CM Siddaramaiah: ಹೇ ನೀನು ಯಾರು? ಸ್ವಾಮೀಜಿ ಪಕ್ಕ ಯಾಕೆ ಕುಳಿತುಕೊಂಡಿದ್ದೀಯಾ? ವಿಜಯನಗರ ಡಿಸಿಗೆ ಗದರಿದ ಸಿಎಂ!
ವಿಜಯನಗರ: ಜಿಲ್ಲೆಯ ಬಂಡಿಹಳ್ಳಿ ಗ್ರಾಮದಲ್ಲಿ (Bandihalli Village) ಸರ್ವಧರ್ಮ ಸಾಮೂಹಿಕ ಮದುವೆ (Mass Marriage Event) ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು, ಭಾಷಣ ಮಾಡುವಾಗ ಜಿಲ್ಲಾಧಿಕಾರಿ ದಿವಾಕರ್ (DC Divakar) ಮೇಲೆ ಗರಂ ಆದ ಘಟನೆ ನಡೆಯಿತು.
ಡಿಸಿಗೆ ಹೇ ಆಗಡೆ ಹೋಗು ಎಂದ ಸಿಎಂಸಿಎಂ ಸಿದ್ದರಾಮಯ್ಯ ಭಾಷಣಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ವಿಜಯಪುರ ಜಿಲ್ಲಾಧಿಕಾರಿ ದಿವಾಕರ್ ಅವರು ವೇದಿಕೆ ಮೇಲಿದ್ದ ಸ್ವಾಮೀಜಿ ಪಕ್ಕದಲ್ಲಿ ಕುಳಿತುಕೊಂಡಿರುತ್ತಾರೆ. ಇದನ್ನು ಗಮನಿಸಿದ ಸಿಎಂ ಸಿದ್ದರಾಮಯ್ಯ ಅವರು, ನೀನು ಯಾರು ? ಅಂತಾ ಕೇಳುತ್ತಾರೆ. ಅದಕ್ಕೆ ಜಿಲ್ಲಾಧಿಕಾರಿ, ನಾನು ವಿಜಯನಗರ ಜಿಲ್ಲೆಯ ಡಿಸಿ ಸರ್ ಎಂದು ಉತ್ತರಿಸುತ್ತಾರೆ. ಹೇ ನೀನು ಸ್ವಾಮೀಜಿ ಪಕ್ಕ ಯಾಕೆ ಕುಳಿತುಕೊಂಡಿದ್ದೀಯಾ? ಆ ಕಡೆ ಕುಳಿತುಕೊ ಹೋಗು ಅಂತಾ ಸಿಎಂ ಸಿದ್ದರಾಮಯ್ಯ ಅವರು, ಜಿಲ್ಲಾಧಿಕಾರಿಯವರನ್ನು ಗದರಿಸುತ್ತಾರೆ.
