Bengaluru Crime: 2 ದಿನ ಮುಕ್ಕಿ ತಿಂದು, 3ನೇ ದಿನ ಅದೇ ಕೋಣೆಯಲ್ಲಿ ಕೊಂದ ಹಂತಕ?! ಬೆಚ್ಚಿ ಬೀಳಿಸುತ್ತೆ ‘ಮಾಯಾ’ ಮರ್ಡರ್ ಮಿಸ್ಟರಿ!ಬೆಂಗಳೂರು: ಇಂದಿರಾನಗರದ (Indira Nagar) ಅಪಾರ್ಟ್‌ಮೆಂಟ್‌ನಲ್ಲಿ ಅಸ್ಸಾಂ ಮೂಲದ ಯುವತಿಯನ್ನು (Assam Girl) ದುಷ್ಕರ್ಮಿಯೊಬ್ಬ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ (Murder) ಮಾಡಿದ ಘಟನೆ ನಿನ್ನೆ ಬೆಳಕಿಗೆ ಬಂದಿತ್ತು.ಇದೀಗ ಇಂದಿರಾನಗರದಲ್ಲಿ ನಡೆದ ಅಸ್ಸಾಂ ಮೂಲದ ಯುವತಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಆರವ್ ಹನೋಯ್‌ನ ಪತ್ತೆಗೆ ಪೊಲೀಸರು ಎರಡು ವಿಶೇಷ ತಂಡಗಳನ್ನು ರಚನೆ ಮಾಡಿದ್ದಾರೆ.ಇಂದಿರಾನಗರ ಠಾಣೆ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದ್ದು, ಕೊಲೆ ಬಳಿಕ ಆರೋಪಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಎಸ್ಕೇಪ್ ಆಗಿದ್ದಾರೆ. ಸದ್ಯ ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸಿ ಆರೋಪಿ ಎಸ್ಕೇಪ್ ಆದ ಕ್ಯಾಬ್ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.ಯುವತಿಯನ್ನು ಕೊಲೆ ಮಾಡಿದ ಬಳಿಕ ಆರೋಪಿ ಕ್ಯಾಬ್ ಬುಕ್ ಮಾಡಿಕೊಂಡು ಹೋಗಿದ್ದು, ಕ್ಯಾಬ್ ಬಂದು ಹೋಗಿರುವ ಮಾರ್ಗದ ಸಿಸಿಟಿವಿಗಳನ್ನು ಪೊಲೀಸರು ಪರಿಶೀಲನೆ ಮಾಡಿದ್ದಾರೆ. ಆರೋಪಿ ಕ್ಯಾಬ್‌ನಿಂದ ಎಲ್ಲಿ ಇಳಿದಿದ್ದ ಅನ್ನೋದನ್ನ ಪತ್ತೆ ಹಚ್ಚುತ್ತಿದ್ದು, ಇದರ ಜೊತೆಗೆ ಆರವ್ ಹನೋಯ್ ಹಾಗೂ ಮಾಯಾ ಗೊಗಾಯ್ ಪರಿಚಯದ ಬಗ್ಗೆಯೂ ತನಿಖೆ ಮಾಡಲಾಗುತ್ತಿದೆ.ಮಾಹಿತಿ ಪ್ರಕಾರ, ಸೋಶಿಯಲ್ ಮೀಡಿಯಾ ಮೂಲಕ ಆರವ್ ಹನೋಯ್ ಹಾಗೂ ಮಾಯಾ ಗೊಗಾಯ್ ಪರಿಚಯವಾಗಿದ್ದರು. ಕಳೆದ ಕೆಲ ತಿಂಗಳ ಹಿಂದಷ್ಟೇ ಪರಿಚಯವಾಗಿದ್ದ ಇವರು ಇದೇ 23 ರಂದು ಇಂದಿರಾನಗರ ಸರ್ವೀಸ್ ಅಪಾರ್ಟ್‌ಮೆಂಟ್‌ಗೆ ಬಂದಿದ್ದರು. ಶನಿವಾರದಿಂದ ನಿನ್ನೆ ಬೆಳಗ್ಗೆವರೆಗೂ ಅಪಾರ್ಟ್‌ಮೆಂಟ್‌ನಲ್ಲಿದ್ದ ಆರವ್ ಹನೋಯ್, ಮೂರು ದಿನಗಳ ಅಂತರದಲ್ಲಿ ಮಾಯಾ ಗೊಗಾಯ್‌ಳನ್ನು ಕೊಲೆ ಮಾಡಿದ್ದು, ಬಳಿಕ ನಿನ್ನೆ ಬೆಳಗ್ಗೆ 8.19 ಕ್ಕೆ ರೂಂನಿಂದ ಹೊರ ಹೋಗಿದ್ದಾನೆ ಎಂದು ತಿಳಿದು ಬಂದಿದೆ.