ಬೆಂಗಳೂರು: ನಾನು ವಿದ್ಯಾರ್ಥಿ ವಿರುದ್ದ ಕ್ರಮಕ್ಕೆ ಸೂಚನೆ ನೀಡಿಲ್ಲ. ಹೆಡ್ ಮಾಸ್ಟರ್ ಮತ್ತು ಬಿಇಓ ವಿರುದ್ದ ಕ್ರಮಕ್ಕೆ ಸೂಚನೆ ನೀಡಿದ್ದು ಎಂದು ಹೇಳುವ ಮೂಲಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಯೂಟರ್ನ್ ಹೊಡೆದಿದ್ದಾರೆ.
ಶಿಕ್ಷಣ ಸಚಿವರಿಗೆ ಕನ್ನಡ ಬರುವುದಿಲ್ಲ ಎಂದಿದ್ದ ವಿದ್ಯಾರ್ಥಿ ವಿರುದ್ದ ಕ್ರಮಕ್ಕೆ ಸೂಚನೆ ನೀಡಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡುವಾಗ ಮತ್ತೆ ಮಾಧ್ಯಮಗಳ ಮೇಲೆ ಗರಂ ಆದರು.
ನಾನು ಟ್ರೋಲ್ಗೆ ಹೆದರುವುದಿಲ್ಲ. ವಿದ್ಯಾರ್ಥಿ ವಿರುದ್ದ ಕ್ರಮ ತೆಗೆದುಕೊಳ್ಳಿ ಎಂದು ನಾನು ಹೇಳಿಲ್ಲ. ಹೆಡ್ ಮಾಸ್ಟರ್, ಬಿಇಓ ವಿರುದ್ದ ಕ್ರಮ ತೆಗೆದುಕೊಳ್ಳಿ ಅಂತ ಹೇಳಿದ್ದು. ನಾನೇ ಅದನ್ನು ಹೇಳಿದ್ದೇನೆ ಎಂದರು.
ನಾನು ಶಿಕ್ಷಣ ಸಚಿವ. ನಿಮ್ಮ ಮಕ್ಕಳನ್ನ ಶಾಲೆಗೆ ಕಳುಹಿಸುತ್ತೀರಿ. ನಿಮ್ಮ ಮಕ್ಕಳನ್ನು ತಪ್ಪು ಮಾಡೋಕೆ ಬಿಡ್ತೀರಾ ಟ್ರೋಲ್ಗಳಿಗೆಲ್ಲಾ ತಲೆಕೆಡಿಸಿಕೊಳ್ಳೋ ಮಧು ಬಂಗಾರಪ್ಪ ಅಲ್ಲ ನಾನು. ಮಕ್ಕಳ ಮೇಲೆ ಆಕ್ಷನ್ ತಗೊಳ್ಳೋಕೆ ನಮಗೆ ಅಧಿಕಾರ ಇಲ್ಲ. ನಿಮ್ಮ ಮಕ್ಕಳನ್ನ ಹತೋಟಿಯಲ್ಲಿ ಇಡಬೇಕು ಅಂತ ಹೆಡ್ ಮಾಸ್ಟರ್, ಬಿಇಓ ವಿರುದ್ದ ಕ್ರಮಕ್ಕೆ ಸೂಚನೆ ನೀಡಿದ್ದೇನೆ. ನಿಮ್ಮ ಮಗ ಹಾಗೆ ಮಾತನಾಡಿದ್ರೆ ನೀವು ಏನ್ ಮಾಡ್ತಿದ್ರಿ?ನಾನಾಗಿದ್ರೆ ನನ್ನ ಮಗನ ಜೊತೆ ಮಾತಾಡುತ್ತಿದ್ದೆ ಅಂತ ಮತ್ತೆ ರಾಂಗ್ ಆದ್ರು. ಮಾಧ್ಯಮಗಳು ಸುಮ್ಮನೆ ಇಲ್ಲದೆ ಇರೋದು ತರಬೇಡಿ. ಪದೇ ಪದೇ ಇದನ್ನ ತರೋದು ಮಾಧ್ಯಮಗಳು ಕಿಡಿಕಾರಿದರು
ಟ್ರೋಲ್ ಮಾಡಿಕೊಂಡು ನನ್ನನ್ನ ಬಗ್ಗಿಸೋಕೆ ಯಾರಿಂದಲೂ ಸಾಧ್ಯವಿಲ್ಲ. ನನ್ನ ವಿರುದ್ದ 7-8 ತಿಂಗಳಿಂದ ಟ್ರೋಲ್ ನಡೆಯುತ್ತಿದೆ. ಮಕ್ಕಳನ್ನ ಸರಿ ದಾರಿಗೆ ತರಬೇಕು. ಅಂತಹ ಕಾರ್ಯಕ್ರಮದಲ್ಲಿ ಹಾಗೆ ಮಾತಾಡಿದ್ರೆ ಹೇಗೆ ಹೇಳಿ. ನಾಳೆ ಸಿಎಂ, ನ್ಯಾಯಾಧೀಶರ ಕಾರ್ಯಕ್ರಮದಲ್ಲಿ ಇದ್ದಾಗ ಹಾಗೆ ಹೇಳಿದ್ರೆ ಹೇಗೆ. ತಲೆಯಲ್ಲಿ ಏನಾದ್ರು ಇದ್ದರೆ ಟ್ಯಾಕ್ಸ್ ಹಣವನ್ನು ಮಕ್ಕಳಿಗಾಗಿ ಖರ್ಚು ಮಾಡ್ತಿದ್ದೇವೆ. ಅದನ್ನ ಮಾಡಿ ಎಂದರು.
ನನಗೆ ಕನ್ನಡ ಬರಲ್ಲ ಅಂದರೆ ನೀವು ಹೇಳಿಕೊಟ್ರೆ ನಾನೇನು ಉದ್ದಾರ ಆಗಲ್ಲ. ನನ್ ರಕ್ತದಲ್ಲಿ ಕನ್ನಡ ಇದೆ. ನಾವು ಚಿಕ್ಕವರು ಇದ್ದಾಗ ನಮಗೆ ಹೇಳಿ ಕೊಟ್ಟಿದ್ದೇ ಇಷ್ಟು. ನಾನು ನಿಮಗೆ ಎಕ್ಸಾಂ ಮಾಡ್ತೀನಿ. 1 ರಾಂಕ್ ನಿಂದ 30 ರಾಂಕ್ ಬರ್ತಿರಾ. 30 ರಾಂಕ್ ಇರೋನು ಕೆಟ್ಟೋನು ಅಂತೀರಾ. ಇದೆಲ್ಲ ಬಿಟ್ಟು ಬಿಡಬೇಕು. ಇದೆಲ್ಲ ಸಾಕು ಅಂತ ಮಾಧ್ಯಮಗಳ ಮೇಲೆ ಕಿಡಿಕಾರಿದರು.