VIRAL NEWS: ನನ್ನ ಹೆಂಡತಿ ಹೆಣ್ಣೇ ಅಲ್ಲ ಎಂದು ಕೋರ್ಟ್ ಮೊರೆ ಹೋದ ಗಂಡ!

ತನ್ನ ಪತ್ನಿ ತೃತೀಯ ಲಿಂಗಿ, ಹೀಗಾಗಿ ಆಕೆಯ ಲಿಂಗತ್ವ ಪರೀಕ್ಷೆ ನಡೆಸಬೇಕು ಎಂದು ಆರೋಪಿಸಿ ವ್ಯಕ್ತಿಯೊಬ್ಬ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾನೆ.

ಪತ್ನಿಯೂ ತನ್ನ ಹತ್ತಿರ ತೃತೀಯಲಿಂಗಿ ಎಂದು ಹೇಳಿಕೊಂಡಿದ್ದು, ಮದುವೆಗೂ ಮುನ್ನ ಈ ಸಂಗತಿಯನ್ನು ಮುಚ್ಚಿಟ್ಟಿದ್ದಾಳೆ.

ಇದರಿಂದಾಗಿ ಮಾನಸಿಕ ಆಘಾತವನ್ನುಂಟಾಗಿದೆ. ಹೀಗಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ತನ್ನ ಪತ್ನಿಯ ಲಿಂಗವನ್ನು ಪರೀಕ್ಷಿಸಲು ದೆಹಲಿ ಪೊಲೀಸರಿಗೆ ನಿರ್ದೇಶನ ನೀಡುವಂತೆ ಮನವಿ ಮಾಡಿದ್ದಾರೆ.

ವಕೀಲ ಅಭಿಷೇಕ್ ಕುಮಾರ್ ಚೌಧರಿ ಸಲ್ಲಿಸಿದ ಮನವಿಯಲ್ಲಿ ವ್ಯಕ್ತಿಯ ಲಿಂಗದ ಗುರುತು ಖಾಸಗಿ ವಿಷಯವಾಗಿದೆ ಎಂದು ಉಲ್ಲೇಖಿಸಿದ್ದಾರೆ. ಆದರೂ, ಮದುವೆಯ ಸಂದರ್ಭದಲ್ಲಿ ಆರೋಗ್ಯಕರ ವೈವಾಹಿಕ ಜೀವನವನ್ನು ನಡೆಸಲು ಖಚಿತಪಡಿಸಿಕೊಳ್ಳಲು ಅವಕಾಶವಿದೆ. ಭಾರತದ ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ಎರಡೂ ವ್ಯಕ್ತಿಗಳ ಜೀವನಕ್ಕೆ ಮೂಲಭೂತ ಹಕ್ಕುಗಳನ್ನು ಗೌರವಿಸುವುದು ಬಹಳ ಮುಖ್ಯ ಎಂದು ಅರ್ಜಿಯಲ್ಲಿ ಹೇಳಲಾಗಿದೆ.ಕಾನೂನಿನಲ್ಲಿ ಪತ್ನಿ ಮಹಿಳೆ ಎಂದು ಅರ್ಹತೆ ಹೊಂದಿಲ್ಲದಿದ್ದರೆ ಅರ್ಜಿದಾರರು ಜೀವನಾಂಶವನ್ನು ಪಾವತಿಸಬೇಕಾಗಿಲ್ಲ. ಕೌಟುಂಬಿಕ ಹಿಂಸೆ ಮತ್ತು ವರದಕ್ಷಿಣೆ ಕಾನೂನುಗಳ ಅಡಿಯಲ್ಲಿ ಆರೋಪಗಳನ್ನು ಎದುರಿಸಬೇಕಾಗಿಲ್ಲ ಎಂದು ವಕೀಲರು ವಾದಿಸಿದ್ದಾರೆ

Share with friends

Related Post

Leave a Reply

Your email address will not be published.