ಮಾತು ಮುಂದುವರೆಸಿದ ಸಿಎಂ, 23 ಜೋಡಿಗಳಿಗೆ ಸಾಮೂಹಿಕ ಮದುವೆ ಮಾಡಲಾಗುತ್ತಿದೆ. ಸಿರಾಜ್ ಶೇಕ್ ಒತ್ತಾಯದಿಂದ ಸಾಮೂಹಿಕ ಮದುವೆಗೆ ಬಂದಿದ್ದೇನೆ. ಸಿರಾಜ್ ಶೇಕ್ ಕುಟುಂಬಕ್ಕೆ ಶುಭಕೋರುತ್ತೇನೆ. ನೂತನ ದಂಪತಿಗಳ ಜೀವನ ಸುಖಕರವಾಗಿರಲಿ ಅಂತಾ ಬಯಸುವೆ. ನಿಮ್ಮ ಜೀವನ ಬೇರೆಯವರಿಗೆ ಆದರ್ಶವಾಗಲಿ ಎಂದರು.ಸರಳ ವಿವಾಹಕ್ಕೆ ಕರೆನಮ್ಮ ದೇಶದಲ್ಲಿ ಶ್ರೀಮಂತರು ಬಡವರು ಇದ್ದಾರೆ. ಶ್ರೀಮಂತರು ಅದ್ದೂರಿಯಾಗಿ ಮದುವೆ ಮಾಡ್ತಾರೆ. ಬಡವರು ಮದುವೆ ಮಾಡಿಕೊಳ್ಳಲು ಕಷ್ಟ. ಇಂತಹ ಸಾಮೂಹಿಕ ಮದುವೆಯಲ್ಲಿ ಬಡವರ ಮದುವೆ ಮಾಡುವುದು ಉತ್ತಮ. ಮದುವೆ ಮಾಡಿನೋಡು ಮನೆ ಕಟ್ಟಿ ನೋಡು ಅಂತಾ ಗಾದೆ ಮಾತಿದೆ. ಮದುವೆ ಮಾಡಲು ಸಾಲ ಮಾಡ್ತಾರೆ. ಮನೆ ಆಸ್ತಿ ಒಡವೆ ಮಾರಾಟ ಮಾಡ್ತಾರೆ. ಪ್ರತಿಯೊಬ್ಬರು ಸರಳವಾಗಿ ಮದುವೆ ಆಗಬೇಕು ಎಂದರು.
ಪಕ್ಕದ ಮನೆಯವಳು ಓಲೆ ಹಾಕಿದ್ರೆ ಕೀವಿ ಕಿತ್ತುಕೊಳ್ಳಲು ಸಾಧ್ಯನಾ? ಕಿವಿ ಕಿತ್ತುಕೊಳ್ಳಲಾರದಂತೆ ನಾವು ಬದುಕಬೇಕಾ? ಬಡವರು ಬಡವರಾಗಿಯೇ ಸಾಯಬೇಕಾ?. ಬಡವರು ಶ್ರೀಮಂತರು ಆಗಬಹುದು. ನಾವು ಯಾವ ಜಾತಿಯಲ್ಲಿ ಇದ್ದೀವಿ ಅದೇ ಜಾತಿಯಲ್ಲಿಯೇ ಇರಬೇಕು ಅಂತಾ ಏನಿಲ್ಲ? ನಾವು ಜಾತ್ಯತೀತರಾಗಬೇಕು ಬಸವಣ್ಣನವರು ಏನು ಹೇಳಿದ್ದಾರೆ. ಬಸವಣ್ಣನವರ ಆದರ್ಶಗಳನ್ನ ನಾವು ಪಾಲನೆ ಮಾಡಬೇಕು ಎಂದು ಕರೆ ನೀಡಿದರು.ಬಸವಣ್ಣನವರ ಜಾತ್ಯಾತೀತ ತತ್ವ ನೆನಪಿಸಿದ ಸಿಎಂ
ಬಸವಣ್ಣನವರು ಜನರಿಗೆ ಅರ್ಥವಾಗುವ ರೀತಿಯಲ್ಲಿ ಬೋಧನೆ ಮಾಡಿದ್ದಾರೆ. ಬಸವಣ್ಣನವರನ್ನು ನಮ್ಮ ಸರ್ಕಾರ ಸಾಂಸ್ಕೃತಿಕ ನಾಯಕ ಅಂತಾ ಮಾಡಿದ್ದೇವೆ. ಕುವೆಂಪು ಹೇಳಿದಂತೆ ಹುಟ್ಟುವಾಗ ವಿಶ್ವಮಾನವರಾಗಿ ಇರುತ್ತಾರೆ. ಆದರೆ ಜಾತಿ ವ್ಯವಸ್ಥೆಯಿಂದಾಗಿ ನಾವು ಅಲ್ಪ ಮಾನವರಾಗುತ್ತೇವೆ. ಅಂತರ್ ಜಾತಿ ಮದುವೆ ಬಸವಣ್ಣನವರ ಕಾಲದಲ್ಲಿ ಆಗಿತ್ತು. ನಾವು ಇಂತಿಂಥ ಜಾತಿಯಲ್ಲಿ ಹುಟ್ಟುಬೇಕು ಅಂತಾ ಅರ್ಜಿ ಹಾಕಿದ್ದೀವಾ? ಒಂದು ಜಾತಿಯವರು ಇನ್ನೊಂದು ಜಾತಿಯನ್ನ ದ್ವೇಷಿಸಬಾರದು ಪ್ರೀತಿಸಬೇಕು ಎಂದು ಕರೆ ನೀಡಿದರು.
