BREAKING : ಬೆಂಗಳೂರಲ್ಲಿ ಅಪ್ರಾಪ್ತ ವಿದ್ಯಾರ್ಥಿನಿಯೊಂದಿಗೆ ಪರಾರಿಯಾಗಿದ್ದ ಶಿಕ್ಷಕ ಅರೆಸ್ಟ್!

ಕಳೆದ ಕೆಲವು ದಿನಗಳ ಹಿಂದೆ ಬೆಂಗಳೂರಿನ ಜೆ.ಪಿ ನಗರದಲ್ಲಿ ಟ್ಯೂಷನ್‌ಗೆಂದು ಬರುತ್ತಿದ್ದ 16 ವರ್ಷದ ಬಾಲಕಿಯನ್ನು ಪ್ರೀತಿಸುವುದಾಗಿ ಪುಸಲಾಯಿಸಿ ಶಿಕ್ಷಕನೇ ಕರೆದೊಯ್ದಿರುವ ಪ್ರಕರಣ ನಡೆದಿತ್ತು. ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಜೆಪಿ ನಗರ ಠಾಣೆಯ ಪೊಲೀಸರು ಶಿಕ್ಷಕನನ್ನು ಅರೆಸ್ಟ್ ಮಾಡಿದ್ದಾರೆ.

ಹೌದು ಕಳೆದ ಜನೆವರಿ 4 ರಂದು ಕನಕಪುರ ಮೂಲದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಪಾಲಕರು ನೀಡಿದ ದೂರಿನ ಅನ್ವಯ ಶಿಕ್ಷಕ ಅಭಿಷೇಕ ವಿರುದ್ಧ ಜೆ.ಪಿ.ನಗರ ಪೊಲೀಸ್‌ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿತ್ತು. ಇದೀಗ ಬಾಲಕಿಯ ಜೊತೆ ಪರಾರಿಯಾಗಿದ್ದ ಶಿಕ್ಷಕ ಅಭಿಷೇಕ ನಾನು ಜೆಪಿ ನಗರ ಠಾಣೆ ಪೊಲೀಸರು ಅರೆಸ್ಟ್ ಮಾಡಿ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.ಪ್ರಕರಣ ಹಿನ್ನೆಲೆ?

ಅಭಿಷೇಕ್‌ ಖಾಸಗಿಯಾಗಿ ಟ್ಯೂಷನ್‌ ಕ್ಲಾಸ್‌ ನಡೆಸುತ್ತಿದ್ದ. ನಾಪತ್ತೆಯಾಗಿರುವ ವಿದ್ಯಾರ್ಥಿನಿಯೂ ಇಲ್ಲಿ ಟ್ಯೂಷನ್‌ ಪಡೆಯುತ್ತಿದ್ದಳು. ಈ ನಡುವೆ ಶಿಕ್ಷಕ ವಿದ್ಯಾರ್ಥಿನಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಕಳೆದ ನ.23 ರಂದು ಟ್ಯೂಷನ್‌ನಿಂದ ರಾತ್ರಿಯಾದರೂ ವಿದ್ಯಾರ್ಥಿನಿ ಮನೆಗೆ ಬಾರದಿದ್ದಾಗ ಆಕೆಯ ಪೋಷಕರು ಟ್ಯೂಷನ್‌ ಸೆಂಟರ್‌ ಬಳಿ ಹೋಗಿ ವಿಚಾಸಿದ್ದರು.ಆ ವೇಳೆ ಶಿಕ್ಷಕ ಅಭಿಷೇಕ್‌ ಕರೆದು ಕೊಂಡು ಹೋಗಿರುವುದಾಗಿ ಅಲ್ಲಿದ್ದವರು ಹೇಳಿದ್ದರು. ನಂತರ ಪಾಲಕರು ಅಭಿಷೇಕ್‌ ಮೊಬೈಲ್‌ ಸಂಪರ್ಕಿಸಿ ದಾಗ ರೂಮ್‌ನಲ್ಲಿ ಮೊಬೈಲ್‌ ಬಿಟ್ಟು ವಿದ್ಯಾರ್ಥಿನಿ ಜೊತೆಗೆ ಹೋಗಿರುವುದು ಕಂಡು ಬಂದಿತ್ತು.ಸುಳಿವು ಕೊಟ್ಟವರಿಗೆ 25000 ರೂ. ಬಹುಮಾನ ಘೋಷಣೆ

ಆರೋಪಿ ಅಭಿಷೇಕ್‌ಗಾಗಿ ಹಲವು ದಿನಗಳಿಂದ ಪೊಲೀಸರು ತಲಾಶ್‌ ನಡೆಸುತ್ತಿದ್ದರೂ ಆತನ ಸುಳಿವು ಪತ್ತೆಯಾಗಿರಲಿಲ್ಲ. ಹೀಗಾಗಿ ಅಭಿಷೇಕ್‌ ಸುಳಿವು ನೀಡಿದರೆ 25 ಸಾವಿರ ರೂ. ಬಹುಮಾನ ನೀಡುವುದಾಗಿ ಪೊಲೀಸ್‌ ಪ್ರಕಟಣೆ ಹೊರಡಿಸಲಾಗಿತ್ತು. ಇದೀಗ ಪೊಲೀಸರು ಆತನನ್ನು ಅರೆಸ್ಟ್ ಮಾಡಿ ವಿಚಾರಣೆ ಒಳಪಡಿಸಿದ್ದಾರೆ.

Share with friends

Related Post

Leave a Reply

Your email address will not be published.