ದೇಶದ ಸ್ಥೂಲ ಆರ್ಥಿಕತೆಯ ಮೂಲಭೂತ ಅಂಶಗಳು ಉತ್ತಮವಾಗಿವೆ ಎಂದಿದ್ದಾರೆ.’ಭಾರತವು ವಿಶ್ವದ ಅತಿದೊಡ್ಡ ಬೆಳೆಯುತ್ತಿರುವ ಆರ್ಥಿಕತೆಯಾಗಿಯೇ ಉಳಿದಿದೆ.
2024-25ರ ಆರ್ಥಿಕ ವರ್ಷದಲ್ಲಿ ದೇಶದ ಬೆಳವಣಿಗೆ ದರ ಶೇ 7ರಷ್ಟು ಇರುತ್ತದೆ ಎಂದು ನಾವು ಅಂದಾಜಿಸಿದ್ದೇವೆ. ಗ್ರಾಮೀಣ ಅನುಭೋಗಿತನದ ಸುಧಾರಣೆ ಇದಕ್ಕೆ ಸಹಕಾರಿಯಾಗಿದೆ. ದೇಶದಲ್ಲಿ ಉತ್ತಮ ಬೆಳೆ ಆಗುತ್ತಿದೆ. ಆಹಾರೋತ್ಪನ್ನಗಳ ಉತ್ಪಾದನೆ ಉತ್ತಮವಾಗಿದ್ದು, ಕೆಲ ಅನಿಶ್ಚಿತತೆ ಹೊರತಾಗಿಯೂ ಹಣದುಬ್ಬರ ಶೇ 4.4ಕ್ಕೆ ಇಳಿಯುವ ಸಾಧ್ಯತೆ ಇದೆ’ಎಂದು ಐಎಂಎಫ್‌ನ ಏಷ್ಯಾ ಪೆಸಿಫಿಕ್ ವಿಭಾಗದ ನಿರ್ದೇಶಕ ಕೃಷ್ಣ ಶ್ರೀನಿವಾಸನ್ ಹೇಳಿದ್ದಾರೆ.
ಚುನಾವಣೆ ನಂತರ ದೇಶದ ಸುಧಾರಣಾ ಆದ್ಯತೆಗಳು ಈ ಮೂರು ವಿಷಯಗಳಲ್ಲಿ ಇರಬೇಕು ಎಂದು ಅವರು ಹೇಳಿದ್ದಾರೆ.
ಮೂರನೇಯದಾಗಿ, ಭೌತಿಕ ಅಥವಾ ಡಿಜಿಟಲ್ ಸೇರಿದಂತೆ ಯಾವುದೇ ಮೂಲಸೌಕರ್ಯ ಸುಧಾರಿಸುತ್ತಿರುವುದು ಬಹಳ ಮುಖ್ಯ. ಕೃಷಿ ಮತ್ತು ಭೂಸುಧಾರಣೆಯತ್ತ ಗಮನ ಹರಿಸಬೇಕಿದೆ. ಶಿಕ್ಷಣ ಮತ್ತು ಕೌಶಲವೃದ್ಧಿಯತ್ತ ಹೆಚ್ಚು ಚಿಂತಿಸಬೇಕಿದೆ’ಎಂದೂ ಹೇಳಿದ್ದಾರೆ.