Browse

BREAKING : ಕಾಂಗ್ರೆಸ್​​ಗೆ ಡಬಲ್ ಶಾಕ್​​, ಪಕ್ಷೇತರ ಅಭ್ಯರ್ಥಿಯಾಗಿ ಮಂಜುನಾಥ್ ನಾಮಿನೇಷನ್

ಶಿಗ್ಗಾವಿ ಕ್ಷೇತ್ರದ ಉಪಚುನಾವಣೆಯ ಕಾವು ರಂಗೇರುತ್ತಿದ್ದು, ಕಾಂಗ್ರೆಸ್ಗೆ ಡಬಲ್ ಶಾಕ್ ಎಂಬಂತೆ ಮಾಜಿ ಸಂಸದ ಮಂಜುನಾಥ್ ಕುನ್ನೂರ್ ಪಕ್ಷೇತರ ಅಭ್ಯರ್ಥಿಯಾಗಿ ಇದೀಗ ನಾಮಪತ್ರ ಪತ್ರ ಸಲ್ಲಿಸಿದ್ದಾರೆ.

ಯಾಸಿರ್ ಪಠಾಣ್ಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದಕ್ಕೆ ಬಂಡಾಯವೆದ್ದ ಅಜ್ಜಂಪೀರ್ ಖಾದ್ರಿ ಅವರು ಇಂದು ಪಕ್ಷೇತ್ರರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ ನಂತರವೇ ಮಂಜುನಾಥ್ ಕುನ್ನೂರ್ ಸಹ ಸಲ್ಲಿಸಿದ್ದಾರೆ

ತಮ್ಮ ಪುತ್ರ ರಾಜು ಕುನ್ನೂರ್ ಅವರಿಗೆ ಟಿಕೆಟ್ ಕೈತಪ್ಪಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಮಂಜುನಾಥ್ ಅವರು ಪಕ್ಷಕ್ಕೆ ಈ ಮೂಲಕ ಬಂಡಾಯದ ಬಿಸಿಯನ್ನು ಮುಟ್ಟಿಸಿದ್ದಾರೆ. ಇನ್ನು ಯಾವುದೇ ಬಂಡಾಯದ ಬಿಸಿ ಹೆಚ್ಚಾಗಲು ಬಿಡಲ್ಲ. ಎಲ್ಲರೂ ಒಟ್ಟಾಗಿ ಚುನಾವಣೆಯ ಎದುರಿಸುತ್ತೇವೆ. ಖಾದ್ರಿ ಅವರು ತಮ್ಮ ನಾಮಪತ್ರವನ್ನು ವಾಪಸ್ ಪಡೆಯಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ.

Share with friends