ರದ್ದಾದ KAS ಪರೀಕ್ಷಾ ಖರ್ಚು:
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
ರದ್ದಾದ KAS ಪರೀಕ್ಷಾ ಖರ್ಚು:
✍🏻📋✍🏻📋✍🏻📋✍🏻📋✍🏻📋
⚫ 2024 ಅಗಸ್ಟ್-27 ರಂದು ನಡೆದಿದ್ದ KAS Prelims Exam ನಲ್ಲಿ ಕನ್ನಡಕ್ಕೆ ಅನುವಾದ ಮಾಡಲ್ಪಟ್ಟ ಪ್ರಶ್ನೆಗಳು ಅಸಮರ್ಪಕ ವಾಗಿದ್ದ ಹಿನ್ನೆಲೆಯಲ್ಲಿ ಅದನ್ನು ರದ್ದುಗೊಳಿಸಲಾಗಿತ್ತು. ಆದರೆ ಆ ಪರೀಕ್ಷೆಗೆ KPSC ಮಾಡಿದ ಒಟ್ಟು ಖರ್ಚು ಬರೋಬ್ಬರಿ 13.40 ಕೋಟಿ ರೂ.!!
⚫ ಇದರೊಂದಿಗೆ ಪರೀಕ್ಷಾ ಅಭ್ಯರ್ಥಿಗಳಿಂದ Exam ಗೆ ಹೋಗಿ ಬರಲು 20 ಕೋಟಿ ರೂ. ಗಿಂತಲೂ ಅಧಿಕ ವೆಚ್ಚವಾಗಿರಬಹುದೆಂದು ಅಂದಾಜಿಸಲಾಗಿದೆ.!!
⚫ KAS ಮರು ಪರೀಕ್ಷೆಯನ್ನು 2024 ಡಿಸೆಂಬರ್-29 ರಂದು ನಿಗದಿಪಡಿಸಿದ್ದು ಮರು ಪರೀಕ್ಷೆ ನಡೆಸಲು ಬೇಕು 15 ಕೋಟಿ ರೂ. ಹಾಗೂ ಮತ್ತೆ ಅಭ್ಯರ್ಥಿಗಳಿಗೆ ಪರೀಕ್ಷೆಗೆ ಹೋಗಿ ಬರೆಯಲು ಕನಿಷ್ಠ 20 ಕೋಟಿ ರೂ ಖರ್ಚಾಗಬಹುದು.!!
⚫ ಒಟ್ಟಾರೆಯಾಗಿ KAS Prelims ಒಂದೇ ಪರೀಕ್ಷೆಗೆ ಕನಿಷ್ಠ ಪಕ್ಷ 50 ಕೋಟಿ ರೂ. ಹಣ ಖರ್ಚಾಗುತ್ತದೆ. ಇದರಲ್ಲಿ ಅದೆಷ್ಟು ಕುಟುಂಬಗಳ ಮಕ್ಕಳಿಗೆ ಉದ್ಯೋಗ ನೀಡಬಹುದಾಗಿತ್ತು.? ಚಿಂತಕರ ಚಾವಡಿ ಈ ಕುರಿತು ಗಂಭೀರವಾಗಿ ಚಿಂತನೆ ಮಾಡಲಿ. ಶ್ರೀ ಸಾಮಾನ್ಯರ ತೆರಿಗೆ ಹಣ ಪೋಲಾಗದಂತೆ ತಡೆಯಲು ಹಾಗೂ ಅತೀ ಕಡಿಮೆ ಖರ್ಚಿನಲ್ಲಿ ಅತೀ ಉತ್ತಮ ರೀತಿಯಲ್ಲಿ ಪರೀಕ್ಷೆ ನಡೆಸುವ ಸಾಧ್ಯತೆಗಳನ್ನು ಕಂಡುಕೊಳ್ಳಲು ಪ್ರಯತ್ನಿಸಲಿ ಎಂಬುದು ಅಭ್ಯರ್ಥಿಗಳ ಅಹವಾಲು.!!
✍🏻📋✍🏻📋✍🏻📋✍🏻📋✍🏻📋