Browse

By Election : ಬೊಮ್ಮಾಯಿ ಎದುರು ರೌಡಿಶೀಟರ್ ಗೆ ಟಿಕೆಟ್ – ಸ್ವಪಕ್ಷದ ವಿರುದ್ದ ಖಾದ್ರಿ ಕಿಡಿ.!

ತುಮಕೂರು : ಕಳೆದ 23 ವರ್ಷದಿಂದ ಹಗಲು ರಾತ್ರಿ ಎನ್ನದೆ ದುಡಿದು ಕಾಂಗ್ರೆಸ್ ಪಕ್ಷವನ್ನು ಕಟ್ಟಿದ್ದೇನೆ, ಕಷ್ಟದ ಸಂದರ್ಭ ಬಂದಾಗ ಕೂಡ ನಾನೊಬ್ಬನೇ ನಿಂತು ಎದುರಿಸಿದ್ದೇನೆ ಇಷ್ಟೆಲ್ಲಾ ಇರುವಾಗ ಶಿಗ್ಗಾವಿ ಉಪಚುನಾವಣೆ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿರುವುದು ಬಹಳ ಬೇಸರವಾಗಿದೆ ಎಂದು ಅಜ್ಜಂ ಪೀರ್ ಖಾದ್ರಿ ಹೇಳಿದರು.

ಈ ಬಗ್ಗೆ ಮಾತನಾಡಿದ ಅವರು, ಬೊಮ್ಮಾಯಿ ವಿರುದ್ಧ ಯಾರು ತಗೊಳ್ಳೋದಕ್ಕೆ ರೆಡಿ ಇರಲ್ಲಿಲ್ಲ ಅಂತಹ ಸಂದರ್ಭದಲ್ಲಿ ನಾನು ನಿಂತಿದ್ದೇನೆ, ಮೂರು ಬಾರಿ ಬೊಮ್ಮಾಯಿ ವಿರುದ್ಧ ಕಡಿಮೆ ಅಂತರದಿಂದ ಸೋತಿದ್ದೇನೆ. ಅಂದು ಕೈ ಮುಗಿದು ಬೇಡಿಕೊಂಡರು ಯಾರೊಬ್ಬರೂ ಪ್ರಚಾರಕ್ಕೆ ಬಂದಿಲ್ಲ ಎಂದು ಹೇಳಿದರು.

ಯಾವುದೇ ಕ್ಷೇತ್ರವಾಗಲಿ ಜನರು ಸ್ಥಳೀಯರಿಗೆ ಜಾಸ್ತಿ ಒಲವು ನೀಡುವುದು, ಈಗ ಹಾನಗಲ್ಲಿನ ಪಠಾಣ್ ಗೆ ಟಿಕೆಟ್ ನೀಡಿದ್ದಾರೆ, ಆತನೊಬ್ಬ ರೌಡಿ 17 ಕೇಸ್ ಗಳಿವೆ. ಹೀಗಿರುವಾಗ ಜನ ವೋಟ್ ಹಾಕುತ್ತಾರಾ ಎಂದು ಪೀರ್ ಖಾದ್ರಿ ಕಿಡಿಕಾರಿದರು.ಶಿಗ್ಗಾವಿ ಉಪ ಚುನಾವಣೆಯ ಟಿಕೆಟ್ ಕೈ ತಪ್ಪಲು ಯಾರದ್ದೋ ಕೈವಾಡವಿದೆ ಮುಂದಿನ ದಿನಗಳಲ್ಲಿ ಬೆಳಕಿಗೆ ಬರುತ್ತೆ.. ನನಗೆ ಟಿಕೆಟ್ ಸಿಕ್ಕದೆ ಇರೋದು ಕಾರ್ಯಕರ್ತರಿಗೆ ಬಹಳ ಬೇಸರವಾಗಿದೆ, ವಿಷ ಕುಡಿಯುವ ಮಟ್ಟಿಗೆ ಹೋಗಿದ್ದಾರೆ. ಪಕ್ಷೇತರವಾಗಿ ನಿಲ್ಲಲು ಒತ್ತಡ ಹಾಕುತ್ತಿದ್ದಾರೆ. ಆ ಬಗ್ಗೆ ಸದ್ಯದಲ್ಲೇ ಯೋಚನೆ ಮಾಡುತ್ತೇನೆ ಎಂದು ಹೇಳಿದರು

Share with friends