Actor Vijay: ‘ದಳಪತಿ’ ಗ್ರ್ಯಾಂಡ್ ಎಂಟ್ರಿ, 5 ಲಕ್ಷಕ್ಕೂ ಹೆಚ್ಚು ಜನ, ಮೊದಲ ಸಮಾವೇಶದಲ್ಲೇ ತಮಿಳುನಾಡನ್ನೇ ಶೇಕ್ ಮಾಡಿದ ವಿಜಯ್!ಸ್ಟಾರ್ ನಟ ವಿಜಯ್ (Actor Vijay) ಪಾಲಿಟಿಕ್ಸ್ಗೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದ್ದಾರೆ. 2026ರ ತಮಿಳುನಾಡು ವಿಧಾನಸಭೆ ಎಲೆಕ್ಷನ್ (Assembly Election) ಮೇಲೆ ಕಣ್ಣಿಟ್ಟಿರುವ ತಮಿಳು ನಟ ವಿಜಯ್ ಇದೀಗ ಮೊದಲ ಸಮಾವೇಶದಲ್ಲೇ ತಮಿಳುನಾಡನ್ನೇ (Tamilnadu) ಶೇಕ್ ಮಾಡಿದ್ದಾರೆ.ತಮಿಳಿಗ ವೆಟ್ರಿ ಕಳಗಂ (Tamilaga Vettri Kazhagam) ಪಕ್ಷದ ಮೊದಲ ಸಮಾವೇಶ ವಿಕ್ರವಾಂಡಿಯಲ್ಲಿ ನಡೆದಿದೆ. ಮೊದಲ ಸಮಾವೇಶದಲ್ಲೇ ವಿಜಯ್ ಅಬ್ಬರದ ಭಾಷಣ ಮಾಡಿದ್ದಾರೆ.5 ಲಕ್ಷಕ್ಕೂ ಹೆಚ್ಚು ಬೆಂಬಲಿಗರ ಆಗಮನವಿಕ್ರವಾಂಡಿಯಲ್ಲಿ ನಡೆಯುತ್ತಿರುವ ಟಿವಿಕೆ ಪಕ್ಷದ ಸಮಾವೇಶಕ್ಕೆ ಜನಸಾಗರವೇ ಹರಿದು ಬಂದಿದೆ. ತಮಿಳುನಾಡು ಹಾಗೂ ನೆರೆಯ ರಾಜ್ಯಗಳಿಂದಲೂ ವಿಜಯ್ ಅಭಿಮಾನಿಗಳು ಸಮಾವೇಶಕ್ಕೆ ಬಂದಿದ್ದಾರೆ. ಸುಮಾರು 5 ಲಕ್ಷಕ್ಕೂ ಹೆಚ್ಚು ಬೆಂಬಲಿಗರು ಹಾಗೂ ಅಭಿಮಾನಿಗಳು ಸೇರಿದ್ರು. ವೇದಿಕೆಯಿಂದ 600 ಮೀಟರ್ ವಾಕ್ ಮಾಡುವ ಮೂಲಕ ವಿಜಯ್ ಪಕ್ಷದ ಕಾರ್ಯಕರ್ತರನ್ನು ಸ್ವಾಗತಿಸಿದ್ರು. ವಿಜಯ್ ಪಕ್ಷದ ಮೊದಲ ಸಮಾವೇಶಕ್ಕೆ ಹರಿದು ಬಂದ ಜನಸ್ತೋಮ ಕಂಡು ತಮಿಳುನಾಡಿನ ಇತರ ಪಕ್ಷಗಳು ದಂಗಾಗಿದೆ.ಡಿಎಂಕೆ ವಿರುದ್ಧ ವಿಜಯ್ ಸಮರ!ಮೊದಲ ಸಭೆಯಲ್ಲಿ ದಳಪತಿ ವಿಜಯ್ ಡಿಎಂಕೆ ವಿರುದ್ಧ ವಾಗ್ದಾಳಿ ನಡೆಸಿದ್ರು. ಆ ಒಂದು ಕುಟುಂಬ ತಮಿಳುನಾಡನ್ನು ಲೂಟಿ ಮಾಡುತ್ತಿದೆ ಎಂದ್ರು. ದ್ರಾವಿಡ ರಾಜಕಾರಣ ಎಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದ್ದಾರೆ. ವಿಜಯ್ ವೇದಿಕೆಯಲ್ಲಿ ಡಿಎಂಕೆ ಮತ್ತು ಬಿಜೆಪಿ ವಿರುದ್ಧ ತೀವ್ರ ಟೀಕೆ ಮಾಡಿದ್ರು. ನಮ್ಮಲ್ಲಿ ಯಾವುದೇ ರಾಜಿ ರಾಜಕಾರಣ ಇಲ್ಲ. 2026ರ ವಿಧಾನಸಭಾ ಚುನಾವಣೆಯಲ್ಲಿ ಟಿವಿಕೆ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದೂ ವಿಜಯ್ ಘೋಷಿಸಿದ್ರು. ತಮಿಳಿಗ ವೆಟ್ರಿ ಕಳಗಂನ ಮೊದಲ ಸಮ್ಮೇಳನದಲ್ಲಿ ವಿಜಯ್ ಮಾಡಿದ ಭಾಷಣ ಡಿಎಂಕೆ ವಿರುದ್ಧ ಸಮರ ಸಾರಿದ್ರು.ಬಿಜೆಪಿ ಮತ್ತು ಡಿಎಂಕೆ ನಮ್ಮ ಪ್ರತಿಸ್ಪರ್ಧಿಗಳು!ಬಿಜೆಪಿ ಮತ್ತು ಡಿಎಂಕೆ ನಮ್ಮ ಪ್ರತಿಸ್ಪರ್ಧಿ ಪಕ್ಷಗಳು ಎಂದು ವಿಜಯ್ ಘೋಷಿಸಿದ್ರು. ಡಿಎಂಕೆ ಜನವಿರೋಧಿ ಸರ್ಕಾರ. ಡಿಎಂಕೆ ಕುಟುಂಬ ತಮಿಳುನಾಡನ್ನು ಲೂಟಿ ಮಾಡುತ್ತಿದೆ. ಭ್ರಷ್ಟಾಚಾರ ಮತ್ತು ಕೋಮುವಾದವು ರಾಜಕೀಯದ ಶತ್ರುಗಳು ಮತ್ತು ಪ್ರಾಯೋಗಿಕ ಘೋಷಣೆಗಳನ್ನು ಮಾತ್ರ ಮಾಡಿ ಎಂದು ವಿಜಯ್ ಹೇಳಿದರು.ರಾಜಕೀಯದಲ್ಲಿ ನಾನು ಮಗುವಾದ್ರು ಹೆದರಲ್ಲ!ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡುವ ಜಾತ್ಯತೀತ ಸಮಾಜವೇ ಗುರಿಯಾಗಿದೆ. ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಜಾತ್ಯತೀತತೆಯೇ ಪಕ್ಷದ ನೀತಿ ಎಂದು ವಿಜಯ್ ಹೇಳಿದ್ದಾರೆ. ರಾಜಕೀಯದಲ್ಲಿ ನಾನು ಮಗು ಆದರೆ ಹಾವು ಕಂಡರೂ ಹೆದರುವುದಿಲ್ಲ ಎಂದು ವಿಜಯ್ ಹೇಳಿದ್ರು.