Air India Pilot: ನಾನ್ವೆಜ್ ಬಿಡುವಂತೆ ಟಾರ್ಚರ್? 25 ವರ್ಷದ ಮಹಿಳಾ ಪೈಲೆಟ್ ಸಾವು, ಬಾಯ್ಫ್ರೆಂಡ್ ಅರೆಸ್ಟ್! safgroupPosted on November 27, 2024 Saf news job education No Comments Air India Pilot: ನಾನ್ವೆಜ್ ಬಿಡುವಂತೆ ಟಾರ್ಚರ್? 25 ವರ್ಷದ ಮಹಿಳಾ ಪೈಲೆಟ್ ಸಾವು, ಬಾಯ್ಫ್ರೆಂಡ್ ಅರೆಸ್ಟ್!ಮುಂಬೈ: 25 ವರ್ಷದ ಏರ್ ಇಂಡಿಯಾ ಪೈಲಟ್ನ ಮೃತದೇಹ ಮುಂಬೈನ ಫ್ಲಾಟ್‌ನಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ಆಕೆಯ ಬಾಯ್ಫ್ರೆಂಡ್ನನ್ನು ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸೃಷ್ಟಿ ತುಲಿ ಎಂಬ ಮಹಿಳೆ ಪೈಲೆಟ್ ಶವವನ್ನು ಅಂಧೇರಿಯ ಮರೋಲ್ ಪ್ರದೇಶದ ಕನಕಿಯಾ ರೈನ್‌ಫಾರೆಸ್ಟ್ ಕಟ್ಟಡದಲ್ಲಿ ಬಾಡಿಗೆಗೆ ಪಡೆದಿದ್ದ ಫ್ಲಾಟ್‌ನಿಂದ ವಶಪಡಿಸಿಕೊಳ್ಳಲಾಗಿದೆ.ಸೋಮವಾರ ಮುಂಜಾನೆ ಆಕೆ ಡೇಟಾ ಕೇಬಲ್‌ನಿಂದ ನೇಣು ಬಿಗಿದುಕೊಂಡಿದ್ದಾಳೆ ಅಂತ ಪೊಲೀಸರು ಶಂಕಿಸಿದ್ದಾರೆ ಎಂದು NDTV ವರದಿ ಮಾಡಿದೆ. ಸೃಷ್ಟಿ ಅವರ ಬಾಯ್ಫ್ರೆಂಡ್ ಆದಿತ್ಯ ಪಂಡಿತ್ (27) ಎಂದು ಗುರುತಿಸಲಾಗಿದೆ. ಆತನ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 108 (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪವಾಯಿ ಪೊಲೀಸ್ ಠಾಣೆಯ ಪೊಲೀಸರು ಆದಿತ್ಯನ ನವೆಂಬರ್ 29 ರವರೆಗೆ ಪೊಲೀಸ್ ಕಸ್ಟಡಿಗೆ ಪಡೆದಿದ್ದಾರೆ.ನಾನ್ ವೆಜ್ ಬಿಡುವಂತೆ ಒತ್ತಡ!ಆಕೆಗೆ ಆದಿತ್ಯ ಕಿರುಕುಳ ಮತ್ತು ನಿಂದನೆ ಮಾಡಿದ್ದಾರೆ ಎಂದು ಸೃಷ್ಟಿ ಅವರ ಚಿಕ್ಕಪ್ಪ ಆರೋಪಿಸಿದ್ದಾರೆ. ಆದಿತ್ಯ ಪಂಡಿತ್ ನಮ್ಮ ಮಗಳಿಗೆ ಮಾಂಸಾಹಾರ ತಿನ್ನುವುದನ್ನು ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ ಎಂದು ಸಂತ್ರಸ್ತೆಯ ಸಂಬಂಧಿ ಆರೋಪಿಸಿದ್ದಾರೆ.2 ವರ್ಷಗಳ ಪ್ರೀತಿ ಸಾವಿನಲ್ಲಿ ಅಂತ್ಯಸೃಷ್ಟಿ ತುಲಿ ಉತ್ತರ ಪ್ರದೇಶ ಮೂಲದವರಾಗಿದ್ದು, ಕಳೆದ ವರ್ಷ ಜೂನ್‌ನಿಂದ ಮುಂಬೈನಲ್ಲಿ ನೆಲೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅವಳು ಮತ್ತು ಆದಿತ್ಯ ಪಂಡಿತ್ ಎರಡು ವರ್ಷಗಳ ಹಿಂದೆ ದೆಹಲಿಯಲ್ಲಿ ವಾಣಿಜ್ಯ ಪೈಲಟ್ ಕೋರ್ಸ್ ಓದುತ್ತಿದ್ದಾಗ ಭೇಟಿಯಾದರು ನಂತರ ಸಂಬಂಧವನ್ನು ಹೊಂದಿದ್ದರು. ಆಪಾದಿತ ಆತ್ಮಹತ್ಯೆಯ ಬಗ್ಗೆ ವಿವರವಾದ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. Post Views: 0 Share with friends