Browse

Crime : ರೈಲಿಗೆ ತಲೆಕೊಡಲು ಹೋದ ಯುವಕ – ಪೊಲೀಸರ ಸಮಯಪ್ರಜ್ಞೆಯಿಂದ ಪಾರು!

ಕೌಟುಂಬಿಕ ಕಲಹದ ಹಿನ್ನಲೆ ಯುವಕನೊಬ್ಬ ರೈಲು ಬರುವ ವೇಳೆ ಟ್ರ್ಯಾಕ್ ಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದು, ಆತನನ್ನು ಪೊಲೀಸರು ರಕ್ಷಿಸಿರುವ ಘಟನೆ ಬೆಂಗಳೂರಿನ ಯಲಹಂಕದಲ್ಲಿ ನಡೆದಿದೆ.

27 ವರ್ಷದ ಗೋಪಾಲ್ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ, ವರದಿಯ ಪ್ರಕಾರ, ಗೋಪಾಲ್ ತನ್ನ ಸಹೋದರನಿಗೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿ ಮನೆ ಬಿಟ್ಟು ಹೋಗಿದ್ದಾನೆ

ಇದರಂತೆ ಭಯಗೊಂಡ ಸಹೋದರ ಕೂಡಲೇ 112 ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.ಕೂಡಲೇ ಎಚ್ಚೆತ್ತ ಎ ಎಸ್ ಐ ನಾಗೇಶ್ ಹಾಗೂ ಕಾನ್ ಸ್ಟೇಬಲ್ ಸಂಜೀವ್ ಕುಮಾರ್ ಅವರು ಗೋಪಾಲ್ ಇರುವ ಸ್ಥಳವನ್ನು ಪತ್ತೆ ಹಚ್ಚಿ ಆತನಿದ್ದ ಸ್ಥಳಕ್ಕೆ ಆಗಮಿಸಿದರು. ಇದನ್ನು ನೋಡಿದ ಗೋಪಾಲ್ ರೈಲ್ವೇ ಹಳಿಯ ಮೇಲೆ ಓಡಲು ಆರಂಭಿಸುತ್ತಾನೆ. ಈ ವೇಳೆ ಗೋಪಾಲ್ ನನ್ನು ಹಿಂಬಾಲಿಸಿ ಆತನನ್ನು ಸುರಕ್ಷಿತವಾಗಿ ರಕ್ಷಣೆ ಮಾಡಲಾಗಿದೆ. ಈ ರಕ್ಷಣೆ ಕಾರ್ಯದಲ್ಲಿ ಇಬ್ಬರು ಪೊಲೀಸರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಬಳಿಕ ಆತನನ್ನು ಕುಟುಂಬಕ್ಕೆ ಸೇರಿಸುವ ಮುನ್ನ ಬುದ್ದಿ ಮಾತು ಹೇಳಿ ಕಳುಹಿಸಲಾಯಿತು.

ಸದ್ಯ ತಮ್ಮ ಪ್ರಾಣದ ಹಂಗನ್ನು ತೊರೆದು ಸಾರ್ವಜನಿಕರ ರಕ್ಷಣೆ ಮಾಡಿದ ಎ ಎಸ್ ಐ ನಾಗೇಶ್ ಹಾಗೂ ಕಾನ್ ಸ್ಟೇಬಲ್ ಸಂಜೀವ್ ಕುಮಾರ್ ರ ಸಮಯಪ್ರಜ್ಞೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.

Share with friends