CM Siddaramaiah, MUDA Case: ಸತತ 2 ಗಂಟೆ ವಿಚಾರಣೆ ಅಂತ್ಯ; ಕೂಲ್ ಆಗಿ ಶಿಳ್ಳೆ ಹೊಡೆಯುತ್ತಾ ಲೋಕಾ ಕಚೇರಿಯಿಂದ ಹೊರಬಂದ CM ಸಿದ್ದರಾಮಯ್ಯ!

CM Siddaramaiah, MUDA Case: ಸತತ 2 ಗಂಟೆ ವಿಚಾರಣೆ ಅಂತ್ಯ; ಕೂಲ್ ಆಗಿ ಶಿಳ್ಳೆ ಹೊಡೆಯುತ್ತಾ ಲೋಕಾ ಕಚೇರಿಯಿಂದ ಹೊರಬಂದ CM ಸಿದ್ದರಾಮಯ್ಯ!

ಮುಡಾ ಕೇಸ್ನಲ್ಲಿ (MUDA Case) ತನಿಖೆಗೆ ಹಾಜರಾಗುವಂತೆ ಸಿಎಂ ಸಿದ್ದರಾಮಯ್ಯಗೆ (CM Siddaramaiah) ಬುಲಾವ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಸದ್ಯ ಮೈಸೂರಿಗೆ ಸಿಎಂ ಸಿದ್ದರಾಮಯ್ಯ ಆಗಮಿಸಿ ಸತತ 2 ಗಂಟೆಗಳ ಕಾಲ ವಿಚಾರಣೆ ಎದುರಿಸಿದ್ದಾರೆ. ಲೋಕಾಯುಕ್ತ (Karnataka Lokayukta) ಎಸ್.ಪಿ.

ಉದೇಶ್ ನೇತೃತ್ವದಲ್ಲಿ ವಿಚಾರಣೆ ನಡೆಸಿದ್ದು, ಸಿಎಂ ಆಗಮನ ಹಿನ್ನೆಲೆಯಲ್ಲಿ ಮೈಸೂರಿನ ಲೋಕಾಯುಕ್ತ ಕಚೇರಿ ಬಳಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿತ್ತು. ಲೋಕಾ ಕಚೇರಿ ಸುತ್ತಲೂ ಖಾಕಿ ಕಣ್ಗಾವಲು ಜೋರಾಗಿದ್ದು, ವಿಚಾರಣೆ ಎದುರುಸಿ ಹೊರ ಬಂದ ಸಿಎಂ, ಚನ್ನಪಟ್ಟಣ ಚುನಾವಣಾ ಪ್ರಚಾರಕ್ಕೆ ತೆರಳಿದ್ದಾರೆ.

ಸಿಎಂಗೆ ಲೋಕಾಯುಕ್ತ ಎಸ್ಪಿ ಹಲವು ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆದುಕೊಂಡಿದ್ದಾರೆ. ಭೂ ಸ್ವಾಧೀನ, ಪರಿಹಾರ, ಡಿನೋಟಿಪಿಕೇಷನ್ ಹೇಗಾಯ್ತು? ಭೂ ಪರಿವರ್ತನೆ ವೇಳೆ ಸಿಎಂ ಆಗಿ ನಿಮ್ಮ ಪಾತ್ರ ಏನೇನಿತ್ತು? 50:50 ನಿಯಮದಡಿ ಸೈಟು ಹಂಚಿಕೆಗೆ ನೀವೇ ಶಿಫಾರಸ್ಸು ಮಾಡಿದ್ರಾ? ಸಿಎಂ ಆಗಿ ನೀವು ಯಾಱರಿಗೆ ಶಿಫಾರಸು ಪತ್ರಗಳನ್ನ ಕೊಟ್ಟಿದ್ರಿ? ಬೇರೆಡೆ ಬದಲಿ ನಿವೇಶನ ನೀಡಲು ಕಾರಣವೇನು? ಎಂಬಿತ್ಯಾದಿ ಪ್ರಶ್ನೆಗಳುನ್ನ ಲೋಕಾ ಪೊಲೀಸರು ಪ್ರಶ್ನಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಸಿಎಂ ಸಿದ್ದರಾಮಯ್ಯಗೆ ತನಿಖೆ ವೇಳೆ ದೂರುದಾರರು ಆರೋಪದಂತೆ ಪ್ರಶ್ನಾವಳಿಗಳನ್ನು ಸಿದ್ಧಪಡಿಸಿ ಮಾಹಿತಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.1) ನಿಮ್ಮ ಪಯ್ನಿಯ ಹೆಸರಿನಲ್ಲಿ ಎಷ್ಟು ಸೈಟ್ ಗಳು ಇವೆ? ಜಮೀನು ಎಷ್ಟಿದೆ?2) ಮುಡಾದಿಂದ ನಿಮಗೆ ಏನಾದ್ರೂ ಸೈಟ್ ಗಳು ಬಂದಿದೆಯಾ?3) ನಿಮ್ಮ ಕುಟುಂಬದಲ್ಲಿ ಯಾರಿಗೆಲ್ಲ ಮೂಡಾದಿಂದ ಸೈಟ್ ಗಳು ಬಂದಿವೆ4) ಸೈಟ್ ಗಳು ಬಂದಿದ್ರೆ ಯಾವ ಮಾನದಂಡದಲ್ಲಿ ಸೈಟ್ ಗಳು ನೀಡಲಾಗಿದೆ5) ನೀವು ಅಧಿಕಾರಿವನ್ನು ಬಳಸಿಕೊಂಡು ಬೇಕಾದ ಕಡೆ ಸೈಟ್ ಪಡೆದಿದ್ದೀರಂತೆ?6) ಸೈಟ್ ಹಂಚಿಕೆ ವೇಳೆ ಮೂಡಾ ಅಧ್ಯಕ್ಷರ ಮೇಲೆ‌ಒತ್ತಡ ಹಾಕಿದ್ರಾ? ಮೂಡ ಅಧಿಕಾರಿಗಳ ಮೇಲೆ ಒತ್ತಡ ಹಾಕಿದ ಆರೋಪ ಇದೆ?7) ಅನುದಾನದಲ್ಲಿ ಬಂದ 14 ಸೈಟ್ ಗಳನ್ನು ಬೇಕಾದ ಕಡೆ ಪಡೆದಿದ್ದೀರಂತೆ?

