ಕೋವಿಡ್ ವೇಳೆ ಯಮರಾಜನಾಗಿ ಜಾಗೃತಿ ಮೂಡಿಸಿದ್ದ ಪೊಲೀಸ್ ಪೇದೆ ದುರಂತ ಅಂತ್ಯ!

ಕೋವಿಡ್ ಸಂದರ್ಭದಲ್ಲಿ ಒಂದು ದಿನ ರಜೆ, ಒಂದು ದಿನ ವಿಶ್ರಾಂತಿ ಪಡೆಯದೇ, ಆರೋಗ್ಯ, ಕುಟುಂಬ ಲೆಕ್ಕಿಸದೆ ಪೊಲೀಸರು ಕರ್ತವ್ಯ ನಿರ್ವಹಿಸಿದ್ದರು. ಈ ವೇಳೆ ಪೊಲೀಸರು ಕರ್ತವ್ಯ ನಿರ್ವಹಣೆ ಜೊತೆಗೆ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡಿದ್ದರು. ಹೀಗೆ ಕೋವಿಡ್ ಮಾರಣಾಂತಿಕ ಸಾಂಕ್ರಾಮಿಕ ರೋಗದ ಕುರಿತು ಯಮರಾಜನ ವೇಷ ಧರಿಸಿ ಪೊಲೀಸ್ ಮುಖ್ಯ ಪೇದೆ ಜನರಲ್ಲಿ ಜಾಗೃತಿ ಮೂಡಿಸಿದ್ದರು.d

ಲಾಕ್‌ಡೌನ್ ವೇಳೆ ಕದ್ದು ಮುಚ್ಚಿ ತಿರುಗಾಟ, ಜನರ ಸಂಪರ್ಕ ಮಾಡಿ ಜೀವಕ್ಕೆ ಅಪಾಯ ತಂದುಕೊಳ್ಳಬೇಡಿ ಎಂದು ಪೊಲೀಸ್ ಪೇದೆ ಯಮರಾಜನಾಗಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದರು. ಆದರೆ ಈ ಮುಖ್ಯ ಪೊಲೀಸ್ ಪೇದೆ ಇದೀಗ ವಿದ್ಯುತ್ ಸ್ಪರ್ಶಿಸಿ ಮ-ತಪಟ್ಟಿದ್ದಾರೆ.

ಮಧ್ಯ ಪ್ರದೇಶ ಇಂದೋರ್‌ನ ಹೆಡ್ ಕಾನ್ಸ್‌ಸ್ಟೇಬಲ್ ಜವಾಹರ್ ಸಿಂಗ್ ಜದೌನ್ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾರೆ. ಶುಕ್ರವಾರ ಜವಾಹರ್ ಸಿಂಗ್‌ಗೆ ರಜಾ ದಿನವಾಗಿತ್ತು. ಹೀಗಾಗಿ ಮನೆಯಲ್ಲಿದ್ದ ಜವಾಹರ್ ಸಿಂಗ್ ದನದ ಕೊಟ್ಟಿಗೆಯನ್ನು ತೊಳೆದೆ ಶುಚಿಗೊಳಿಸಲು ಮುಂದಾಗಿದ್ದಾರೆ. ಪ್ರತಿ ವಾರದ ರಜೆಯಲ್ಲಿ ದನದ ಕೊಟ್ಟಿಗೆ ಶುಚಿ ಮಾಡುತ್ತಾರೆ. ಈ ಬಾರಿ ನೀರು ಹಾಕಿ ಸಂಪೂರ್ಣ ಶುಚಿಗೊಳಿಸಲು ಮುಂದಾದ ಜವಾಹರ್ ಸಿಂಗ್ ನೀರಿಗಾಗಿ ಮೋಟಾರು ಸ್ವಿಚ್ ಆನ್ ಮಾಡಿದ್ದಾರೆ. ಬಳಿಕ ಪೈಪ್ ಮೂಲಕ ಜನದ ಕೊಟ್ಟಿಗೆ ನೀರು ಹಾಯಿಸಿದ್ದಾರೆ.

Share with friends

Related Post

Leave a Reply

Your email address will not be published.