BREAKING : ಬೆಂಗಳೂರಲ್ಲಿ ಬೆಚ್ಚಿ ಬೀಳಿಸೋ ಘಟನೆ : ‘BMTC’ ಕಂಡಕ್ಟರ್ ಕೊಲೆಗೆ ಯತ್ನಿಸಿದ ಪ್ರಯಾಣಿಕ!

ಬೆಂಗಳೂರಿನಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು BMTC ಬಸ್ ಕಂಡಕ್ಟರ್ ಗೆ ಕಲ್ಲಿನಿಂದ ಹೊಡೆದು ಕೊಲೆಗೆ ಯತ್ನಿಸಿರುವ ಘಟನೆ ಬೆಂಗಳೂರಿನ ಟಿನ್ ಫ್ಯಾಕ್ಟರಿ ಬಳಿ ಈ ಒಂದು ಘಟನೆ ನಡೆದಿದೆ.ಕಳೆದ ಒಂದು ತಿಂಗಳಲ್ಲಿ ಬಿ ಎಂ ಟಿ ಸಿ ಕಂಡಕ್ಟರ್ ಮೇಲೆ ಹಲ್ಲೆ ನಡೆಸುವ ಮೂಲಕ ಇದು 3ನೇ ಘಟನೆ ಯಾಗಿದೆ.

ಹೌದು ಬೆಂಗಳೂರಿನಲ್ಲಿ ಬಿಎಂಟಿಸಿ ಕಂಡಕ್ಟರ್ ಕೊಲೆಗೆ ಯತ್ನ ನಡೆದಿದ್ದು, ಪ್ರಯಾಣಿಕನೊಬ್ಬ ಕಂಡಕ್ಟರ್ ತಲೆಗೆ ಕಲ್ಲಿನಿಂದ ಹೊಡೆಡಿದ್ದಾನೆ.ಅಕ್ಟೋಬರ್ 18 ರಂದು ಟಿನ್ ಫ್ಯಾಕ್ಟರಿ ಬಳಿ ಈ ಒಂದು ಘಟನೆ ನಡೆದಿದೆ. ಕಂಡಕ್ಟರ್ ಹಾಗೂ ಪ್ರಯಾಣಿಕ ನಡುವೆ ಸಣ್ಣ ಗಲಾಟೆ ಆಗಿತ್ತು ಇದರಿಂದ ಕೋಪಗೊಂಡ ಪ್ರಯಾಣಿಕ ಕಲ್ಲಿನಿಂದ ಹೊಡೆದು ಕೊಲೆಗೆ ಎತ್ನಿಸಿದ್ದಾನೆ ಎಂದು ಹೇಳಲಾಗುತ್ತಿದೆ. ಇದೀಗ ಕಲ್ಲಿನಿಂದ ಹೊಡೆಯುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಇದೀಗ ಸೆರೆಯಾಗಿದೆ.

Share with friends

Related Post

Leave a Reply

Your email address will not be published.