ಸದ್ಯ ಆರೋಪಿ ಆರವ್ ಹನೋಯ್ ಪತ್ತೆಗೆ ಪೊಲೀಸರು ತೀವ್ರ ಶೋಧ ನಡೆಸಿದ್ದು, ಕೊಲೆಯಾದ ಮಾಯಾ ಗೊಗಾಯ್ ಮರಣೋತ್ತರ ಪರೀಕ್ಷೆ ಇಂದು ಬೌರಿಂಗ್ ಆಸ್ಪತ್ರೆಯಲ್ಲಿ ನಡೆಯಲಿದೆ. ಮರಣೋತ್ತರ ಪರೀಕ್ಷೆ ಬಳಿಕ ಕೊಲೆ ನಡೆದ ನಿಖರ ದಿನ ಪತ್ತೆಯಾಗುವ ಸಾಧ್ಯತೆ ಇದೆ.ಗಾಬರಿಯಲ್ಲೇ ಹೊರಟಿರೊ ಹಂತಕ!ಇನ್ನು ಮಾಯಾ ಗೊಗಾಯ್‌ಳನ್ನು ಕೊಲೆ ಮಾಡಿದ ಬಳಿಕ ಹಂತಕ ಆರವ್ ಹನೋಯ್ ಕೋಣೆಯಿಂದ ಗಾಬರಿಯಲ್ಲೇ ಹೊರಟಿದ್ದು, ಹೋಟೆಲ್‌ನಲ್ಲಿ ಶವ ಬಿಟ್ಟು ಮೆಜೆಸ್ಟಿಕ್ ರೈಲ್ವೆ ನಿಲ್ದಾಣದವರೆಗೂ ಹೋಗಿದ್ದಾನೆ. ರೈಲು ನಿಲ್ದಾಣ ಸಮೀಪ ಹೋಗ್ತಿದ್ದಂತೆ ಮೊಬೈಲ್ ಸ್ವಿಚ್ ಆಫ್ ಮಾಡಿದ್ದು, ಮೂಲಗಳ ಪ್ರಕಾರ ಆರೋಪಿ ಕೇರಳಕ್ಕೆ ಎಸ್ಕೇಪ್ ಆಗಿರುವ ಶಂಕೆ ವ್ಯಕ್ತವಾಗಿದೆ.ಇನ್ನು ಶುಕ್ರವಾರ ತನ್ನ ಅಕ್ಕನಿಗೆ ಕರೆ ಮಾಡಿದ್ದ ಮಾಯ ಗೊಗಾಯ್, ಆಫೀಸ್ ಪಾರ್ಟಿ ಇದೆ ಬರಲ್ಲ ಎಂದು ಹೇಳಿದ್ದಳು. ಮತ್ತೊಂದೆಡೆಶನಿವಾರ ಕೂಡ ರೂಂಗೆ ಬರಲ್ಲ ಅಂತಾ ಮೆಸೇಜ್ ಮಾಡಿದ್ದಳು. ಆರೋಪಿ ಆರವ್ ಹನೋಯ್ ಹೋಟೆಲ್‌ಗೆ ಬರುವ ಮುನ್ನ ಹಳೆಯ ಚಾಕುವೊಂದನ್ನ ತಂದಿದ್ದ. ಹೋಟಲ್‌ಗೆ ಬಂದ ನಂತರ ನೈಲಾನ್ ದಾರ ಖರೀದಿ ಮಾಡಿದ್ದು, ಆನ್ಲೈನ್ ಮೂಲಕ ಆರ್ಡರ್ ಮಾಡಿ ತರಿಸಿಕೊಂಡಿದ್ದಾನೆ. ಪ್ರೇಯಸಿ ಜೊತೆ ಎರಡು ದಿನ ಕಾಲ ಕಳೆದು ನಂತರ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಇದೆಲ್ಲವನ್ನು ನೋಡಿದಾಗ ಫ್ರೀ ಪ್ಲಾನ್ ಮಾಡಿಯೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.ಒಟ್ನಲ್ಲಿ ಸದ್ಯ ಪೊಲೀಸರು ಕೇರಳ ಸೇರಿ ಹಲವು ಕಡೆ ಆರೋಪಿಗಾಗಿ ಹುಡುಕಾಟ ನಡೆಸಿದ್ದು, ಆರವ್ ಹನೋಯ್‌ನ ಪತ್ತೆಗೆ ಪೊಲೀಸರು ಎರಡು ವಿಶೇಷ ತಂಡಗಳನ್ನು ರಚನೆ ಮಾಡಿದ್ದಾರೆ.