈ ಕಠಿಣ ಪರಿಸ್ಥಿತಿಯಲ್ಲಿಯೂ ತಮ್ಮ ಸ್ಥಿತಪ್ರಜ್ಞೆ ಕಳೆದುಕೊಳ್ಳಲಿಲ್ಲ. ತಕ್ಷಣ ತುರ್ತು ಲ್ಯಾಂಡಿಂಗ್‌ಗಾಗಿ ವಿಮಾನವನ್ನು ತಿರುಗಿಸಿದರು.
ಪ್ರಯಾಣಿಕರನ್ನು ಶಾಂತಗೊಳಿಸಲು ಮತ್ತು ಅವರನ್ನು ಸುರಕ್ಷಿತವಾಗಿರಿಸಲು ಸಿಬ್ಬಂದಿ ಪ್ರಮುಖ ಪಾತ್ರ ವಹಿಸಿದರು. ವಿಮಾನಯಾನದ ಸಿಬ್ಬಂದಿ ಎಲ್ಲರಿಗೂ ಧೈರ್ಯವಾಗಿರುವಂತೆ ಹೇಳಿದ್ದರು
ವಿಮಾನಯಾನ ಸಂಸ್ಥೆಯ ಸಿಬ್ಬಂದಿ, ಪ್ರಯಾಣಿಕರಿಗೆ ಆಮ್ಲಜನಕ ಮಾಸ್ಕ್ ಧರಿಸಲು ಮತ್ತು ಸೀಟ್ ಬೆಲ್ಟ್ ಕಟ್ಟಿಕೊಳ್ಳಲು ಹೇಳಿದರು. ವಿಮಾನದ ಛಾವಣಿ ಹಾರಿಹೋದರೂ, ವಿಮಾನದ ಉಳಿದ ಭಾಗ ಸುರಕ್ಷಿತವಾಗಿತ್ತು
ಇದರಿಂದ ವಿಮಾನ ಗಾಳಿಯಲ್ಲಿ ಒಡೆಯುವುದನ್ನು ತಪ್ಪಿಸಿ ಪೈಲಟ್‌ಗೆ ತುರ್ತು ಲ್ಯಾಂಡಿಂಗ್ ಮಾಡಲು ಅವಕಾಶ ಸಿಕ್ಕಿತು. ಹಾಗಾಗಿ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ
ಅದೇ ಸಮಯದಲ್ಲಿ, ಪ್ರಯಾಣಿಕರು ಶಾಂತವಾಗಿದ್ದರು ಮತ್ತು ಈ ಕಠಿಣ ಸಮಯದಲ್ಲಿ ಪೈಲಟ್ ಮತ್ತು ಸಿಬ್ಬಂದಿಗೆ ಸಂಪೂರ್ಣ ಬೆಂಬಲ ನೀಡಿದರು. ಅಂತಿಮವಾಗಿ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಯ್ತು.