ಆರ್ಥಿಕ ಸ್ವಾವಲಂಬನೆ ಆಗದಿದ್ರೆ ಜಾತಿ ವ್ಯವಸ್ಥೆ ಚಲನೆ ಆಗುವುದಿಲ್ಲ. ಜಾತಿ ವ್ಯವಸ್ಥೆ ಇನ್ನೂ ಹೋಗಿಲ್ಲ. ಒಬ್ಬ ಅಂಧ ಮಹಿಳೆಗೆ ಸೀರಾಜ್ ಶೇಕ್ ಅವರು ಮದುವೆ ಮಾಡಿಸಿದ್ದು ಖುಷಿಯ ವಿಚಾರ, ಇಬ್ರಾಹಿಂ ಮಸ್ತನ್ ಅಂಧ ಮಹಿಳೆ ಯಾಸ್ಮೀನ್ ಮದುವೆಯಾಗಿದ್ದಾರೆ. ಅಂತರ್ ಜಾತಿ ಮದುವೆಗಳು ಹೆಚ್ಚು ಆಗಬೇಕು. ನಾನು ನಮ್ಮ ಸಮಾಜದಲ್ಲಿ ಮದುವೆಯಾಗಿರುವೆ. ನನ್ನ ಮೊದಲನೇ ಮಗ ಅಂತರ ಜಾತಿ ಮದುವೆಯಾಗಿದ್ದ ಈಗ ಅವನು ಮೃತ ಪಟ್ಟಿದ್ದಾನೆ. ನನ್ನ ಎರಡನೇ ಮಗ ಮದುವೆಯೇ ಆಗಿಲ್ಲ. ನಾವು ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ ತರುವ ಕೆಲ್ಸ ಮಾಡುತ್ತೇವೆ ಎಂದರು.
ಜನಸಂಖ್ಯೆ ನಿಯಂತ್ರಣ ಮುಖ್ಯ ಎಂದ ಸಿಎಂಶ್ರೀಮಂತರು ಸಾಮಾಜಿಕ ಒಳ್ಳೆಯ ಕೆಲಸ ಮಾಡಬೇಕು. ನಾವು ಸಮಾಜದಿಂದಲೇ ಸಿಎಂ ಆಗಿದ್ದೇವೆ. ನಾವು ಸಮಾಜಕ್ಕೆ ಖುಣ ತೀರಿಸುವ ಕೆಲ್ಸ ಮಾಡಬೇಕು. ಅಂಬೇಡ್ಕರ್ ಸಮಾನ ಹಕ್ಕು ಕೊಡದಿದ್ರೆ ನಾವು ಸಿಎಂ ಆಗುತ್ತಿರಲಿಲ್ಲ, ಸಂವಿಧಾನದ ಪೀಠಿಕೆಯನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. ದೇಶದಲ್ಲಿ 140 ಕೋಟಿ ಜನ ಸಂಖ್ಯೆ ಇದೆ. ಚೀನಾ ದೇಶವನ್ನು ನಾವು ಹಿಂದಕ್ಕೆ ಹಾಕಿದ್ದೇವೆ, ಅರತಿಗೊಬ್ಬ ಕೀರ್ತಿಗೊಬ್ಬ ಇಬ್ಬರು ಮಕ್ಕಳು ಸಾಕು. ದೇಶದಲ್ಲಿ ಜನಸಂಖ್ಯೆ ನಿಯಂತ್ರಣ ಕೂಡ ಅವಶ್ಯಕ. ಅಧಿಕಾರ, ಸಂಪತ್ತು ಹಂಚಿಕೆಯಾಗಬೇಕು ಎಂದು ಕರೆ ನೀಡಿದರು.