Browse

ಕನ್ನಡತಿ ಶ್ರೇಯಾಂಕ ಪಾಟೀಲ್ ಹೃದಯ ಕದ್ದ ಚೋರ ಯಾರು: ಹುಡುಗರ ಹಾರ್ಟ್ ಢಮಾರ್

ಆರ್‌ಸಿಬಿ ಸ್ಟಾರ್‌ ಆಲ್‌ರೌಂಡರ್‌, ಕರ್ನಾಟಕ ಕ್ರಶ್, ಟಗರು ಪುಟ್ಟಿ ಎಂದೇ ಖ್ಯಾತಿ ಪಡೆದಿರುವ ಕನ್ನಡತಿ ಶ್ರೇಯಾಂಕಾ ಪಾಟೀಲ್‌ ಅವರು ಪ್ರೀತಿಯಲ್ಲಿ ಬಿದ್ದಿರುವುದಾಗಿ ಹೇಳಿಕೊಂಡಿದ್ದಾರೆ.

ಈ ಬಗ್ಗೆ ಶೀಘ್ರದಲ್ಲೇ ನಿಮಗೆಲ್ಲರಿಗೂ ಹೇಳುತ್ತೇನೆ ಎನ್ನುವ ಮೂಲಕ ಹುಡುಗರಿಗೆ ಹಾರ್ಟ್‌ ಬ್ರೇಕ್‌ ಮಾಡಿದ್ದಾರೆ. ಶ್ರೇಯಾಂಕ ಪಾಟೀಲ್ ಅವರಿಗೆ ಬಾಯ್‌ ಫ್ರೆಂಡ್‌ ಇದ್ದಾರೆಂಬ ಸುದ್ದಿ ಆಗಾಗ ಕೇಳಿಬರುತ್ತಿತ್ತು. ಆದರೆ ಇದೀಗ ಇದಕ್ಕೆಲ್ಲ ಉತ್ತರ ನೀಡಿದ್ದಾರೆ.ಆರ್‌ಸಿಬಿ ಕಪ್ ಗಳಿಸಿದ ಬಳಿಕ ಶ್ರೇಯಾಂಕ ಮೇಲೆ ಅನೇಕ ಯುವಕರಿಗೆ ಕ್ರಶ್ ಆಗಿದ್ದುಂಟು. ಅದಲ್ಲದೆ ಈಕೆಗೆ ಬಾಯ್‌ ಫ್ರೆಂಡ್ ಇದ್ದಾರಾ ಎಂಬ ಬಗ್ಗೆ ಚರ್ಚೆಯನ್ನು ಮಾಡಲಾಗಿತ್ತು.ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಹಾಕಿಕೊಂಡ ಅವರು, ಒಬ್ಬ ವ್ಯಕ್ತಿ ತನ್ನ ಹೃದಯದಲ್ಲಿ ಪ್ರೀತಿ ತುಂಬಿದ್ದಾರೆ. ಶೀಘ್ರದಲ್ಲೇ ಈ ಬಗ್ಗೆ ಅಧಿಕೃತವಾಗಿ ಹೇಳುತ್ತೇನೆ ಎಂದಿದ್ದಾರೆ.

ಆರ್‌ಸಿಬಿ ತಂಡಕ್ಕೆ ಮೊದಲ ಕಪ್ ತಂದುಕೊಡುವಲ್ಲಿ ಪ್ರಮುಖರಾದವರಲ್ಲಿ ಶ್ರೇಯಾಂಕ ಪಾಟೀಲ್ ಒಬ್ಬರು. ಈ ಲೀಗ್‌ನಲ್ಲಿ ಅಂತಿಮ ಪಂದ್ಯದಲ್ಲಿ ಶ್ರೇಯಾಂಕಾ 3.3ಓವರ್‌ಗಳಲ್ಲಿ 12 ನೀಡಿ ನಾಲ್ಕು ವಿಕೆಟ್ ಕಬಳಿಸಿದ್ದರು. ಇವರ ಈ ಪ್ರದರ್ಶನ್ ಭಾರೀ ದೊಡ್ಡ ಸದ್ದು ಮಾಡಿತ್ತು.

Share with friends