ಮಂಗಳೂರು, ದುಬೈ, ತಿರುವನಂತಪುರಂ, ಮಸ್ಕಟ್ ಸೇರಿದಂತೆ ದೇಶದ ವಿವಿದ ಏರ್‌ಪೋರ್ಟ್ ಗಳಿಂದ ತೆರಳುವ ವಿಮಾನಗಳಲ್ಲಿ ಬಾಂಬರ್‌ಗಳು ಇರುವುದಾಗಿ ಸಂದೇಶದಲ್ಲಿದೆ.
ದೇವನಹಳ್ಳಿಮಂಗಳೂರು, ದುಬೈ, ತಿರುವನಂತಪುರಂ, ಮಸ್ಕಟ್ ಸೇರಿದಂತೆ ದೇಶದ ವಿವಿದ ಏರ್‌ಪೋರ್ಟ್ ಗಳಿಂದ ತೆರಳುವ ವಿಮಾನಗಳಲ್ಲಿ ಬಾಂಬರ್‌ಗಳು ಇರುವುದಾಗಿ ಸಂದೇಶದಲ್ಲಿದೆ. ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಎರಡನೆ ಬಾರಿಗೆ ಹುಸಿ ಬಾಂಬ್ ಸಂದೇಶ ಬಂದಿದ್ದು, ಬಾಂಬ್ ಸಂದೇಶ ಹಿನ್ನೆಲೆಯಲ್ಲಿ ಏರ್‌ಪೋರ್ಟ್ ಅಧಿಕಾರಿ ಮತ್ತು ಭದ್ರತಾ ಪಡೆಗಳು ಅಲರ್ಟ್ ಆಗಿದ್ದಾರೆ.
ಆದರೆ, ಎಕ್ಸ್ (ಟ್ವಿಟರ್) ಖಾತೆ ಮೂಲಕ ಬಂದಿರುವ ಸಂದೇಶದಲ್ಲಿ ಕೆಂಪೇಗೌಡ ಏರ್‌ಪೋರ್ಟ್ ನಿಂದ ತೆರಳುವ ವಿಮಾನಗಳು ಯಾವುದು ಇಲ್ಲ ಎನ್ನಲಾಗಿದೆ.ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಹುಸಿಬಾಂಬ್ ಬೆದರಿಕೆ
ಬೆಳಗಾವಿ (Belgaum): ಕರ್ನಾಟಕದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಒಂದಾಗಿರುವ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಹುಸಿಬಾಂಬ್ ಬೆದರಿಕೆಯ ಕರೆ ಬಂದಿದೆ. ಅಕ್ಟೋಬರ್ 19ರಂದು ಅಂದರೆ ಶನಿವಾರ, ಇ ಮೇಲ್ ಮೂಲಕ ಸಂದೇಶ ರವಾನಿಸಿರುವ ದುಷ್ಕರ್ಮಿಗಳು, ಏರ್‌ಪೋರ್ಟ್ ಅಥಾರಿಟಿಗಳಿಗೆ ಮೇಲ್ ಮಾಡಿ, ಚೆನೈನಿಂದ ಬರುವ ವಿಮಾನಕ್ಕೆ ಬಾಂಬ್ ಇಡುವುದಾಗಿ ಬೆದರಿಕೆ ಹಾಕಿದ್ದರು.