8) ಎಲ್ಲಿ ಹೆಚ್ಚು ಬೆಲೆ ಇದೆಯೋ ಅಲ್ಲಿ ಸೈಟ್ ಗಳು ಪಡೆದಿದ್ದೀರಾ ಅಂತ ಆರೋಪ9) ಸೈಟ್ ಗಳು ಹಂಚಿಕೆಯಲ್ಲಿ ನಿಮ್ಮ ರಾಜಕೀಯ ಪ್ರಭಾವ ಇದೆ ಅನ್ನೋ ಮಾತಿದೆ10) 3.16 ಎಕರೆ ಜಾಗವನ್ನು ನಿಮ್ಮ ಬಾಮೈದ ಖರೀದಿ ಮಾಡಿದ್ದ ವಿಚಾರ ಗೊತ್ತಿತ್ತಾ?11) ಜಮೀನು ತೆಗೆದುಕೊಳ್ಳುವಾಗ ನೀವು ಮಾತುಕತೆಯಲ್ಲಿ ಭಾಗಿ ಆಗಿದ್ರಾ?12) ನಿಮ್ಮ ಹೆಂಡತಿಗೆ ನಿಮ್ಮ ಬಾಮೈದ ಜಮೀನನ್ನು ಹರಶಿನ ಕುಂಕುಮಕ್ಕೆ ಅಂತ ಕೊಟ್ಟಿದ್ದಾರಂತೆ ನಿಜನಾ?13) ದಿಢೀರಾಗಿ ಸೈಟ್ ಗಳನ್ನು ವಾಪಸ್ ಮಾಡಿಸಿದ್ದು ನೀವೆ ಅಂತೆ?14) ಇದನ್ನೇ ಇಟ್ಟುಕೊಂಡು ವಿರೋಧ ಪಕ್ಷದವರು ಮಾತನಾಡ್ತಾರೆ ಅಂತ ನೀವೆ ಸೈಟ್ ಗಳನ್ನು ಮುಡಾಗೆ ವಾಪಸ್ ಕೊಡಿಸಿದ್ರಂತೆ?15) ನಿಮ್ಮದು ಏನು ತಪ್ಪಿಲ್ಲ, ಮಾಹಿತಿ‌ ಇಲ್ಲ ಅಂದ್ರು ನಿಮ್ಮ ಹೆಸರು ಯಾಕೆ ಬರ್ತಿದೆ?16) ನಿಮ್ಮನ್ನು ರಾಜಕೀಯವಾಗಿ ಟಾರ್ಗೆಟ್ ಯಾಕೆ ಮಾಡ್ತಾ ಇದ್ದಾರೆ?

ಸಿಎಂ ಆಗಿಯೇ ವಿಚಾರಣೆಗೆ ಹೋಗ್ತೀರಾ?’ಸಿಎಂ ಲೋಕಾಯುಕ್ತ ವಿಚಾರಣೆ ಬಗ್ಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ರಾಜ್ಯದ ಸಿಎಂ ಆಗಿ ಲೋಕಾಯುಕ್ತ ತನಿಖೆ ಎದುರಿಸುತ್ತಿರೋ? ಆರೋಪಿಯಾಗಿ ಹೋಗ್ತಿರೋ? ಇದನ್ನು ರಾಜ್ಯದ ಜನತೆಗೆ ತಿಳಿಸಬೇಕಾಗುತ್ತದೆ ಎಂದಿದ್ದಾರೆ. ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್‌ನವರು ಉದ್ದುದ್ದ ಭಾಷಣ ಮಾಡುತ್ತಾರೆಂದು ವ್ಯಂಗ್ಯವಾಡಿದ್ದಾರೆ.

Share with friends

Related Post

Leave a Reply

Your email address will not be published.