ನಾಳೆಯಿಂದ ಬೆಂಗಳೂರಿನ ಈ ಮಾರ್ಗದಲ್ಲಿ ‘ಮೆಟ್ರೋ ಸಂಚಾರ’ ಆರಂಭ: ಹೀಗಿದೆ ವೇಳಾಪಟ್ಟಿ, ಟಿಕೆಟ್ ದರ | Namma Metro ಬೆಂಗಳೂರು ನಗರದ ಜನತೆಗೆ ಗುಡ್ ನ್ಯೂಸ್ ಎನ್ನುವಂತೆ ನಾಳೆಯಿಂದ ಹೊಸದಾಗಿ ಮಾದಾವರ ಮತ್ತು ನಾಗಸಂದ್ರ ಮಾರ್ಗದಲ್ಲಿ ಮೊದಲ ವಾಣಿಜ್ಯ ನಮ್ಮ ಮೆಟ್ರೋ ಸಂಚಾರ ಸೇವೆ ಆರಂಭಗೊಳ್ಳಲಿದೆ. ಹಾಗಾದ್ರೆ ವೇಳಾಪಟ್ಟಿ ಏನು.? ಟಿಕೆಟ್ ದರ ಎಷ್ಟು ಎನ್ನುವ ಬಗ್ಗೆ ಮುಂದೆ ಓದಿ.ಈ ಕುರಿತಂತೆ ಬಿಎಂಆರ್ ಸಿಎಲ್ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಇಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಸಂಸದರಾದಂತ ತೇಜಸ್ವಿ ಸೂರ್ಯ, ಶಾಸಕರು ಹಾಗೂ ಇತರ ಗಣ್ಯರು ಯಶವಂತಪುರದಿಂದ ಮಾದಾವರದವರೆಗೆ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದರು ಮತ್ತು ನಾಗವಾರದಿಂದ ಮಾದಾವರ (BIEC) ವರೆಗಿನ ಮೂರು ನಿಲ್ದಾಣಗಳ 3.14 ಕಿ.ಮೀ ರೀಚ್-3 ವಿಸ್ತರಣೆ ಮಾರ್ಗವನ್ನು ಪರಿಶೀಲಿಸಿದರು.ಈ ಸಂದರ್ಭದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್ ಅವರು, ಸಾರ್ವಜನಿಕರ ಅನುಕೂಲಕ್ಕಾಗಿ ನಾಳೆಯಿಂದ ಈ ವಿಸ್ತರಣಾ ಮಾರ್ಗವನ್ನು ತೆರೆಯಲಾಗುವುದು ಮತ್ತು ಮುಂದಿನ ದಿನಗಳಲ್ಲಿ ಔಪಚಾರಿಕ ಉದ್ಘಾಟನೆ ಮಾಡಲಾಗುವುದು ಎಂದು ಹೇಳಿದರು.ಹೀಗಿದೆ ನಮ್ಮ ಮೆಟ್ರೋ ರೈಲು ಸಂಚಾರದ ವೇಳಾಪಟ್ಟಿದಿನಾಂಕ 7ನೇ ನವೆಂಬರ್, 2024 ರಿಂದ ಬೆಳಿಗ್ಗೆ 05.00 ಗಂಟೆಗೆ ಮಾದಾವರದಿಂದ ಮೊದಲ ವಾಣಿಜ್ಯ ಸೇವೆ ಪ್ರಾರಂಭವಾಗಲಿದ್ದು, ಹಾಗೂ ದಿನದ ಕೊನೆಯ ರೈಲು ರಾತ್ರಿ 11.00 ಗಂಟೆಗೆ ಹೋರಾಡಲಿದೆ.10 ನಿಮಿಷಗಳ ಅವಧಿಯಲ್ಲಿ ರೈಲುಗಳ ಸಂಚಾರವು ಈ ಮಾರ್ಗದಲ್ಲಿ (ಮಾದಾವರ ಮತ್ತು ನಾಗಸಂದ್ರ) ನಡೆಸಲಾಗುವುದು. ಹಸಿರು ಮಾರ್ಗದ ಇತರ ಮಾರ್ಗದಲ್ಲಿ ರೈಲು ಕಾರ್ಯಾಚರಣೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಹಾಗೂ ಎಂದಿನಂತೆ ವೇಳಾಪಟ್ಟಿಯ ಪ್ರಕಾರ ಚಲಿಸುತ್ತದೆ.ಹೀಗಿದೆ ಮೆಟ್ರೋ ಟಿಕೆಟ್ ದರಕನಿಷ್ಠ ದರ ರೂ 10.00 ಮತ್ತು ಗರಿಷ್ಠ ದರ ರೂ 60.