ಸಾಂಬ್ರಾ ವಿಮಾನ ನಿಲ್ದಾಣದ ನಿರ್ದೇಶಕರಾದ ತ್ಯಾಗರಾಜ್ ಅವರ ಇಮೇಲ್‌ಗೆ ಬೆದರಿಕೆ ಪತ್ರ ಬಂದಿದೆ. ಆದರೆ, ಬೆಳಗಾವಿಗೆ ಚೆನೈನಿಂದ ಯಾವುದೇ ತರಹದ ವಿಮಾನ ಸಂಪರ್ಕ ಇರುವುದಿಲ್ಲ. ಈ ಕುರಿತು ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೇಲ್ ಎಲ್ಲಿಂದ ಬಂದಿದೆ ಯಾರು ಮಾಡಿದ್ದಾರೆ ಅಂತಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.ಸಿಇಒಗೊಳಂದಿಗೆ ಬಿಸಿಎಎಸ್ ಸಭೆಇದರ ನಡುವೆ ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ (ಬಿಸಿಎಎಸ್) ಯು ರಾಜೀವ್ ಗಾಂಧಿ ಭವನದಲ್ಲಿರುವ ನಾಗರಿಕ ವಿಮಾನಯಾನ ಸಚಿವಾಲಯದ ಕಚೇರಿಯಲ್ಲಿ ನಡೆದ ಸಭೆಯಲ್ಲಿ, ಶನಿವಾರ ಹಲವಾರು ವಿಮಾನಯಾನ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ (ಸಿಇಒ) ಕಳೆದ ನಾಲ್ಕು ದಿನಗಳಲ್ಲಿ ಸ್ವೀಕರಿಸಿದ ನಕಲಿ ಬಾಂಬ್ ಕರೆಗಳ ಸರಣಿಯ ಕುರಿತು ಸಭೆ ನಡೆಸಿದೆ. ಸಭೆಯಲ್ಲಿ ಪ್ರಮಾಣಿಕೃತ ಪ್ರೋಟೋಕಾಲ್‌ಗಳಿಗೆ ಅನುಸರಿಸುವಂತೆ ತನ್ನ ಎಲ್ಲಾ ಪಾಲುದಾರರನ್ನು ಕೇಳಿಕೊಂಡಿದೆ.
ಬಾಂಬ್ ಬೆದರಿಕೆಗಳನ್ನು ಪರಿಹರಿಸಲು ಸ್ಟ್ಯಾಂಡರ್ಡ್ ಆಪರೇಟಿಂಗ್ ಕಾರ್ಯವಿಧಾನಗಳನ್ನು (ಎಸ್‌ಒಪಿ) ಅನುಸರಿಸುವಂತೆ ಬಿಸಿಎಎಸ್ ಅಧಿಕಾರಿಗಳು ಸಿಇಒಗಳಿಗೆ ಸೂಚಿಸಿ, ಬೆದರಿಕೆಗಳು ಮತ್ತು ಪ್ರತಿಕ್ರಿಯೆಯಾಗಿ ಜಾರಿಗೊಳಿಸಲಾದ ಕ್ರಮಗಳ ಬಗ್ಗೆ ಮಾಧ್ಯಮಗಳಿಗೆ ತಿಳಿಸುವಂತೆ ಸೂಚಿಸಿದ.ಕನಿಷ್ಠ 70 ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಬೆದರಿಕೆ ಸೋಮವಾರದಿಂದ ಪ್ರಾರಂಭವಾದ ವಂಚನೆ ಕರೆಗಳು ಮತ್ತು ಬೆದರಿಕೆಗಳು, ಇಲ್ಲಿಯವರೆಗೂ, ಕನಿಷ್ಠ 70 ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಬೆದರಿಕೆಗಳು ಬಂದಿವೆ. ಆದರೆ ಶನಿವಾರವೊಂದೇ ದೇಶದ 30ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳಿಗೆ ಬಾಂಬ್ ಬೆದರಿಕೆ ಬಂದಿದೆ. ದೇಶದ ವಿಮಾನ ನಿಲ್ದಾಣಗಳಿಗೆ ನಿರಂತರವಾಗಿ ಬಾಂಬ್ ಬೆದರಿಕೆಯ ಕರೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ಭಾರೀ ಭದ್ರತೆ ತೆಗೆದುಕೊಳ್ಳಲಾಗಿದ್ದು. ಹೈ ಅಲರ್ಟ್ ಘೋಷಿಸಲಾಗಿದೆ.
VPN ಮೂಲಕ ಬೆದರಿಕೆಈ ಬೆದರಿಕೆಗಳಿಗೆ ಸಂಬಂಧಿಸಿದ ಕೆಲವು ಐಪಿ ವಿಳಾಸಗಳು ಲಂಡನ್, ಜರ್ಮನಿ, ಕೆನಡಾ ಮತ್ತು ಯುಎಸ್‌ನಿಂದ ಹುಟ್ಟಿಕೊಂಡಿವೆ ಎಂದು ತನಿಖೆಯಿಂದ ತಿಳಿದುಬಂದಿದ್ದು, ಆದಾಗ್ಯೂ, ಬೆದರಿಕೆ ಹಾಕುವವರು ತಮ್ಮ ನೈಜ ಸ್ಥಳಗಳನ್ನು ಮರೆಮಾಚಲು VPN ಗಳನ್ನು (ವರ್ಚುವಲ್ ಖಾಸಗಿ ನೆಟ್‌ವರ್ಕ್‌ಗಳು) ಬಳಸುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.